ವಿಶ್ವಸಂಸ್ಥೆಯ ತಾತ್ಕಾಲಿಕ ಸದಸ್ಯತ್ವ ಸ್ಥಾನಕ್ಕೆ ಭಾರತದ ಅವಿರೋಧ ಆಯ್ಕೆ ಬಹುತೇಕ ಖಚಿತವಾದ ಅಂತಿದೆ. ಯುನೈಟೆಡ್ ನೇಷನ್ಸ್‍ನ ಸೆಕ್ಯೂರಿಟಿಕೌನ್ಸಿಲ್ (ಯುಎನ್‍ಎಸ್‍ಸಿ)ನ ಐದು ತಾತ್ಕಾಲಿಕ ಸದಸ್ಯತ್ವಕ್ಕೆ ಜೂನ್ 17ರಂದು ಚುನಾವಣೆಯನ್ನು ನಡೆಸಲು ಸಂಯುಕ್ತ ರಾಷ್ಟ್ರಗಳ ವೇದಿಕೆಯು ಈಗಾಗಲೇ ನಿರ್ಧರಿಸಿದೆ.
ಏಷ್ಯಾ ಪೆಸಿಫಿಕ್ ವಲಯದಿಂದ ಭಾರತ ಏಕಮಾತ್ರ ಸ್ಪರ್ಧಿಯಾಗಿದೆ. ಇದರಿಂದಾಗಿ ಚುನಾವಣೆಯು ಕೇವಲ ಔಪಚಾರಿಕ ಪ್ರಕ್ರಿಯೆ ಆಗಿರಲಿದೆ. ಜಗತ್ತಿನಾದ್ಯಂತ ಕೊರೊನಾ ವೈರಸ್ ಹಾವಳಿ ಹಿನ್ನೆಲೆಯಲ್ಲಿ ಚುನಾವಣೆಗೆ ವಿಶ್ವಸಂಸ್ಥೆ ವಿಶೇಷ ವ್ಯವಸ್ಥೆ ಕೈಗೊಂಡಿದೆ.
ಇದರ ಸಂಬಂಧವಾಗಿ 193 ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಚುನಾವಣೆ ಪ್ರಕ್ರಿಯೆ ಕುರಿತು ವಿಶೇಷ ನಿರ್ಣಯ ಅಂಗೀಕರಿಸಲಾಗಿದೆ. ಏಷ್ಯಾ ಪೆಸಿಫಿಕ್ ವಲಯವನ್ನು ಪ್ರತಿನಿಧಿಸಲು ಭಾರತದ ನಾಮನಿರ್ದೇಶನಕ್ಕೆ 2021-22ನೇ ಸಾಲಿಗೆ ಕಳೆದ ವರ್ಷ ಜೂನ್ ನಲ್ಲಿಯೇ ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಜಗತ್ತಿನ ಇನ್ನಿತರ 55 ದೇಶಗಳು ಬೆಂಬಲ ನೀಡಿದ್ದವು.