ಆಹಾರ ಪಥ್ಯದ ಕಡೆಗೆ ಹೆಚ್ಚಿನ ಗಮನ ನೀಡಿ. ಬೇರೆಯವರ ವೈಯಕ್ತಿಕ ವಿಚಾರದಲ್ಲಿ ಮಧ್ಯಪ್ರವೇಶಿಸಬೇಡಿ. ಮಕ್ಕಳ ಪ್ರಗತಿಗಾಗಿ ಹೆಚ್ಚು ಶ್ರಮ ಹಾಕುತ್ತೀರಿ. ದೂರ ಪ್ರಯಾಣಕ್ಕಾಗಿ ಸಿದ್ಧತೆ ನಡೆಸಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಅನಿರೀಕ್ಷಿತವಾದ ಬೆಳವಣಿಗೆ ನಡೆದು, ನಿಮಗಿರುವ ಪ್ರಾಧಾನ್ಯ ಕಡಿಮೆ ಆಗಬಹುದು.
ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಸಾಲ ಮರುಪಾವತಿ ವಿಚಾರವಾಗಿ ವೈಮನಸ್ಯ ಎದುರಾಗಬಹುದು. ಇಷ್ಟು ಸಮಯ ಕಾಯ್ದುಕೊಂಡಿದ್ದ ತಾಳ್ಮೆಯು ಹದ್ದು ಮೀರುವ ಸಾಧ್ಯತೆ ಇದೆ. ನೀವಾಗಿಯೇ ವಹಿಸಿಕೊಂಡ ಕೌಟುಂಬಿಕ ಜವಾಬ್ದಾರಿಗಳನ್ನು ಪೂರೈಸುವ ಕಡೆಗೆ ಗಮನ ನೀಡಬೇಕು.
ಈ ಹಿಂದೆ ನೀವು ಪ್ರಸ್ತಾವ ಮಾಡಿದ್ದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸೂಕ್ತ ವೇದಿಕೆ ದೊರೆಯಲಿದೆ. ಅಂದುಕೊಳ್ಳದ ರೀತಿಯಲ್ಲಿ ಹಣಕಾಸಿನ ಹರಿವು ಹೆಚ್ಚಾಗಲಿದೆ. ವ್ಯಾಪಾರಿಗಳು- ಉದ್ಯಮಿಗಳಿಗೆ ವಿಸ್ತರಣೆಗೆ ಅವಕಾಶ ಕಾಣಿಸುತ್ತವೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾಗಬಹುದು, ಎಚ್ಚರ.
ನಿಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಆತುರವಾಗಿ ಎಲ್ಲ ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನದಲ್ಲಿ ಮುಖ್ಯ ಸಂಗತಿಗಳನ್ನು ಮರೆಯುವ ಸಾಧ್ಯತೆ ಇದೆ. ಆದ್ದರಿಂದ ಈ ದಿನ ತಾಳ್ಮೆ, ಸಂಯಮ ಬಹಳ ಮುಖ್ಯ. ಹೊಸದಾಗಿ ಪರಿಚಯ ಆದವರ ಜತೆಗೆ ಸಲುಗೆ ಒಳ್ಳೆಯದಲ್ಲ.
ಒಳ್ಳೆ ಹಾಗೂ ಕೆಟ್ಟ ಸುದ್ದಿ ಎರಡನ್ನೂ ಕೇಳುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆದರೆ ಅದನ್ನು ನಿರ್ವಹಿಸುವುದು ಸವಾಲಾಗಿ ಪರಿಣಮಿಸಲಿದೆ. ಇದರಲ್ಲಿ ನೀವು ಯಶಸ್ಸು ಕಂಡರೆ ಭವಿಷ್ಯಕ್ಕೆ ಅನುಕೂಲ ಆಗಲಿದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಜತೆಗೆ ವಾಗ್ವಾದ ಮಾಡಬೇಡಿ.
ಮೂರನೇ ವ್ಯಕ್ತಿಗಳು ನಿಮ್ಮ ಉದ್ದೇಶವನ್ನೇ ಬದಲಿಸುವಂಥ ಮಾತುಗಳನ್ನು ಆಡಬಹುದು. ಇದರಿಂದ ನಿಮ್ಮ ಗುರಿಯನ್ನು ಬದಲಿಸಿಕೊಳ್ಳಬೇಡಿ. ಇತರರ ಮಾತುಗಳಲ್ಲೇ ಸತ್ಯ ಇದೆ ಎಂದು ಬಲವಾಗಿ ಅನಿಸಲಿದೆ. ಈ ಬಗ್ಗೆ ಎಚ್ಚರಿಕೆ ಇರಲಿ. ವ್ಯಾಪಾರ, ವ್ಯವಹಾರ ಹಾಗೂ ವೃತ್ತಿಪರರಿಗೆ ಲಾಭದ ಪ್ರಮಾಣ ಕಡಿಮೆ ಆಗುತ್ತದೆ.
ಸಮಸ್ಯೆಗಳು ನಿಮ್ಮನ್ನೇ ಹುಡುಕಿಕೊಂಡು ಬಂದಂತೆ ಭಾಸವಾಗುತ್ತದೆ. ಬಹಳ ಚಿಂತಿಸಿದ ಮಾತ್ರಕ್ಕೆ ಪರಿಹಾರ ದೊರೆಯುವುದಿಲ್ಲ. ತಾಳ್ಮೆ ಹಾಗೂ ಸಂಯಮದಿಂದ ಒಂದೊಂದಾಗಿ ನೀವೇ ಬಗೆಹರಿಸಿಕೊಳ್ಳಬೇಕು. ಸಾಂಸಾರಿಕ ವಿಚಾರದ ಕಡೆಗೆ ಹೆಚ್ಚಿನ ಗಮನ ನೀಡಿ. ಭಿನ್ನಾಭಿಪ್ರಾಯಗಳಿದ್ದಲ್ಲಿ ಬಗೆಹರಿಸಿಕೊಳ್ಳಿ.
ಮೇಲುನೋಟಕ್ಕೆ ಕಾಣುವುದನ್ನು ನಿಜ ಅಂದುಕೊಂಡು ಮುಂದಕ್ಕೆ ಹೆಜ್ಜೆ ಇಡಬೇಡಿ. ನಿಮ್ಮ ಮೇಲೆ ಅತಿ ದೊಡ್ಡ ಹಣಕಾಸಿನ ಜವಾಬ್ದಾರಿ ಬರಬಹುದು. ಮದುವೆ ಅಥವಾ ಬೇರೆ ಯಾವುದೋ ಕಾರ್ಯಕ್ರಮದ ಸಲುವಾಗಿ ಉಳಿತಾಯದ ಹಣವನ್ನು ಖರ್ಚು ಮಾಡಬೇಕಾದ ಸನ್ನಿವೇಶ ಎದುರಾಗಲಿದೆ.
ದೇವತಾರಾಧನೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ದೀರ್ಘ ಕಾಲದಿಂದ ಕಾಡುತ್ತಿದ್ದ ಗೊಂದಲಗಳು ಬಗೆಹರಿಯಲಿವೆ. ಸ್ನೇಹಿತರು- ಬಂಧುಗಳ ಜತೆಗೆ ಮಾತುಕತೆ ನಡೆಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಹಣದ ಅಗತ್ಯ ಕಂಡುಬಂದಲ್ಲಿ ಸಾಲ ಮಾಡುವ ಮುನ್ನ ತೀರಿಸುವ ಬಗ್ಗೆ ಆಲೋಚಿಸಿ.
ಈ ಹಿಂದಿನ ವೈಷಮ್ಯವನ್ನು ಮನಸಿನಲ್ಲಿ ಇಟ್ಟುಕೊಂಡು ನಿಮ್ಮ ಮೇಲೆ ಕೆಲವರು ಹಗೆ ತೀರಿಸಲು ಪ್ರಯತ್ನಿಸಬಹುದು. ಈ ಸವಾಲನ್ನು ಮೀರುವುದು ಬಹಳ ಮುಖ್ಯ ಆಗುತ್ತದೆ. ಯಾರೇ ರೇಗಿಸಿದರೂ ಹೀಯಾಳಿಸಿದರೂ ಅದರ ಹಿಂದಿನ ಮರ್ಮವನ್ನು ಅರಿತು, ವರ್ತಿಸಿ. ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಬಹುದು.
ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ಯಾವುದೇ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಡಿ. ದೂರ ಪ್ರಯಾಣದ ಯೋಗ ಇದ್ದು, ದೇಹಾಯಾಸ ನಿಮ್ಮನ್ನು ಕಾಡಲಿದೆ. ಈ ವರೆಗೆ ನೀವು ಕಾಪಾಡಿಕೊಂಡಿದ್ದ ವರ್ಚಸ್ಸು ಹಲವು ಕಡೆ ನೆರವಾಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳು ಇರುತ್ತವೆ.
ಗುರು- ಹಿರಿಯರ ಆಶೀರ್ವಾದ, ಅದೃಷ್ಟ ನಿಮ್ಮ ಪಾಲಿಗೆ ಇರಲಿದೆ. ಈ ಕಾರಣಕ್ಕೆ ನಿಮ್ಮ ಮಾತಿಗೆ ಮನ್ನಣೆ ಸಿಗಲಿದೆ. ಕಲಾವಿದರಿಗೆ, ವೈದ್ಯರಿಗೆ ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಗಳಿಗೆ ವಿಶೇಷವಾದ ದಿನ ಇದಾಗಿರುತ್ತದೆ. ಆದರೆ ವಾಹನದಲ್ಲಿ ವೇಗವಾದ ಚಾಲನೆ ಮಾಡಬಾರದು. ಮುಖ್ಯ ಕಾರ್ಯಕ್ರಮಗಳು ಇದ್ದಲ್ಲಿ ನಿಗದಿತ ಸಮಯಕ್ಕೂ ಮುಂಚೆ ಅಲ್ಲಿರಬೇಕು.
Tags:
ದಿನ ಭವಿಷ್ಯ