ಉಡುಪಿ, ಮೇ 29: ಮಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮೇ 29 ರ ಶುಕ್ರವಾರ ಇಲ್ಲಿನ ಉದ್ಯಾವರ ನಲ್ಲಿ ಅಪಘಾತಕ್ಕೀಡಾಯಿತು.
ವರದಿಗಳ ಪ್ರಕಾರ ಬಸ್ ಚಾಲಕ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ ಬಸ್ ಸೇತುವೆಯ ಪಕ್ಕದ ಕಂಬಗಳಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಹಲವಾರು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾರೆ. ಅಪಘಾತದ ನಂತರ, ಸಂಚಾರ ದಟ್ಟಣೆಯಿಂದ ಕೂಡಿತ್ತು. ಏತನ್ಮಧ್ಯೆ, ಘಟನಾ ಸ್ಥಳದಲ್ಲಿದ್ದ ಪೊಲೀಸರು ಸಂಚಾರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಗಾಯಗೊಂಡ ಒಟ್ಟು ಪ್ರಯಾಣಿಕರ ವರದಿಗಳನ್ನು ಅಧಿಕಾರಿಗಳು ಇನ್ನೂ ದೃಢೀಕರಣ ಪಡಿಸಿಲ್ಲ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು