ಮನೆಯ ಹಿರಿಯರ ಹೆಸರನ್ನು ಉಳಿಸುವಂಥ ಕೆಲಸ ಮಾಡುವ ಅವಕಾಶ ಒದಗಿಬರಲಿದೆ. ನಿಮ್ಮನ್ನು ಮೂದಲಿಸಿದವರು, ಹೀಯಾಳಿಸಿದವರು ಅಚ್ಚರಿ ಪಡುವ ರೀತಿಯಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದೀರಿ. ಆದರೆ ಮಕ್ಕಳ ಭವಿಷ್ಯದ ಸಲುವಾಗಿ ಸ್ವಲ್ಪ ಚಿಂತೆ ಕಾಡಲಿದೆ.
ಆರೋಗ್ಯ ಕಾಪಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ನೀಡಲಿದ್ದೀರಿ. ತಂದೆ- ತಾಯಿಗೆ ಕೊಟ್ಟ ಮಾತಿನಂತೆ ಕುಟುಂಬದ ಕೆಲವು ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದೀರಿ. ನಿಮ್ಮಿಂದ ಸಹಾಯ ಕೇಳುವವರಿಗೆ ಅಗತ್ಯ ನೆರವು ನೀಡಲಿದ್ದೀರಿ ಅಥವಾ ಅದು ಸಿಗಬಹುದಾದ ದಾರಿಯನ್ನು ತೋರಿಸಲಿದ್ದೀರಿ.
ಇತರರ ವೈಯಕ್ತಿಕ ವಿಚಾರಗಳಲ್ಲಿ ಯಾವುದೇ ಸಲಹೆ ನೀಡಲು ಹೋಗದಿರಿ. ಅದರಲ್ಳು ಮಹಿಳೆಯರ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಅವಮಾನದ ಪಾಲಾಗುತ್ತೀರಿ. ಹಳೆಯ ಸ್ನೇಹಿತರ ಜತೆಗೆ ಮಾತುಕತೆ ನಡೆಸುವುದರಿಂದ ಉತ್ಸಾಹ, ಚೈತನ್ಯ ಮೂಡುತ್ತದೆ.
ಯಾರನ್ನೋ ಅಪಾಯದಿಂದ ಉಳಿಸುವ ಪ್ರಯತ್ನದಲ್ಲಿ ನೀವು ಕಷ್ಟಕ್ಕೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನಿರ್ಧಾರಗಳನ್ನು ಕೈಗೊಳ್ಳುವಾಗ ಭಾವನಾತ್ಮಕವಾಗಿ ಆಲೋಚನೆ ಮಾಡದಿರಿ. ವಾಸ್ತವ ನೆಲೆಗಟ್ಟಿನಲ್ಲಿ ಮುಂದಿನ ಸಾಧಕ- ಬಾಧಕಗಳನ್ನು ಕೂಲಂಕಷವಾಗಿ ಲೆಕ್ಕ ಹಾಕಿಕೊಂಡ ಮೇಲೆ ಹೆಜ್ಜೆ ಇಡಿ.
ದೊಡ್ಡ ಯೋಜನೆಗಳು ನೀವು ಅಂದುಕೊಂಡಂತೆ ಮುನ್ನಡೆಯಲು ಪ್ರಯತ್ನ ಮಾಡುತ್ತೀರಿ. ನಿಮ್ಮ ಈ ಪ್ರಯತ್ನ ಯಶಸ್ಸಿನ ಕಡೆಗೆ ನಡೆಸಲಿದೆ. ಇತರರು ಅಚ್ಚರಿಯಿಂದ ಗಮನಿಸುವಂತಾಗಿದೆ. ಇತರರ ತಪ್ಪನ್ನು ಎದುರಾಎದುರು ಹೇಳಿಬಿಡುತ್ತೇನೆ. ನನಗೆ ಯಾರ ಮುಲಾಜು ಇಲ್ಲ ಎಂಬ ಧೋರಣೆ ಒಳ್ಳೆಯದಲ್ಲ.
ಹೇಗಾದರೂ ಖರ್ಚಿನ ಪ್ರಮಾಣ ಹೆಚ್ಚಾಗಲಿದೆ. ಹೊಸ ವಸ್ತು, ವಿಷಯ, ವಿಚಾರಗಳನ್ನು ಕಂಡು ಮೊದಲಿಗೆ ಮರುಳಾಗಬೇಡಿ. ಅದರಿಂದ ಏನು ಪ್ರಯೋಜನ ಎಂಬುದನ್ನು ಸಹ ಅನುಭವಿಗಳ ಜತೆಗೆ ಚರ್ಚಿಸಿ. ಮನೆಯಲ್ಲಿ ಸಾಧ್ಯವಾದರೆ ವಿಷ್ಣು ಸಹಸ್ರನಾಮವನ್ನು ಹೇಳಿಕೊಳ್ಳಿ. ಅಥವಾ ಕೇಳಿಸಿಕೊಳ್ಳಿ.
ಮಕ್ಕಳ ಭವಿಷ್ಯದ ಬಗ್ಗೆ ಧೈರ್ಯ ಮೂಡುತ್ತದೆ. ಮುಂದೇನು ಎಂಬ ಆತಂಕ ನಿವಾರಣೆ ಆಗುತ್ತದೆ. ದೂರದ ಪ್ರದೇಶಗಳಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಶುಭ ಸುದ್ದಿ ಇದೆ. ಸೋದರ- ಸೋದರಿಯರ ಜತೆಗೆ ಪಿತ್ರಾರ್ಜಿತ ಆಸ್ತಿ ವಿಚಾರದ ಬಗ್ಗೆ ಚರ್ಚೆ ನಡೆಸುವ ಯೋಗ ಇದೆ.
ಬಹಳ ದಿನಗಳಿಂದ ಕಾಡುತ್ತಿದ್ದ ಚಿಂತೆ ದೂರವಾಗಲಿದೆ. ಹೊಸ ಪರಿಹಾರ ಮಾರ್ಗಗಳು ಗೋಚರವಾಗಲಿವೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಅದಕ್ಕೆ ಖರ್ಚು ಮಾಡಬೇಕಾದ ಸಂದರ್ಭ ಸೃಷ್ಟಿ ಆಗಬಹುದು.
ಸಂಗಾತಿ- ಮಕ್ಕಳ ಪ್ರೀತಿಯಿಂದಾಗಿ ಮನಸ್ಸಿಗೆ ಬಹಳ ಸಂತೋಷ ಆಗಲಿದೆ. ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಸಮಯ ಸಿಗಲಿದೆ. ಮನರಂಜನೆಗಾಗಿ ಖರ್ಚು ಮಾಡಲಿದ್ದೀರಿ. ಆದರೆ ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಯಾವುದೇ ಹೊಸ ಸಾಲವನ್ನು ಮಾಡಬೇಡಿ.
ಕ್ರೆಡಿಟ್ ಕಾರ್ಡ್ ಬಳಸದೆ ಇರುವುದಕ್ಕೆ ಪ್ರಯತ್ನಿಸಿ. ಇತರರ ಹೊಗಳಿಕೆಯಿಂದ ಉಬ್ಬಿಹೋಗಿ, ಸಿಕ್ಕಾಪಟ್ಟೆ ಖರ್ಚು ಮಾಡಿದರೆ ನಿಮಗೇ ಸಮಸ್ಯೆ ಎದುರಾಗುತ್ತದೆ. ಭವಿಷ್ಯದ ಯೋಜನೆಗಳ ಬಗ್ಗೆ ಸ್ನೇಹಿತರು- ಸಂಬಂಧಿಕರ ಜತೆಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಯಾವುದೇ ನಿರ್ಧಾರದಲ್ಲೂ ಆತುರ ಮಾಡಬೇಡಿ.
ವಹಿಸಿಕೊಂಡ ಜವಾಬ್ದಾರಿಯನ್ನು ಸಮಯಕ್ಕೆ ಸರಿಯಾಗಿ, ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗುವಿರಿ. ಕಾನೂನು ವಿಚಾರದಲ್ಲಿ ನಿಮ್ಮ ಸಲಹೆ, ಆಲೋಚನೆಗೆ ಮನ್ನಣೆ ಸಿಕ್ಕು, ಉನ್ನತ ಹುದ್ದೆಗೆ ನಿಮ್ಮ ಹೆಸರು ಶಿಫಾರಸು ಆಗುವ ಸಾಧ್ಯತೆಗಳಿವೆ. ಈ ಹಿಂದಿನ ಪರಿಶ್ರಮಕ್ಕೆ ಈಗ ಫಲ ದೊರೆಯಲಿದೆ.
ದೈವಾನುಗ್ರಹ ಈ ದಿನ ನಿಮ್ಮ ಮೇಲೆ ಇರಲಿದೆ. ಭವಿಷ್ಯದ ಬಗ್ಗೆ ನೀವು ಆಲೋಚನೆ ಮಾಡಿದ್ದು ಬಹುತೇಕ ನಿಜವಾಗುವ ಸೂಚನೆಗಳು ಕಂಡುಬರುತ್ತವೆ. ಅನಿರೀಕ್ಷಿತವಾಗಿ ಹೊಸ ಆದಾಯ ಮೂಲಗಳು ಗೋಚರವಾಗಲಿವೆ. ನಿಮ್ಮ ಏಳ್ಗೆ ಕಂಡು ಇತರರು ಹೊಟ್ಟೆ ಕಿಚ್ಚು ಪಡುವಂತೆ ಆಗುತ್ತದೆ.
Tags:
ದಿನ ಭವಿಷ್ಯ














