![]() |
| Shri. Raghupati Bhat ( MLA) |
ಸಂದೀಪ್ ಮೇಸ್ತಾ ಮತ್ತು ಮಹೇಶ್ ಖಾರ್ವಿ ಇಬ್ಬರು ಬಂಧಿತರು. ಏಪ್ರಿಲ್ 2 ರಂದು ಇವರಿಬ್ಬರು ಬೆಂಗಳೂರಿನಿಂದ ಮನೆಗೆ ಬಂದಿದ್ದರು. ಸಂದೀಪ್ ಅವರನ್ನು 28 ದಿನಗಳ ಕಾಲ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು. ಕ್ಯಾರೆಂಟೈನ್ ಅವಧಿಯಲ್ಲಿ ಆತ ಅಲೆದಾಡುವುದನ್ನು ನೋಡಿದ ಆಶಾ ಕಾರ್ಯಕರ್ತೆ ಲಕ್ಷ್ಮಿ ಎಂಬುವವರು ಅವರಿಗೆ ಎಚ್ಚರಿಕೆಯನ್ನು ನೀಡಿದರು.
ಎಚ್ಚರಿಕೆ ನೀಡಿದ ನಂತರ ಕೋಪಗೊಂಡ ಸಂದೀಪ್, ತನ್ನ ಸ್ನೇಹಿತ ಮಹೇಶ್ ಖಾರ್ವಿ, ವೇಯ್ಲೇಡ್ ಲಕ್ಷ್ಮಿ ಜೊತೆ ಸೇರಿ ಅವಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ.
ಆಶಾ ಕಾರ್ಯಕರ್ತೆ ದೂರಿನ ಆಧಾರದ ಮೇಲೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂತರ ಇಬ್ಬರನ್ನು ಬಂಧಿಸಲಾಯಿತು.
__________________________________________________
ಉಡುಪಿ ಏಪ್ರಿಲ್ 22 : ಲಾಕ್ ಡೌನ್ ನಿಂದ ಐದು ವರ್ಷದೊಳಗಿನ ಮಕ್ಕಳಿಗೆ ವಿವಿಧ ಹಂತದಲ್ಲಿ ಮತ್ತು ಗರ್ಭಿಣಿಯರಿಗೆ ನೀಡಬೇಕಾದ ಚುಚ್ಚುಮದ್ದುಗಳನ್ನು ನಿಲ್ಲಿಸಲಾಗಿದ್ದು, ಇಂದಿನಿಂದ (ಗುರುವಾರ) ಎಂದಿನಂತೆ ಈ ಚುಚ್ಚುಮದ್ದುಗಳನ್ನು ನೀಡಲಾಗುವುದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಸೋಮವಾರ ದಿಂದ ಶನಿವಾರದ ವರೆಗೆ ಮತ್ತು ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಪ್ರತೀ ಗುರುವಾರ, 1.5, 2.5 3.5 ಮತ್ತು 9 ತಿಂಗಳು ಮಕ್ಕಳಿಗೆ ನೀಡುವ ವಿವಿಧ ಲಸಿಕೆಗಳು ಹಾಗೂ ಗರ್ಭಿಣಿಯರಿಗೆ ನೀಡಲಾಗುವ ಟಿಡಿ ಲಸಿಕೆಯನ್ನು ನೀಡಲಾಗುವುದು ಎಂದು ಡಾ. ಸೂಡಾ ತಿಳಿಸಿದ್ದಾರೆ.
ಇಡೀ ಊರಿನ ಖರ್ಚು ನೋಡಿಕೊಳ್ಳಬೇಕು: ಕೊರೊನಾ ಶಂಕಿತನಿಗೆ ಉಡುಪಿ ಡಿಸಿ ಫೈನ್
ಉಡುಪಿ: ಉಡುಪಿ ಜಿಲ್ಲೆಯ ಕಾಪು ಮೂಲದ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಬ್ಬನ ಮೇಲೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ತುಂಬಾನೇ ಗರಂ ಆಗಿದ್ದಾರೆ. ಆತನ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಗುಡುಗಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಲು ಹೋಗಿದ್ದಾನೆ. ಆತ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಕೂಡ ಆ ವ್ಯಕ್ತಿ ಹೊರಗಡೆ ಎಲ್ಲಾ ಕಡೆ ತಿರುಗಾಡಿದ್ದಾನೆ. ಆತನಿಂದ ಎಲ್ಲರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದು ಹೇಳಿದರು.
ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿಯೇ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸನ್ನು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆತನೊಬ್ಬನೇ ಅಲ್ಲ, ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದಲೂ ಕೂಡ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನನ್ನು ಉಲ್ಲಂಘಿಸಿದವರಿಗೆ ಎರಡು ವರ್ಷಗಳ ಕಾಲ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಅವರು ಹೇಳಿದರು.
