ಸಾತ್ವಿಕ ಸ್ವಭಾವದವರ ಪರಿಚಯ ಆಗಲಿದ್ದು, ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಬಹಳ ಕಾಲದಿಂದ ಇದ್ದ ಕೌಟುಂಬಿಕ ಸಮಸ್ಯೆಗಳು ನಿವಾರಣೆ ಆಗಲಿವೆ. ಸಂಗಾತಿ- ಮಕ್ಕಳ ಕೋರಿಕೆ ಮೇರೆಗೆ ಮನರಂಜನೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಬ್ಯಾಂಕ್ ಸಾಲಕ್ಕೆ ಪ್ರಯತ್ನಿಸಿದವರಿಗೆ ಪ್ರಗತಿ ಇದೆ.
ನಿಮಗಿಂತ ಕಿರಿಯರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಇದರಿಂದ ನಿಮ್ಮೊಳಗೆ ಉತ್ಸಾಹ ಹೆಚ್ಚಾಗಲಿದೆ. ಸ್ವತಂತ್ರ ಆಲೋಚನೆ ಮೂಲಕ ಇತರರ ಮೆಚ್ಚುಗೆ ಗಳಿಸಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಕೆಮ್ಮು- ಕಫದಂಥ ಆರೋಗ್ಯ ಸಮಸ್ಯೆ ಕಾಡಬಹುದು.
ನಿಮ್ಮ ಸಮಯಪ್ರಜ್ಞೆ, ಬುದ್ಧಿವಂತಿಕೆಗೆ ಸೂಕ್ತ ವೇದಿಕೆ ದೊರೆಯಲಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನವಾಗಿರುತ್ತದೆ. ಸಂಸಾರದ ಗುಟ್ಟನ್ನು ಯಾರ ಜತೆಗೆ ಹಂಚಿಕೊಳ್ಳದಿರಿ. ವಾಹನ ಚಾಲನೆ ಮಾಡುವ ವೇಳೆ ಏಕಾಗ್ರತೆಯಿಂದ ಇರಬೇಕು. ಕಿರು ಪ್ರವಾಸ ಯೋಗ ಇದೆ.
ಇತರರ ಒತ್ತಡಕ್ಕೆ ಮಣಿದು, ಇಷ್ಟವಿಲ್ಲದ ಕೆಲಸ ಮಾಡಬೇಕಾಗುತ್ತದೆ. ಇದರಿಂದ ಮಾನಸಿಕವಾಗಿ ಕುಗ್ಗುತ್ತೀರಿ. ಹಣಕಾಸಿನ ಸಮಸ್ಯೆಯನ್ನು ಇತರರಲ್ಲಿ ಹೇಳಿಕೊಂಡರೆ ಅವರು ನಿಮ್ಮನ್ನು ಮೂದಲಿಸುವ ಸಾಧ್ಯತೆ ಇದೆ. ಸಾಧ್ಯವಾದಷ್ಟೂ ಯೋಗ್ಯರ ಬಳಿ ಮಾತ್ರ ಸಹಾಯವನ್ನು ಕೇಳಿ, ಪಡೆಯಿರಿ.
ಸಹೋದ್ಯೋಗಿಗಳಿಗೆ ಈ ದಿನ ನಿಮ್ಮ ಅಗತ್ಯ ವಿಪರೀತ ಹೆಚ್ಚಿರುತ್ತದೆ. ಸಣ್ಣ- ಪುಟ್ಟ ವಿಷಯಗಳಿಗೂ ನಿಮ್ಮ ಸಲಹೆ- ಸೂಚನೆ ಕೇಳುತ್ತಾರೆ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವುದು ಸಾಧ್ಯವಾಗುವುದಿಲ್ಲ. ಇತರರ ಭರವಸೆ ಮಾತುಗಳನ್ನು ನಂಬಿಕೊಂಡು, ದುಡ್ಡು ಕೊಡುವ ಮಾತನ್ನು ನೀಡಬೇಡಿ.
ದೂರ ಪ್ರಯಾಣ ಮಾಡಬೇಕಾಗಬಹುದು. ವೃತ್ತಿನಿರತರಿಗೆ ಹೆಚ್ಚಿನ ಆದಾಯ ಮೂಲ ದೊರೆಯಲಿವೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಾಮಾಜಿಕವಾಗಿ ಬಿಡುವಿಲ್ಲದ ದಿನ ಇದಾಗಿರುತ್ತದೆ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಇದರಿಂದ ನಿಮ್ಮ ಬಗ್ಗೆ ಗೌರವ ಹೆಚ್ಚಾಗಲಿದೆ.
ಬ್ಯೂಟಿ ಪಾರ್ಲರ್, ಸಲೂನ್ ಗೆ ತೆರಳುವವರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸಿ. ಇಲ್ಲದಿದ್ದಲ್ಲಿ ಅಲರ್ಜಿಯಂಥ ಸಮಸ್ಯೆಗಳಾಗಬಹುದು. ಮಕ್ಕಳ ಓಡಾಟದ ಕಡೆಗೆ ಎಚ್ಚರಿಕೆ ಇರಬೇಕು. ಇಲ್ಲದಿದ್ದಲ್ಲಿ ಬಿದ್ದು, ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ ಇದೆ. ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೀರಿಸಿಕೊಳ್ಳಬೇಡಿ.
ಗುರು- ಹಿರಿಯರ ಮೇಲೆ ಗೌರವ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದರೆ ಆ ಬಗ್ಗೆ ಶುಭ ವಾರ್ತೆ ಕೇಳಿಬರಲಿದೆ. ಆಹಾರ ಪಥ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಅಗತ್ಯ ಕಂಡುಬಂದಲ್ಲಿ ವೈದ್ಯರನ್ನು ಭೇಟಿಯಾಗುವುದು ಉತ್ತಮ. ಆದಾಯ ಮೂಲದಲ್ಲಿ ಹೆಚ್ಚಳ ಆಗಲಿದೆ.
ಯಾವುದೇ ಕೆಲಸದ ಬಗ್ಗೆ ತಾತ್ಸಾರ ಮನೋಭಾವ ಬೇಡ. ಚಂಚಲಚಿತ್ತರಾಗಿ ನಿರ್ಧಾರ ತೆಗೆದುಕೊಂಡಲ್ಲಿ ಅದರ ಫಲಿತಾಂಶವನ್ನು ಬಹಳ ಕಾಲ ಅನುಭವಿಸಬೇಕಾಗುತ್ತದೆ. ಯಾವುದೇ ಕೆಲಸದಲ್ಲಿ ಆತುರ ಮಾಡಿಕೊಳ್ಳಬೇಡಿ. ನಿಮ್ಮನ್ನು ಕಂಡರೆ ಆಗದ ಕೆಲವರು ದಾರಿ ತಪ್ಪಿಸುವ ಸಾಧ್ಯತೆ ಇದೆ.
ಉದ್ಯೋಗ ವಿಚಾರದಲ್ಲಿ ಒತ್ತಡ ಹೆಚ್ಚಾಗಲಿದೆ. ಮೇಲಧಿಕಾರಿಗಳು ನಿರೀಕ್ಷೆ ಮಾಡುವ ಮಟ್ಟಕ್ಕೆ ಫಲಿತಾಂಶ ನೀಡುವುದು ಕಷ್ಟವಾಗುತ್ತದೆ. ಈ ಸಂದರ್ಭದಲ್ಲಿ ನೀವು ನೀಡುವ ಕಾರಣವನ್ನು ಒಪ್ಪಲು ಅವರು ಸಿದ್ಧರಿರುವುದಿಲ್ಲ. ನಿರೀಕ್ಷೆ ಮಾಡಿದ ಮಟ್ಟಿಗೆ ಆದಾಯ ಇಲ್ಲದೆ ಬೇಸರ ಆಗಲಿದೆ.
ಮಕ್ಕಳ ಪ್ರಗತಿಯಿಂದ ಸಂತೋಷ ಉಂಟಾಗುತ್ತದೆ. ನಿಮ್ಮೊಳಗೆ ಆತ್ಮವಿಶ್ವಾಸ ಹೆಚ್ಚಾಗಲಿದೆ. ಭೂಮಿ ಅಥವಾ ಆಸ್ತಿ ಖರೀದಿ ವ್ಯವಹಾರಗಳಲ್ಲಿ ಪ್ರಗತಿ ಇದೆ. ನೀವು ಕೈಗೊಳ್ಳುವ ತೀರ್ಮಾನದಿಂದ ಲಾಭ ಆಗಲಿದೆ. ಬಟ್ಟೆ ವ್ಯಾಪಾರಿಗಳು ವ್ಯಾಪಾರ ವಿಸ್ತರಣೆಗೆ ಪ್ರಯತ್ನಿಸುವ ಯೋಗ ಇದೆ.
ಕೆಲಸದಲ್ಲಿ ಮುಂಚಿನ ಉತ್ಸಾಹ ಇರುವುದಿಲ್ಲ. ದೇಹಾಯಾಸದಿಂದ ವಿಶ್ರಾಂತಿ ಪಡೆಯುವುದಕ್ಕೆ ಮನಸ್ಸು ಬಯಸುತ್ತದೆ. ಪ್ರೀತಿಪಾತ್ರರ ಕೆಲವು ಮಾತಿನಿಂದ ಮನಸ್ಸಿಗೆ ಬೇಸರ ಆಗುತ್ತದೆ. ಇತರರು ನಿಮ್ಮ ಬಗ್ಗೆ ಮನೆಯಲ್ಲಿ ಚಾಡಿ ಹೇಳುವ ಸಾಧ್ಯತೆ ಇದೆ. ಸಾಧ್ಯವಾದಷ್ಟೂ ಈ ದಿನ ಪಾರದರ್ಶಕವಾಗಿ ಇರಿ.
Tags:
ದಿನ ಭವಿಷ್ಯ