ಕಾರವಾರ, ಮೇ 03: ಕಾರವಾರದಲ್ಲಿ ಐಎನ್ಎಸ್ ಯುದ್ಧನೌಕೆ ವಿಕ್ರಮಾದಿತ್ಯ ದಲ್ಲಿ ಶನಿವಾರ ಸಂಜೆ ಸಿಡಿಮದ್ದುಗಳನ್ನು ಸಿಡಿಸಿ ವುದರ ಮೂಲಕ ಕೊರೊನಾ ವಾರಿಯರ್ಸ್ಗಳಿಗೆ ಕಾರವಾರದ ಸೀಬರ್ಡ್ ನೌಕಾನೆಲೆಯಲ್ಲಿ ಗೌರವವನ್ನು ಸಲ್ಲಿಸಲಾಯಿತು.
ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಡುತ್ತಿರುವ ಕೊರೊನಾ ಯೋಧರಾದ ವೈದ್ಯರು, ಶುಶ್ರೂಷಕರು, ಪೊಲೀಸರು ಮತ್ತು ನೈರ್ಮಲ್ಯ ಉದ್ಯೋಗಿಗಳಿಗೆ ಗೌರವವನ್ನು ಸಲ್ಲಿಸುವಂತೆ ಸೂಚನೆ ಬಂದಿದ್ದ ಕಾರಣ ಕಾರವಾರದ ಸೀಬರ್ಡ್ ನೌಕಾನೆಲೆ ವಿಕ್ರಮಾದಿತ್ಯ ದಲ್ಲಿ ವಿಶೇಷವಾಗಿ ಗೌರವವನ್ನು ಸಲ್ಲಿಸಲಾಯಿತು.
ರಾಷ್ಟ್ರದ ಅತಿದೊಡ್ಡ ಯುದ್ಧ ವಿಮಾನವಾಹಕ ನೌಕೆ ಎಂದೇ ಹೆಸರಾದ ಐಎನ್ಎಸ್ ವಿಕ್ರಮಾದಿತ್ಯ ವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಸಂಜೆವೇಳೆಗೆ ಸಿಡಿಮದ್ದುಗಳನ್ನು ಸಿಡಿಸಲಾಯಿತು.
#Karwar #INS Vikramaditya
