ಈಗಾಗಲೇ ಮಾಡಿಕೊಂಡಿರುವ ಒಪ್ಪಂದದಂತೆ ವ್ಯವಹಾರವನ್ನು ಪೂರೈಸಲು ಕಷ್ಟ ಆಗಬಹುದು. ಇಂಥದ್ದೇ ಸಂದರ್ಭಕ್ಕಾಗಿ ಎದುರು ನೋಡುತ್ತಿರುವ ವಿರೋಧಿಗಳು ನಿಮ್ಮನ್ನು ಹೀಯಾಳಿಸುತ್ತಾರೆ, ಮೂದಲಿಸುತ್ತಾರೆ. ಆದ್ದರಿಂದ ಆದ್ಯತೆ ಮೇಲೆ ಕೆಲಸ- ಕಾರ್ಯಗಳನ್ನು ಪೂರೈಸಿ.
ಯಾರದೋ ಮುಲಾಜಿಗೆ ಸಿಲುಕಿಕೊಂಡು ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ. ಕೈಯಿಂದ ಹಣ ಖರ್ಚು ಮಾಡಿಕೊಂಡಾದರೂ ನಿಮ್ಮ ಗೌರವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವಿರಿ. ಈ ಯತ್ನದಲ್ಲಿ ಸಾಲ ಮಾಡುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಆದರೆ ನಿಮ್ಮ ಸಂಯಮದ ಫಲವಾಗಿ ಹೆಚ್ಚಿನ ಒತ್ತಡ ಬೀಳುವುದಿಲ್ಲ.
ಇತರರ ಮೇಲೆ ನೀವಿಟ್ಟ ನಂಬಿಕೆ ಈ ದಿನ ಫಲ ನೀಡಲಿದೆ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಕಾಣಬಹುದು. ನಯವಾಗಿ ಕೆಲವರ ಜತೆ ವ್ಯವಹರಿಸಿ, ಹೆಚ್ಚಿನ ತಲೆನೋವಿಲ್ಲದಂತೆ ಕೆಲಸ ಮುಗಿಸಿಕೊಳ್ಳುತ್ತೀರಿ. ಸಹೋದ್ಯೋಗಿಗಳ ಬೆಂಬಲ ನಿಮ್ಮ ಪಾಲಿಗೆ ಇರಲಿದೆ.
ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಉಳಿತಾಯದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ದೀರ್ಘ ಕಾಲದಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ಸೂಕ್ತ ಔಷಧೋಪಚಾರ ದೊರೆಯಲಿದೆ.
ಉದ್ಯೋಗ ಸ್ಥಳದಲ್ಲಿ ಬಿಡುವಿಲ್ಲದಷ್ಟು ಕೆಲಸ ಎಂಬಂತೆ ಆಗುತ್ತದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಪೈಕಿ ಕೆಲವರು ನಿಮ್ಮ ವಿರುದ್ಧ ಇದ್ದಾರೆ ಎಂಬ ಅಂಶ ಗಮನಕ್ಕೆ ಬರುವ ಸಾಧ್ಯತೆ ಇದೆ. ಅಥವಾ ನೀವೇ ಈ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಬಹಳ ಮುಖ್ಯ ಎಂಬುದು ಗಮನದಲ್ಲಿ ಇರಲಿ.
ಕ್ರಿಯೇಟಿವ್ ಆಲೋಚನೆಗಳ ಮೂಲಕ ಇತರರ ಗಮನವನ್ನು ಸೆಳೆಯುವಿರಿ. ನೀವು ಅಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಸೋದರ- ಸೋದರಿಯರು ನೆರವು ಕೇಳಿಕೊಂಡು ಬರಬಹುದು. ಮುಖ್ಯವಾದ ದಾಖಲೆ- ಪತ್ರಗಳ ಕಡೆಗೆ ಹೆಚ್ಚಿನ ಗಮನ ನೀಡಿ. ಹೊಸಬರ ಜತೆಗೆ ವ್ಯವಹಾರ ಬೇಡ.
ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಯಾರ ಮಾತನ್ನೂ ಕೇಳದೆ ಅನಾಹುತ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಸ್ವಾತಂತ್ರ್ಯ, ಆಲೋಚನೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ ಎಂಬ ಚಿಂತೆ ಹಾಗೂ ಬೇಸರ ಅಗಬಹುದು. ಆದರೆ ಯಾವುದೇ ಕಾರಣಕ್ಕೂ ಇರುವ ಕೆಲಸವನ್ನು ಬಿಡುವ ಆಲೋಚನೆ ಬೇಡ.
ಸ್ನೇಹಿತರ ಸಲುವಾಗಿಯೇ ಹೆಚ್ಚು ಶ್ರಮ, ಸಮಯ, ಹಣ ಮೀಸಲಿಡಲಿದ್ದೀರಿ. ಬಡ್ತಿ ವಿಚಾರವಾಗಿ ಮೇಲಧಿಕಾರಿಗಳು ನಿಮ್ಮ ಜತೆ ಚರ್ಚೆ ನಡೆಸಬಹುದು. ಹೆಚ್ಚುವರಿಯಾಗಿ ನಿಮಗೆ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ಆಪ್ತರ ಸಲುವಾಗಿ ಇಷ್ಟವಿಲ್ಲದಿದ್ದರೂ ಕೆಲವು ಕೆಲಸಗಳನ್ನು ಮಾಡಬೇಕಾಗುತ್ತದೆ.
ಕರಿದ ಹಾಗೂ ಮಸಾಲೆ ಪದಾರ್ಥಗಳ ಸೇವನೆಯಿಂದ ದೂರ ಇರಿ. ಗುರು- ಹಿರಿಯರ ಸಲಹೆಗಳನ್ನು ಪಾಲಿಸಿ. ಬ್ಯಾಂಕ್ ವ್ಯವಹಾರಗಳ ಸಂದರ್ಭದಲ್ಲಿ ಅನುಭವಿಗಳಿಂದ ಮಾರ್ಗದರ್ಶನ ಪಡೆದುಕೊಳ್ಳುವುದು ಉತ್ತಮ. ತಲೆ ನೋವು- ಹಲ್ಲು ನೋವಿನಂಥ ಸಮಸ್ಯೆಗಳು ಕಾಡಬಹುದು.
ಪ್ರೀತಿಪಾತ್ರರ ಜತೆಗೆ ಸಣ್ಣಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯ, ಮನಸ್ತಾಪ ತಲೆದೋರಬಹುದು. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಉಲ್ಬಣವಾಗುವ ಸಾಧ್ಯತೆ ಇದೆ. ಮಾತ್ರೆ, ಔಷಧ ತೆಗೆದುಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಮೊದಲಿನ ಉತ್ಸಾಹದಲ್ಲಿ ಕೆಲಸ- ಕಾರ್ಯಗಳನ್ನು ಮಾಡುವುದು ಕಷ್ಟವಾಗಲಿದೆ.
ಬಂಧುಗಳು, ಸ್ನೇಹಿತರ ಆಗಮನ ಸಾಧ್ಯತೆ ಇದೆ. ಹಿರಿಯರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮುಖ್ಯವಾಗಿ ಜೀರ್ಣಾಂಗ ಸಮಸ್ಯೆಗಳು ಕಾಡಬಹುದು. ಮಕ್ಕಳ ಮದುವೆಗಾಗಿ ಪ್ರಯತ್ನ ಪಡುತ್ತಿರುವವರಿಗೆ ಸೂಕ್ತ ವಿವಾಹ ಪ್ರಸ್ತಾವಗಳು ಬರುವ ಸಾಧ್ಯತೆ ಇದೆ.
ಮಾಧ್ಯಮ ರಂಗದಲ್ಲಿ ಇರುವವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಉಳಿತಾಯದ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಅಥವಾ ಆಸ್ತಿ- ಭೂಮಿ ಖರೀದಿ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಈ ಬಗ್ಗೆ ಆಪ್ತರ ಜತೆ ಚರ್ಚೆ ನಡೆಸಲಿದ್ದೀರಿ. ದೂರದೃಷ್ಟಿ ಇರಿಸಿಕೊಂಡು ಮಾಡಿದ್ದ ಕೆಲಸಗಳು ಫಲ ನೀಡುತ್ತವೆ.
Tags:
ದಿನ ಭವಿಷ್ಯ