ಪಾಕ್ ತಂಡದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿಧಿಗೆ ಕೊರೋನಾ ಸೋಂಕು ಧೃಡ.
ಪಾಕ್ ತಂಡದ ಖ್ಯಾತ ಕ್ರಿಕೆಟಿಗ ಶಾಹಿದ್ ಅಫ್ರಿಧಿಗೆ ಕೊರೋನಾ ಸೋಂಕು ಧೃಡ.
ಪಾಕಿಸ್ತಾನದಲ್ಲಿ ಕೊರೊನಾ ತನ್ನ ಪ್ರಭಾವವನ್ನು ಈಗಾಗಲೇ ಬೀರುತ್ತಿದೆ. ಪಾಕಿಸ್ತಾನದಲ್ಲಿ ಕೂಡ ಕೊರೊನಾ ವೈರಸ್ನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಈಗಾಗಲೇ ಅಲ್ಲಿನ ಮಾಜಿ ಕ್ರಿಕೆಟ್ ಆಟಗಾರರು ಕೊರೊನಾ ಗೆ ಬಲಿಯಾಗಿದ್ದು ಕೂಡಾ ಮಾದ್ಯಮಗಳ ಸುದ್ದಿಯ ಮೂಲಕ ತಿಳಿದು ಬಂದಿತ್ತು. ಈಗ ಇದೆಲ್ಲದರ ಮಧ್ಯೆ ಇನ್ನೊಂದು ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ ಪಾಕ್ ನ ಇನ್ನೊಬ್ಬ ಕ್ರಿಕೆಟಿಗನಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಶಾಹಿದ್ ಅಫ್ರಿದಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು, ಈ ವಿಷಯವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಭಾರತೀಯ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿದ ಪಾಕಿಸ್ತಾನದ ಪಾಕಿ ಇಮ್ರಾನ್ ಖಾನ್
ಗುರುವಾರದ ದಿನ ತನಗೆ ಅತಿ ಅನಾರೋಗ್ಯ ಕಾಡಿದ್ದು ಅದಕ್ಕಾಗಿ ನಾನು ಆಸ್ಪತ್ರೆಗೆ ಕಾಣಿಸಿದಾಗ ನನಗೆ ವೈರಸ್ ಸೋಂಕು ಇರುವುದು ದೃಡಪಟ್ಟಿದೆ. ಇದು ಆದಷ್ಟು ಬೇಗ ಗುಣವಾಗಲಿ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸಿ ಮನವಿ ಮಾಡಿರುವುದಾಗಿ ತಮ್ಮ ಅಭಿಮಾನಿಗಳಿಗೆ ಸೋಂಕಿನ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಅಭಿಮಾನಿಗಳೆಲ್ಲರೂ ಶೀಘ್ರವಾಗಿ ಗುಣಮುಖವಾಗಲಿ ಎಂದು ಆರೈಕೆಯನ್ನು ಮಾಡುತ್ತಿದ್ದಾರೆ.
ಮೇ ತಿಂಗಳ ಆರಂಭದ ಸಮಯದಲ್ಲಿ ಶಾಹಿದ್ ಆಫ್ರಿದಿ ಅವರು ಬಾಂಗ್ಲಾದೇಶದ ಮುಶ್ಕೀರ್ ರಹೀಮ್ ಅವರ ಬ್ಯಾಟನ್ನು ಹರಾಜಿನಲ್ಲಿ ಖರೀದಿ ಮಾಡಿದ್ದರು. ಇದಷ್ಟೇ ಅಲ್ಲದೆ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಹಣವನ್ನು ಕೂಡ ನೀಡಿದ್ದರು, ಅದಲ್ಲದೆ ಸಂಕಷ್ಟಕ್ಕೆ ಒಳಗಾದವರಿಗೆ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದರ ಮೂಲಕ ಜನಸೇವೆಯ ಕಾರ್ಯಗಳನ್ನು ಮಾಡುತ್ತಿದ್ದರು
___________________________________________
ಚೀನಾ ತನ್ನ ಭದ್ರತಾ ಕಾಯಿದೆಯನ್ನು ಜಾರಿಗೆ ತರಲು ನಡೆಸುತ್ತಿರುವ ಪ್ರಯತ್ನವನ್ನು ವಿರೋಧಿಸಿ ಹಾಂಕಾಂಗ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು. ಪ್ರತಿಭಟನೆ ಇನ್ನೂ ತೀವ್ರ ಸ್ವರೂಪವನ್ನು ಪಡೆದಿದ್ದು ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನ ಕಿತ್ತು ಎಸೆದಿದ್ದಾರೆ.
ಪ್ರತಿಭಟನಾಕಾರರು ಅಂಗಡಿಗಳಿಗೆ ನುಗ್ಗಿ ಚೀನಾ ದೇಶದಿಂದ ಆಮದು ಮಾಡಿಕೊಂಡ ಚೀನಾಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಹೋರಾಟ ಪ್ರಜಾಪ್ರಭುತ್ವದ ಪರವಾಗಿ ನಡೆಯುತ್ತಿರುವ ಹೋರಾಟ ಇದು ಇನ್ನೂ ಕೂಡ ಮುಂದುವರೆಯುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಚೀನಾ ಸರ್ಕಾರದ ವಿರುದ್ಧದ ಪ್ರತಿಭಟನೆ ಮುಂದುವರಿಸೋದಾಗಿ ತಿಳಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಅಶ್ರುವಾಯು ಉಪಯೋಗಿಸಿದರು ಆದರೂ ಅದರಿಂದ ಏನೂ ಪ್ರಯೋಜನವಾಗಲಿಲ್ಲ .
ಚೀನಾ ದೇಶದ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳು ಕೆಂಡಾಮಂಡಲವಾಗಿದೆ. ಕೊರಣ ಮಹಾಮಾರಿಯ ನಂತರ ಚೀನಾ ದೇಶದ ದೇಶದ ಬಗೆಗಿನ ಒಲವು ಮಾಯವಾಗುತ್ತ ಬಂದಿದೆ. ಇದಕ್ಕೆ ತದ್ವಿರುದ್ಧವಾಗಿ ಎಲ್ಲಾ ರಾಷ್ಟ್ರಗಳು ನಮ್ಮ ಹೆಮ್ಮೆಯ ದೇಶವಾದ ಭಾರತಕ್ಕೆ ಹತ್ತಿರವಾಗುತ್ತಿದೆ.
ಜೈ ಹಿಂದ್ ಜೈ ಭಾರತ್ !!! ನಮ್ಮನ್ನು ಸಪೋರ್ಟ್ ಮಾಡಲು ಪೇಜ್ ಲೈಕ್ ಮಾಡಿ
__________________________________________
ಬೆಂಗಳೂರು, ಜೂನ್ 3: ಅಬಕಾರಿ ಇಲಾಖೆಯು ವೈನ್ ಅಂಗಡಿಗಳಲ್ಲಿ ಮದ್ಯ ಮಾರಾಟಕ್ಕೆ ನೀಡಿರುವ ಷರತ್ತುಬದ್ಧ ಅನುಮತಿಯನ್ನು ಜೂನ್ 30 ರವರೆಗೆ ವಿಸ್ತರಿಸಿದೆ. ಇದಲ್ಲದೆ, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಸಮಯವನ್ನು ರಾತ್ರಿ 9 ರವರೆಗೆ ವಿಸ್ತರಿಸಿದೆ.
ಮೇ 2 ರಿಂದ ಹಂತಹಂತವಾಗಿ ಲಾಕ್‌ಡೌನ್ ಪರಿಸ್ಥಿತಿಗಳನ್ನು ಸಡಿಲಿಸಿದ ನಂತರ, ಇಲಾಖೆ ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿತ್ತು. ಜೂನ್ 1 ರಿಂದ ಜಾರಿಗೆ ಬಂದ ಲಾಕ್‌ಡೌನ್ 5.0 ರ ಮಾರ್ಗಸೂಚಿಗಳ ಪ್ರಕಾರ, ರಾತ್ರಿ ಕರ್ಫ್ಯೂ ಅವಧಿಯನ್ನು ರಾತ್ರಿ 9 ರಿಂದ ಬೆಳಿಗ್ಗೆ 5 ರವರೆಗೆ ಸೀಮಿತಗೊಳಿಸಲಾಗಿದೆ. ಆದ್ದರಿಂದ, ಅಬಕಾರಿ ಇಲಾಖೆಯು ಪ್ರತಿದಿನ ಬೆಳಿಗ್ಗೆ 9 ರಿಂದ ರಾತ್ರಿ 9 ರವರೆಗೆ ಮದ್ಯ ಮಾರಾಟ ಸಮಯವನ್ನು ವಿಸ್ತರಿಸಿದೆ.
ಪಾರ್ಸೆಲ್‌ಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿಸಲಾಗುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕರೋನವೈರಸ್ ಸೋಂಕಿನ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಯಮಗಳು ಇತರ ಷರತ್ತುಗಳೊಂದಿಗೆ ಮುಂದುವರಿಯುತ್ತದೆ ಎಂದು ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಸಣ್ಣ ಪ್ರಮಾಣದ ಬಿಯರ್ ತಯಾರಕರು ಇನ್ನು ಮುಂದೆ ತಾಜಾ ಬಿಯರ್ ತಯಾರಿಸಬಹುದು ಎಂದು ಅಬಕಾರಿ ಆಯುಕ್ತರು ಹೇಳಿದ್ದಾರೆ. ಹಿಂದೆ, ಸಣ್ಣ ಪ್ರಮಾಣದ ಉತ್ಪನ್ನಗಳಿಂದ ಮೇ 31 ರವರೆಗೆ ತಯಾರಿಸಿದ ಬಿಯರ್ ಅನ್ನು ಮಾರಾಟ ಮಾಡಲು ಅನುಮತಿಸಲಾಗಿತ್ತು. ಈಗ, ಹೊಸದಾಗಿ ಬಿಯರ್ ತಯಾರಿಸಲು ಅನುಮತಿ ನೀಡಲಾಗಿದೆ.