ಇಂದಿನ ಭವಿಷ್ಯ ಮೇ 04, 2020

Today astrology in kannada today horoscope in kannada
ಕೆಲಸ- ಕಾರ್ಯಗಳು ವೇಗ ಪಡೆದುಕೊಳ್ಳುತ್ತವೆ. ಆಪ್ತರ ಸಹಾಯದೊಂದಿಗೆ ವ್ಯಾಪಾರ- ವ್ಯವಹಾರಗಳಲ್ಲಿ ಪ್ರಗತಿ ಕಾಣುತ್ತೀರಿ. ಬ್ಯಾಂಕ್ ನಿಂದ ಸಾಲಕ್ಕಾಗಿ ಪ್ರಯತ್ನ ಮಾಡುವ ಸಾಧ್ಯತೆ ಇದೆ. ಮಹತ್ವದ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಪ್ರಯತ್ನವನ್ನು ತೀವ್ರಗೊಳಿಸುತ್ತೀರಿ.
Today astrology in kannada today horoscope in kannada
ಇತರರ ಚಾಡಿ ಮಾತನ್ನು ನಂಬಬೇಡಿ. ಸಂಗಾತಿ ಮೇಲೆ ಅನುಮಾನ ಪಡುವುದರಿಂದ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಬಾಯಿ ರುಚಿಗಾಗಿ ದೇಹದ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ. ಆಹಾರ ಪಥ್ಯದ ಬಗ್ಗೆ ಹೆಚ್ಚು ನಿಗಾ ಇರಲಿ. ಯಾರ ಮೇಲೂ ಹಠ ಸಾಧಿಸಬೇಡಿ. ಪರಿಸ್ಥಿತಿಗೆ ಅನುಗುಣವಾಗಿ ನಡೆದುಕೊಳ್ಳಿ.

Today astrology in kannada today horoscope in kannada
ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಎಂಥ ಸವಾಲಿನ ಸಂದರ್ಭ ಎದುರಾದರೂ ಬುದ್ಧಿವಂತಿಕೆಯಿಂದ ಎದುರಿಸಿ. ಬೇಡದ ವಿಷಯಗಳ ಕಡೆಗೆ ಗಮನ ನೀಡಬೇಡಿ. ಹೆಚ್ಚುವರಿ ಆದಾಯ ಮೂಲಕ್ಕೆ ಒಂದು ಅವಕಾಶ ದೊರೆಯಲಿದೆ. ಅದನ್ನು ಹೇಗೆ ಬಳಸಿಕೊಳ್ತೀರಿ ಎಂಬುದು ಮುಖ್ಯವಾಗುತ್ತದೆ.

Today astrology in kannada today horoscope in kannada
ಬಹಳ ದಿನಗಳಿಂದ ಕಾಡುತ್ತಿದ್ದ ಗೊಂದಲಕ್ಕೆ ತೆರೆ ಬೀಳಲಿದೆ. ನಿಮ್ಮಲ್ಲಿ ಆಗುವ ಸಕಾರಾತ್ಮಕ ಬದಲಾವಣೆಯನ್ನು ಗಮನಿಸಿ ಇತರರು ಅಚ್ಚರಿ ವ್ಯಕ್ತಪಡಿಸಲಿದ್ದಾರೆ. ದಾನ- ಧರ್ಮಾದಿ ಕಾರ್ಯಗಳ ಕಡೆಗೆ ಗಮನ ಹೋಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಚಟುವಟಿಕೆಯಿಂದ ಇರುವವರು ಪೋಸ್ಟ್, ಕಾಮೆಂಟ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada
ಗುರುಗಳ ಅನುಗ್ರಹದ ಅಗತ್ಯ ನಿಮಗೆ ಇದೆ. ಶಿವನ ಆರಾಧನೆ, ಸ್ಮರಣೆ ಮಾಡಿ. ಮನಸಿನ ಏಕಾಗ್ರತೆಗೆ ಪ್ರಯತ್ನಿಸಿ. ಸರ್ಕಾರದಿಂದ ಆಗಬೇಕಾದ ಕೆಲಸ- ಕಾರ್ಯಗಳಲ್ಲಿ ಸ್ವಲ್ಪ ತಡ ಆಗಲಿದೆ. ದೈನಂದಿನ ವ್ಯವಹಾರಗಳಲ್ಲಿ ಬದಲಾವಣೆ ತಂದುಕೊಳ್ಳಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ.

Today astrology in kannada today horoscope in kannada
ಅತ್ಯುತ್ಸಾಹ ಒಳ್ಳೆಯದಲ್ಲ. ನಿಮ್ಮ ಅಕ್ಕಪಕ್ಕದಲ್ಲಿ ಆಗುತ್ತಿರುವ ತ್ವರಿತ ಬದಲಾವಣೆಗಳಿಂದ ಆತಂಕಗೊಳ್ಳಬೇಡಿ. ನಿಮ್ಮನ್ನು ಬೇರೆ ಯಾರ ಜತೆಗೂ ಹೋಲಿಸಿಕೊಳ್ಳಬೇಡಿ. ಆತುರದಿಂದ ನಿರ್ಧಾರ ಕೈಗೊಂಡರೆ ಕೈಯಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ, ಎಚ್ಚರ. ಅನಿವಾರ್ಯ ಅಲ್ಲದಿದ್ದಲ್ಲಿ ದೊಡ್ಡ ಮೊತ್ತದ ಆನ್ ಲೈನ್ ವ್ಯವಹಾರಗಳನ್ನು ಈ ದಿನ ಮಾಡದಿರುವುದು ಉತ್ತಮ.

Today astrology in kannada today horoscope in kannada
ನಿಮಗೆ ಮರೆವಿನ ಸಮಸ್ಯೆ ಕಾಡಬಹುದು. ಯಾರಿಗೂ ಸಾಲಕ್ಕೆ ಜಾಮೀನಾಗಿ ನಿಲ್ಲಬೇಡಿ. ಕೈ- ಕಾಲು ನೋವು, ಭುಜದ ನೋವಿನ ಸಮಸ್ಯೆ ಇರುವವರು ಸೂಕ್ತ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಇನ್ನಷ್ಟು ಸಮಯ ಕಾದುನೋಡೋಣ ಎಂಬ ಧೋರಣೆ ಒಳ್ಳೆಯದಲ್ಲ. ಹೊಸಬರ ಜತೆ ವ್ಯವಹಾರ ಮಾಡುವಾಗ ಜೋಪಾನ.

Today astrology in kannada today horoscope in kannada
ವೈವಾಹಿಕ ಜೀವನ ಸಂತುಷ್ಟವಾಗಿರುತ್ತದೆ. ಕುಟುಂಬದ ಅಗತ್ಯಗಳಿಗೆ ನೀವು ಸ್ಪಂದಿಸುವ ರೀತಿಗೆ ತಂದೆ- ತಾಯಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅನಗತ್ಯವಾದ ತಿರುಗಾಟ ಇರುವುದರಿಂದ ಯಾರನ್ನು ಭೇಟಿ ಆಗಬೇಕು ಅಂತಿದ್ದೀರಿ, ಅವರ ಲಭ್ಯತೆಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳುವುದು ಅತ್ಯುತ್ತಮ.

Today astrology in kannada today horoscope in kannada
ಬದಲಾವಣೆಗೆ ಹೊಂದಿಕೊಳ್ಳುವುದು ತುಸು ಕಷ್ಟವಾಗುತ್ತದೆ. ಆಪ್ತರೇ ನಿಮ್ಮ ಬಗ್ಗೆ ಕಟುವಾದ ವಿಮರ್ಶೆಗಳನ್ನು ಮಾಡುತ್ತಾರೆ. ಮೊಬೈಲ್ ಫೋನ್, ಲ್ಯಾಪ್ ಟಾಪ್ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಇಲ್ಲದಿದ್ದಲ್ಲಿ ಅವು ಕಳೆದುಹೋಗುವ ಸಾಧ್ಯತೆ ಇದೆ.

Today astrology in kannada today horoscope in kannada
ಮುಖ್ಯವಾದ ದಾಖಲೆ- ಪತ್ರಗಳು ಇಲ್ಲದೆ ಯಾವುದೇ ವಿಷಯವನ್ನು ಅಧಿಕಾರಯುತವಾಗಿ ಮಾತನಾಡುವುದು ತಪ್ಪು. ನಿಮ್ಮ ಒಳಮನಸ್ಸಿಗೆ ಈ ಅಂಶ ತಿಳಿಯುತ್ತದೆ ಮತ್ತು ಎಚ್ಚರಿಸುತ್ತದೆ. ಆ ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಅದರ ಪರಿಣಾಮದಿಂದ ವರ್ಚಸ್ಸಿಗೆ ಧಕ್ಕೆ ಆಗಬಹುದು.

Today astrology in kannada today horoscope in kannada
ತಂದೆ- ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಇತರರ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು. ಹಗುರವಾದ ಮಾತನಾಡಿ, ಆ ನಂತರ ಸಮಾಜದ ದೃಷ್ಟಿಯಲ್ಲಿ ನೀವೇ ಖಳರಂತೆ ಬಿಂಬಿಸಿಕೊಳ್ಳುತ್ತೀರಿ. ಸುಖಾಸುಮ್ಮನೆ ಜವಾಬ್ದಾರಿಯನ್ನು ಮೈಮೇಲೆ ಎಳೆದುಕೊಳ್ಳಬೇಡಿ. ನಿಗದಿಯ ಅವಧಿಯಲ್ಲಿ ಪೂರೈಸಲು ಕಷ್ಟವಾಗುತ್ತದೆ.

Today astrology in kannada today horoscope in kannada
ಸರ್ಕಾರದ ಉನ್ನತ ಸ್ಥಾನದ ಅಧಿಕಾರಿಗಳಿಗೆ ಬಿಡುವಿಲ್ಲದಷ್ಟು ಕೆಲಸವಾಗುತ್ತದೆ. ವಹಿಸಿಕೊಂಡ ಜವಾಬ್ದಾರಿಯನ್ನು ಪೂರೈಸುವುದೇ ಸವಾಲಾಗಿ ಪರಿಣಮಿಸುತ್ತದೆ. ಯಾರದೋ ತಪ್ಪಿಗೆ ನಿಮ್ಮನ್ನು ಹೊಣೆ ಮಾಡಬಹುದು. ಆದರೆ ನಿಮ್ಮ ಸಮಯಪ್ರಜ್ಞೆ, ಬುದ್ಧಿವಂತಿಕೆಯಿಂದ ಎಲ್ಲ ಸವಾಲನ್ನು ದಾಟುತ್ತೀರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement