ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ವ್ಯವಹಾರದಲ್ಲಿ ಹಿನ್ನಡೆ ಇದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ. ಶಿವನ ಆರಾಧನೆ ಮಾಡಿ, ಯಾವುದೇ ಮುಖ್ಯ ಕೆಲಸದಲ್ಲಿ ಮುಂದುವರಿಯಿರಿ. ಸ್ತ್ರೀಯರ ವಿಷಯವಾಗಿ ಹಗುರವಾಗಿ ಮಾತನಾಡಬೇಡಿ. ಕರಿದ ಪದಾರ್ಥಗಳು, ಮಸಾಲೆಯುಕ್ತ ಆಹಾರ ಸೇವನೆ ಮಾಡಬೇಡಿ.
ಲೇವಾದೇವಿ ವ್ಯವಹಾರ ಮಾಡುವವರು ಬರಬೇಕಾದ ಹಣಕ್ಕೆ ಪ್ರಯತ್ನಿಸಿ. ಶ್ರಮಪಟ್ಟು ಯತ್ನಿಸಿದರೆ ಬರುವ ಸಾಧ್ಯತೆ ಇದೆ. ಗುರು- ಹಿರಿಯರ ಆಶೀರ್ವಾದ ನಿಮ್ಮ ಮೇಲೆ ಇದೆ. ದೂರದ ಸಂಬಂಧಿಗಳು ಅಥವಾ ಆಪ್ತ ಸ್ನೇಹಿತರು ಮನೆಗೆ ಬರುವ ಸಾಧ್ಯತೆ ಇದೆ. ನಿಮ್ಮಿಂದ ನೆರವು ಕೇಳಬಹುದು.
ಸೋದರ ಸಂಬಂಧಿಗಳ ನೆರವಿನಿಂದ ಮುಖ್ಯವಾದ ಕೆಲಸ- ಕಾರ್ಯಗಳನ್ನು ಮಾಡಲಿದ್ದೀರಿ. ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿಗಳನ್ನು ಗಡುವಿನೊಳಗೆ ಮುಗಿಸಲು ಪ್ರಯತ್ನಿಸಿ. ಇಲ್ಲದಿದ್ದಲ್ಲಿ ನಿಮ್ಮ ವರ್ಚಸ್ಸಿಗೆ ಹಾನಿ ಆಗಬಹುದು. ನೀವು ವಾಪಸ್ ಮಾಡಬೇಕಾದ ಸಾಲವನ್ನು ಹಿಂತಿರುಗಿಸಲು ಯತ್ನಿಸಿ.
ಸಂಭಾವನೆ ಅಥವಾ ಸಂಬಳದ ವಿಚಾರಕ್ಕೆ ಮನಸ್ತಾಪ ಎದುರಾಗಬಹುದು. ದೂರದ ಸ್ಥಳಕ್ಕೆ, ಬೇಡದ ಜಾಗಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಮೇಲಧಿಕಾರಿಗಳ ಜತೆ ಮಾತುಕತೆ ನಡೆಸುವಾಗ ಎಚ್ಚರಿಕೆಯಿಂದ ಇರಬೇಕು. ಸಾಧ್ಯವಾದಷ್ಟೂ ಮೌನದಿಂದ ಇರಬೇಕು, ಸಮಸ್ಯೆಗಳನ್ನು ತಡೆಯಬಹುದು.
ನಿಮ್ಮ ಸಾಮರ್ಥ್ಯದ ಪರಿಚಯ ಇತರರಿಗೆ ಆಗಲಿದೆ. ಸ್ವಂತ ಉದ್ಯಮ ಮಾಡುತ್ತಿರುವವರಿಗೆ ಏಳ್ಗೆ ಹಾಗೂ ಪ್ರಗತಿ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಅದಕ್ಕಾಗಿ ಹಣಕಾಸು ಕೂಡ ಅಗತ್ಯ ಪ್ರಮಾಣದಲ್ಲಿ ಹೊಂದಾಣಿಕೆ ಆಗಲಿದೆ. ಅನಿರೀಕ್ಷಿತವಾದ ಧನಾಗಮ ಇದೆ.
ವಾಹನ ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ಬ್ಯಾಂಕ್ ವ್ಯವಹಾರಗಳು ಸಲೀಸಾಗಿ ಆಗಲಿವೆ. ಆಪ್ತರ ಜತೆಗೆ ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ಆಗಬಹುದು. ನಿರಂತರವಾದ ಪ್ರಯತ್ನದಿಂದ ಸಾಕಷ್ಟು ಕೆಲಸಗಳನ್ನು ಮಾಡಲಿದ್ದೀರಿ. ಸಂಗಾತಿ- ಮಕ್ಕಳ ಸಲಹೆಗಳನ್ನು ಕೇಳಿಸಿಕೊಂಡು, ಪಾಲಿಸಿ.
ಲೆಕ್ಕಾಚಾರದ ನಡೆಗಳು ಫಲ ನೀಡುತ್ತವೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವೇತನ ಹೆಚ್ಚಳ, ಬಡ್ತಿ ಬಗ್ಗೆ ಸುದ್ದಿ ಕೇಳಿಬರಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಿದ್ದು, ಹೊಸ ವಸ್ತ್ರಾಭರಣ ಖರೀದಿ ಯೋಗ ಇದೆ.
ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸ್ನೇಹಿತರು, ಸಂಬಂಧಿಗಳಿಂದ ಸಲಹೆ- ಮಾರ್ಗದರ್ಶನ ದೊರೆಯಲಿದೆ. ನಿಮ್ಮ ಸಹೋದ್ಯೋಗಿಗಳ ಜತೆಗೆ ಸ್ನೇಹದಿಂದ ವರ್ತಿಸಿ. ಅವರ ಸಮಸ್ಯೆಗಳನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ಕೆಲಸ ಇರುತ್ತದೆ.
ಕಂಡೂ ಕಂಡು ಮೋಸ ಹೋಗುವ ಸಾಧ್ಯತೆಗಳು ಇವೆ. ಆದ್ದರಿಂದ ಹೆಚ್ಚಿನ ಬಡ್ಡಿ ಆಸೆಗೆ ಹಣ ನೀಡಬೇಡಿ. ವಂಚಕರ ನಯವಾದ ಮಾತುಗಳಿಗೆ ಬಲಿ ಬೀಳಬೇಡಿ. ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಸರಳ ಸಂಗತಿಗಳು ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ.
ಸ್ವಂತ ಮನೆ ಕಟ್ಟಬೇಕು ಎಂದಿರುವವರಿಗೆ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟವಾಗಬಹುದು. ಸಾಲ ತೆಗೆದುಕೊಳ್ಳುವ ವಿಚಾರದಲ್ಲಿ ಹೀಗೆ ಎಂದು ತೀರ್ಮಾನ ಮಾಡುವುದಕ್ಕೆ ನಾನಾ ಬಗೆಯಲ್ಲಿ ಸವಾಲುಗಳು ಎದುರಾಗಲಿವೆ. ಉದ್ಯೋಗ ವಿಚಾರದಲ್ಲಿ ಅಂದುಕೊಂಡಂಥ ಫಲಿತಾಂಶ ಸಿಗುವುದಿಲ್ಲ.
ನೇರವಂತಿಕೆ ಕಾರಣಕ್ಕೆ ಬೇರೆಯವರು ನಿಮ್ಮನ್ನು ಮೆಚ್ಚಿಕೊಳ್ಳುತ್ತಾರೆ. ಸ್ವಾತಂತ್ರ್ಯವನ್ನು ಅನುಭವಿಸಲಿದ್ದೀರಿ. ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡ ಹೆಚ್ಚಾಗಲಿದೆ. ಕ್ಷುಲ್ಲಕ ಸಂಗತಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಇದರಿಂದ ಮನಸ್ತಾಪ ಆಗಬಹುದು. ಅದಕ್ಕೆ ಅವಕಾಶ ನೀಡಬೇಡಿ.
ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಇದೆ. ನೀವಾಗಿ ಮುಂದಕ್ಕೆ ಹೆಜ್ಜೆ ಇಟ್ಟು, ಮುಖ್ಯ ಕೆಲಸಗಳನ್ನು ಮಾಡಲಿದ್ದೀರಿ. ಶುಭ ಕಾರ್ಯಗಳನ್ನು ನಡೆಸಲು ಉಳಿತಾಯದ ಹಣವನ್ನು ತೆಗೆಯಬೇಕಾಗಬಹುದು. ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ.
Tags:
ದಿನ ಭವಿಷ್ಯ














