ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಉತ್ತಮ ಅವಕಾಶ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಬಂಧುಗಳ ಆಗಮನದಿಂದ ಮನಸಿಗೆ ಸಂತೋಷ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡವ ಯೋಗವಿದೆ.
ಡೇರಿ ವ್ಯವಹಾರ ಮಾಡುವವರಿಗೆ ಲಾಭದ ಪ್ರಮಾಣದಲ್ಲಿ ಹೆಚ್ಚಳವಿದೆ. ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಖರ್ಚು. ಹೊಸದಾಗಿ ಹಣದ ಮೂಲ ದೊರೆಯಲಿದೆ. ನಿರಂತರ ಪ್ರಯತ್ನದಿಂದ ಯತ್ನ ಕಾರ್ಯದಲ್ಲಿ ಅನುತೂಲ. ರುಚಿಕಟ್ಟಾದ ಊಟ-ತಿಂಡಿ ಸವಿಯುವ ಯೋಗವಿದೆ.
ಬ್ಯಾಂಕ್ ವ್ಯವಹಾರಗಳಿಗೆ ಅಗತ್ಯ ದಾಖಲೆಗಳನ್ನು ಹೊಂದಿಸಿಕೊಳ್ಳಲು ಹೆಚ್ಚು ಸಮಯ ಮೀಸಲಿಡಲಿದ್ದೀರಿ. ಮನೆಯಲ್ಲಿ ದೇವತಾ ಕಾರ್ಯಗಳು ಆಯೋಜಿಸಲಿದ್ದೀರಿ. ದೂರದ ಊರಿಂದ ಸಂಬಂಧಿಕರು ಬರುವ ಸಾಧ್ಯತೆ ಇದೆ. ಹೊಸದಾಗಿ ಆದಾಯ ಮೂಲಗಳು ಗೋಚರ ಆಗಲಿವೆ.
ಸಂಗಾತಿ- ಮಕ್ಕಳ ಸಲುವಾಗಿ ಹೆಚ್ಚು ಖರ್ಚು ಮಾಡಲಿದ್ದೀರಿ. ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹೊಸಬರ ಜತೆ ವ್ಯವಹಾರ ನಡೆಸುವಾಗ ಮುಂಜಾಗ್ರತೆಯಿಂದ ಇರಬೇಕು. ಬಾಕಿ ಹಣ ವಸೂಲಿ ಮಾಡುವುದಕ್ಕೆ ಅಗತ್ಯಕ್ಕಿಂತ ಹೆಚ್ಚು ಶ್ರಮ ಪಡಬೇಕಾಗುತ್ತದೆ.
ರಾಜಕಾರಣದಲ್ಲಿ ಇರುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಖರ್ಚಿದೆ. ಜಂಕ್ ಫುಡ್ ಸೇವನೆಯಿಂದ ದೂರವಿರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಭಾರೀ ವಾಹನಗಳ ಚಾಲನೆ ಮಾಡುವವರಿಗೆ ಉತ್ತಮ ಲಾಭ ಇದೆ.
ಮಾನಸಿಕವಾಗಿ ನೆಮ್ಮದಿಯಿಂದ ಇರುತ್ತೀರಿ. ಜೂಜಾಟ, ಸಟ್ಟಾ ವ್ಯವಹಾರದಿಂದ ದೂರವಿರಿ. ಸಾಲದ ಹಣ ವಾಪಸ್ ಬರಬೇಕಿದ್ದಲ್ಲಿ ಪ್ರಯತ್ನಿಸಿದರೆ ವಾಪಸಾಗುತ್ತದೆ. ಮನೆಯ ನಿರ್ಮಾಣ ಕಾರ್ಯ ನಿಂತು ಹೋಗಿದ್ದರೆ ಮತ್ತೆ ಆರಂಭಿಸಬಹುದು. ಹಣ ಉಳಿತಾಯ ಮಾಡಬಹುದು.
ಉದ್ಯೋಗ ನಿಮಿತ್ತ ಪ್ರಯಾಣ ಇದೆ. ಪೂರ್ತಿಯಾಗಿ ಕೆಲಸಗಳನ್ನು ಪೂರೈಸುವುದಕ್ಕೆ ಕಷ್ಟ ಆಗಬಹುದು. ಹಿತಶತ್ರುಗಳ ಕಾಟ ಇರುತ್ತದೆ. ಕಾನೂನು ವಿಚಾರಗಳು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯಲಿದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರಾಗಬಹುದು.
ಪ್ರೀತಿಪಾತ್ರರ ಜತೆಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮನರಂಜನೆಗಾಗಿ ಖರ್ಚು ಮಾಡಲಿದ್ದೀರಿ. ಉದ್ದೇಶಪೂರ್ವಕವಾಗಿ ನಿಮಗೆ ಸಿಟ್ಟು ತರಿಸುತ್ತಾರೆ. ನಿಮ್ಮ ವರ್ಚಸ್ಸಿಗೆ ಹಾನಿ ಮಾಡಲು ಪ್ರಯತ್ನಿಸಬಹುದು. ತಾಳ್ಮೆ ಬಹಳ ಮುಖ್ಯ. ನೀವಾಗಿಯೇ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ಕೃಷಿಕರಿಗೆ ಉತ್ತಮವಾದ ದಿನ. ಜಮೀನು, ಭೂಮಿ ಅಭಿವೃದ್ಧಿಗೆ ಆಲೋಚನೆ ಮಾಡಲಿದ್ದೀರಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ. ಅನಿರೀಕ್ಷಿತವಾಗಿ ಹಣ ಬರುವ ಯೋಗ ಇದೆ. ಉಳಿತಾಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
ಆಲಸ್ಯವನ್ನು ಬಿಟ್ಟು ಕೆಲಸದಲ್ಲಿ ತೊಡಗಿಕೊಳ್ಳಿ. ಅಧ್ಯಾತ್ಮದ ಕಡೆಗೆ ಮನಸ್ಸು ಸೆಳೆಯುತ್ತದೆ. ಆಹಾರ ಪಥ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಕ್ರೆಡಿಟ್ ಕಾರ್ಡ್ ಬಳಸುವವರು ಕೈ ಮೀರಿ ಖರ್ಚಾಗಬಹುದು, ಆ ಬಗ್ಗೆ ಎಚ್ಚರಿಕೆ ವಹಿಸಿ. ಪ್ರಯಾಣದ ವೇಳೆ ಏಕಾಗ್ರತೆ ಕಳೆದುಕೊಳ್ಳದಿರಿ.
ಸ್ವಾದಿಷ್ಟವಾದ ಊಟ- ತಿಂಡಿ ಮಾಡುವ ಯೋಗ ಇದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಶುಭ ಸಮಾರಂಭಗಳಿಗೆ ನೇತೃತ್ವ ವಹಿಸಬೇಕಾಗುತ್ತದೆ. ವಿಪರೀತ ಓಡಾಟದಿಂದ ದೇಹಾಲಸ್ಯ ಇರುತ್ತದೆ. ಆಪ್ತ ಸ್ನೇಹಿತರು ಹಣಕಾಸಿನ ನೆರವು ಕೇಳಬಹುದು. ಪಿತ್ರಾರ್ಜಿತ ಆಸ್ತಿ ವಿಚಾರ ಚರ್ಚೆಗೆ ಬರುತ್ತದೆ.
ಕಲಾವಿದರಿಗೆ ಹಲವು ಅವಕಾಶಗಳು ದೊರೆಯಲಿವೆ. ನಿಮ್ಮ ಮಾತಿನ ಕಾರಣಕ್ಕೆ ವಿವಾದ ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿ ಜತೆಗೆ ಸಣ್ಣ ಪುಟ್ಟ ಮನಸ್ತಾಪ ಎದುರಾಗಬಹುದು. ಚರ್ಮದ ಆರೋಗ್ಯದ ಬಗ್ಗೆ ಗಮನ ಕೊಡಿ. ಚಾಡಿ ಮಾತುಗಳನ್ನು ನಿರ್ಲಕ್ಷಿಸಿದರೆ ಸಂಬಂಧ ಉತ್ತಮವಾಗಿರುತ್ತದೆ.
Tags:
ದಿನ ಭವಿಷ್ಯ