ಇಂದಿನ ಭವಿಷ್ಯ ಮೇ 29, 2020



Today astrology in kannada today horoscope in kannada
ಹತ್ತಿರದ ಸ್ನೇಹಿತರ ಸಹಾಯದಿಂದ ಮುಖ್ಯವಾದ ಸಮಸ್ಯೆಯೊಂದು ಬಗೆಹರಿಯುವ ಲಕ್ಷಣಗಳು ಇದೆ. ನಿಮಗೆ ಸಹಾಯ ಮಾಡ್ತೀನಿ ಎಂದವರಿಗೆ ಪೂರ್ಣ ಪ್ರಮಾಣದಲ್ಲಿ ಅಥವಾ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಕಷ್ಟವಾಗಬಹುದು. ಆಸ್ತಿಯನ್ನು ಮಾರಾಟಕ್ಕೆ ಇಟ್ಟಿದ್ದಲ್ಲಿ ಅದು ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
Today astrology in kannada today horoscope in kannada
ಇವತ್ತಿನ ದಿನ ನೀವಾಗಿಯೇ ರಹಸ್ಯವೊಂದನ್ನು ಬಾಯಿ ಬಿಟ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ವರ್ಚಸ್ಸನ್ನು ಮೊದಲಿನಂತೆ ಮಾಡಿಕೊಳ್ಳಲು ತುಂಬಾನೇ ಕಷ್ಟವಾಗಲಿದೆ. ನಾಲಗೆ ಮೇಲೆ ಸ್ವಲ್ಪ ಹಿಡಿತ ಇರಲಿ. ಅದು ಮಾತಿನ ವಿಚಾರವೇ ಆಗಲಿ, ಊಟದ ಸಂಗತಿಯೇ ಆಗಲಿ ಇವತ್ತಿನ ಮಟ್ಟಿಗೆ ಸ್ವಲ್ಪ ಎಚ್ಚರಿಕೆ ಅಗತ್ಯ.




Today astrology in kannada today horoscope in kannada
ಇವತ್ತಿನ ದಿನ ನಿಮ್ಮ ದೈನಂದಿನ ಕೆಲಸ ಕಾರ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ ಬರಲಿದೆ ಹೊಸದೊಂದು ಅವಕಾಶಗಳಿಗೆ ನೀವು ತುಂಬಾನೇ ಬಹಳ ಶ್ರಮ ಪಡಲಿದ್ದೀರಿ. ಕುಟುಂಬದಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಸಮಯ ವನ್ನು ಮೀಸಲಿಡಲಿದ್ದೀರಿ. ಸಂಗಾತಿ ಮತ್ತು ಮಕ್ಕಳ ಮನರಂಜನೆಗಾಗಿ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ.





Today astrology in kannada today horoscope in kannada
ಯಾವ ಕೆಲಸವನ್ನೂ ಏಕಾಗ್ರತೆಯಿಂದ ಮಾಡುವುದು ಸ್ವಲ್ಪ ಕಷ್ಟವಾಗಲಿದೆ. ಒಂದನ್ನು ಮಾಡುವಾಗ ಇನ್ನೊಂದರ ಕಡೆಗೆ ಮನಸ್ಸು ಸೆಳೆಯುತ್ತದೆ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ಹಾಕುವುದರಿಂದ ಒತ್ತಡ ಸ್ವಲ್ಪ ಹೆಚ್ಚಾಗಲಿದೆ. ಆದರೆ ಈ ಪರಿಶ್ರಮಕ್ಕೆ ಮುಂದೆ ಒಳ್ಳೆಯ ಫಲಿತಾಂಶ ಸಿಗಲಿದೆ.






Today astrology in kannada today horoscope in kannada
ಬೇರೆಯವರು ನಿಮ್ಮ ಮೇಲೆ ಅಭಿಪ್ರಾಯವನ್ನು ಹೇರುತ್ತಿದ್ದಾರೆ ಎಂಬ ಭಾವನೆ ಒಂದು ನಿಮ್ಮ ಮನಸ್ಸಿನಲ್ಲಿ ಮೂಡಲಿದೆ. ಮುಖ್ಯವಾದ ಅಥವಾ ಬೆಲೆ ಬಾಳುವ ವಸ್ತುಗಳನ್ನು ಎಲ್ಲೆಲ್ಲಿಯೂ ಇಟ್ಟುಕೊಂಡು ಅದನ್ನು ಮರೆಯುವ ಸಾಧ್ಯತೆ ಇರುತ್ತದೆ. ಅದರಲ್ಲೂ ಪ್ರಯಾಣದ ವೇಳೆಯಲ್ಲೂ ಸ್ವಲ್ಪ ಜಾಗರೂಕರಾಗಿರಬೇಕು. ಅತಿ ಮುಖ್ಯ ಕೆಲಸ ಇಲ್ಲದಿದ್ದಲ್ಲಿ ಇವತ್ತು ಪ್ರಯಾಣ ಮಾಡದಿರುವುದು ಸೂಕ್ತ.





Today astrology in kannada today horoscope in kannada
ತಂದೆ ತಾಯಿ ಮೇಲೆ ವಿನಾ ಕಾರಣವಾಗಿ ಸಿಟ್ಟನ್ನು ಮಾಡಿಕೊಳ್ಳಲಿದ್ದೀರಿ. ಇದರಿಂದಾಗಿ ಮನೆಯಲ್ಲಿ ಸ್ವಲ್ಪ ಅಸಮಾಧಾನದ ವಾತಾವರಣ ಇರಲಿದೆ. ಹಣದ ವಿಚಾರಕ್ಕೆ ಮನಸ್ತಾಪ ಏರ್ಪಡಬಹುದು. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ನಾನಾ ಬಗೆಯ ಗೊಂದಲಗಳು ಸೃಷ್ಟಿ ಯಾಗುವ ಸಾಧ್ಯತೆ ಇದೆ.






Today astrology in kannada today horoscope in kannada
ನೀವು ತುಂಬ ಗೌರವಿಸುವ ವ್ಯಕ್ತಿಗಳಿಂದಲೆ ನಿಮ್ಮ ವೃತ್ತಿ ಉದ್ಯೋಗ ಜೀವನದಲ್ಲಿ ನೆರವಾಗುತ್ತದೆ. ಅವರ ಅನುಭವದ ಮಾತು ಮತ್ತು ಸಲಹೆಗಳನ್ನು ಸ್ವೀಕರಿಸುವುದರಿಂದ ತುಂಬಾ ಅನುಕೂಲವಾಗುತ್ತದೆ. ರುಚಿಕಟ್ಟಾದ ಊಟ ತಿಂಡಿ ಸವಿಯುವ ಯೋಗ ಇದೆ. ಪದೋನ್ನತಿ ವಿಚಾರವಾಗಿ ಮೇಲಧಿಕಾರಿಗಳ ಜತೆ ಚರ್ಚೆಯನ್ನು ನಡೆಸಲಿದ್ದೀರಿ.





Today astrology in kannada today horoscope in kannada
ಸ್ನೇಹಿತರು ಮತ್ತು ಬಂಧುಗಳ ಸಲುವಾಗಿ ಸಮಯ, ಹಣವನ್ನು ಮೀಸಲಿಡಬೇಕಾಗುತ್ತದೆ. ನಿಮ್ಮ ಮನಸಿಗೆ ಒಪ್ಪಿಗೆ ಇಲ್ಲದಿದ್ದರೂ ಪ್ರಯಾಣವನ್ನು ಮಾಡಬೇಕಾದ ಸ್ಥಿತಿ ಇರುತ್ತದೆ. ಇದರಿಂದಾಗಿ ದೇಹಾಯಾಸ ಆಗಲಿದೆ. ಕೆಲಸದಲ್ಲಿ ಬಿಡುವು ಸಿಗುವ ಅವಕಾಶ ಇದ್ದರೂ ಮೇಲಧಿಕಾರಿಗಳು ಪದೇ ಪದೇ ಹಲವು ವಿಷಯಗಳನ್ನು ಕೆದಕಿ ಮಾನಸಿಕ ಕಿರಿಕಿರಿಯನ್ನು ಉಂಟು ಮಾಡಲಿದ್ದಾರೆ.






Today astrology in kannada today horoscope in kannada
ಸಾಂಸಾರಿಕ ಸಂಗತಿಗಳನ್ನು ಯಾರೊಬ್ಬ  ಬಂಧುಗಳು ಮತ್ತು  ಸ್ನೇಹಿತರು ಯಾರ ಜತೆಗೂ ಚರ್ಚಿಸದಿರಿ. ದೊಡ್ಡ ದೊಡ್ಡ ಖರ್ಚುಗಳನ್ನು ನೀವಾಗಿಯೇ ಮೈ ಮೇಲೆ ತಂದುಕೊಳ್ಳದೇ ಇರುವುದು ಉತ್ತಮ. ಕೆಲವು ವಿಚಾರಗಳನ್ನು ವಾಸ್ತವದ ನೆಲೆಗಟ್ಟಿನಿಂದ ನಿರ್ಧರಿಸುವುದು ಉತ್ತಮ. ಭಾವನಾತ್ಮಕವಾಗಿ ಆಲೋಚಿಸಿದರೆ ನಷ್ಟವನ್ನು ಅನುಭವಿಸಬೇಕಾಗುತ್ತದೆ.





Today astrology in kannada today horoscope in kannada
ದೂರ ಪ್ರಯಾಣ ಮಾಡುವ ಯೋಗ ಇದೆ. ಸೋಷಿಯಲ್ ಮೀಡಿಯಾಗಳಲ್ಲಿ ಚಟುವಟಿಕೆಯಿಂದ ಇರುವವರಿಗೆ ವಿವಿಧ ಆದಾಯ ಮೂಲಗಳು ಗೋಚರವಾಗುತ್ತವೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ಪ್ರಮಾಣ ಕಡಿಮೆ ಆಗಲಿದೆ. ಇತರರು ಅನುಮಾನ ಪಡುತ್ತಾರೆ ಎಂಬ ಕಾರಣಕ್ಕೆ ನಿಮ್ಮ  ಪ್ರಾಮಾಣಿಕತೆಯನ್ನು ರಿಗೆ ಅವರಿಗೆ ಸಾಬೀತು ಮಾಡುವ ಅಗತ್ಯತೆ ಇರುವುದಿಲ್ಲ.





Today astrology in kannada today horoscope in kannada
ಈ ದಿನ ಬಹುತೇಕ ಕೆಲಸಗಳನ್ನು ಅರೆ ಅರ್ಧ ಮನಸ್ಸಿನಿಂದಲೇ ಮಾಡುತ್ತೀರಿ. ಸಂಗಾತಿ ಮತ್ತು ಮಕ್ಕಳ ಸಲುವಾಗಿ ಕೆಲವು ರಾಜೀ ಹೊಂದಾಣಿಕೆಯನ್ನು ಮಾಡಿಕೊಳ್ಳುವಿರಿ. ಈ ದಿನ ದೈವಾನುಗ್ರಹ ನಿಮ್ಮ ಮೇಲಿರುವುದರಿಂದ ದೊಡ್ಡ ದೊಡ್ಡ ಸವಾಲುಗಳನ್ನು ಬಹಳ ಸುಲಭವಾಗಿ ಗಿರಿ ಪರಿಹರಿಸಿಕೊಳ್ಳುರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ  ಸ್ವಲ್ಪ ಹಿನ್ನಡೆ ಉಂಟಾಗಬಹುದು.






Today astrology in kannada today horoscope in kannada
ಕ್ರೀಡಾಪಟುಗಳಿಗೆ ಮತ್ತು ಕಲಾವಿದರಿಗೆ ಹೊಸ ಹೊಸ ಅವಕಾಶಗಳು ದೊರೆಯಲಿವೆ. ವಿದೇಶದಲ್ಲಿ ವ್ಯವಹಾರ ನಡೆಸುತ್ತಿರುವವರಿಗೆ ಬದಲಾವಣೆಗೆ ಅವಕಾಶವೊಂದು ದೊರೆಯಲಿದೆ. ಇಷ್ಟು ಕಾಲ ಹಣಕಾಸಿನ ವಿಚಾರಕ್ಕೆ ಸಮಸ್ಯೆ ಆಗಿದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ದಾರಿ ಗೋಚರ ಆಗುತ್ತದೆ. ತಾಳ್ಮೆ ಮುತ್ತು ಸಂಯಮದಿಂದ ಮುಂದಕ್ಕೆ ಹೆಜ್ಜೆಯನ್ನು ಇಡಿ.







ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement