ನಗದು ಕೊರತೆ ಕಾಣಿಸಿಕೊಳ್ಳಬಹುದು. ಮನೆಯ ಕಾಗದು- ಪತ್ರ, ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವ ಕುರಿತು ಚರ್ಚೆ ನಡೆಸಲಿದ್ದೀರಿ. ವಿಶ್ರಾಂತಿಗಾಗಿ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ವಾಹನ ಖರೀದಿ ವ್ಯವಹಾರದಲ್ಲಿ ಹಿನ್ನಡೆ ಆಗಬಹುದು. ನಿಮ್ಮ ನಂಬಿಕೆಗಳು ಬದಲಾಗುವ ಬೆಳವಣಿಗೆಗಳು ಆಗುತ್ತವೆ.
ವಿದ್ಯಾರ್ಥಿಗಳಿಗೆ ಹೊಸ ಭರವಸೆಗಳು ಕಾಣಿಸಿಕೊಳ್ಳುತ್ತವೆ. ನೀವಾಗಿಯೇ ತೆಗೆದುಕೊಂಡ ಸವಾಲುಗಳನ್ನು ಯಶಸ್ವಿಯಾಗಿ ಮಾಡಿ, ಮುಗಿಸುತ್ತೀರಿ. ದಂಪತಿ ಮಧ್ಯೆ ಹಣಕಾಸಿನ ವಿಚಾರಕ್ಕೆ ಭಿನ್ನಾಭಿಪ್ರಾಯ ತಲೆದೋರಬಹುದು. ಯಾವುದೇ ವಸ್ತುವನ್ನು ಖರೀದಿ ಮಾಡುವ ಮುನ್ನ ಅದರ ಅಗತ್ಯ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳಿ.
ಮಾಧ್ಯಮ ಕ್ಷೇತ್ರದಲ್ಲಿ ಇರುವವರಿಗೆ ಹಲವು ಬಗೆಯ ಸವಾಲುಗಳು ಏಕ ಕಾಲಕ್ಕೆ ಎದುರಾಗುತ್ತವೆ. ಯಾರದೋ ಮಾತುಗಳು ನಿಮ್ಮ ಮನಸ್ಸಿನಲ್ಲಿ ಉಳಿದುಹೋಗಿ, ಕೆಲಸಗಳನ್ನು ಮಾಡುವುದರಲ್ಲಿ ಏಕಾಗ್ರತೆಯಿಂದ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಸ್ವಂತ ಖುಷಿಗಾಗಿಯೂ ಏನೂ ಖರ್ಚು ಮಾಡಿಕೊಳ್ಳಲಿಕ್ಕೆ ಆಗುತ್ತಿಲ್ಲವಲ್ಲ ಎಂಬ ಬೇಸರ ಕಾಡುತ್ತದೆ.
ಸಂಬಂಧದಲ್ಲಿ ಆಸ್ತಿ ವಿಚಾರವಾಗಿ ಅಸಮಾಧಾನ ಕಾಣಿಸಿಕೊಳ್ಳಬಹುದು. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಲಾಭ ಹಂಚಿಕೆಯಲ್ಲಿ ಗೊಂದಲ ಸೃಷ್ಟಿ ಆಗುವ ಸಾಧ್ಯತೆ ಇದೆ. ಈ ದಿನ ಯಾವುದೇ ವ್ಯವಹಾರವನ್ನು ತಾಳ್ಮೆಯಿಂದ ನಿರ್ವಹಣೆ ಮಾಡುವುದು ಮುಖ್ಯ.
ಪ್ರೀತಿಪಾತ್ರರಿಗೆ ಬೆಳೆ ಬಾಳುವ ಉಡುಗೊರೆ ನೀಡುವ ಸಾಧ್ಯತೆ ಇದೆ. ಸಾಲ ಮಾಡಿಯಾದರೂ ಅಥವಾ ಕ್ರೆಡಿಟ್ ಕಾರ್ಡ್ ಬಳಸಿಯಾದರೂ ಆ ದುಬಾರಿ ವಸ್ತು ಖರೀದಿಸಬಹುದು. ಇದರಿಂದ ಮುಂದಿನ ಕೆಲ ಸಮಯ ಚಿಂತೆ ಮಾಡುವಂತೆ ಆಗುತ್ತದೆ. ಈಗ ಹೀಗೆ ನಡೆದುಕೊಂಡಿದ್ದು ತಪ್ಪು ಎಂಬ ಭಾವನೆ ಮೂಡುತ್ತದೆ.
ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರಿಗೆ ನಾನಾ ಮೂಲಗಳಿಂದ ಹಣ ದೊರೆಯುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪ್ರಗತಿ ಇದೆ. ನೀವು ಬರುವುದಿಲ್ಲ ಎಂದುಕೊಂಡಿದ್ದ ಅವಕಾಶ ಮತ್ತೊಮ್ಮೆ ನಿಮ್ಮನ್ನು ಹುಡುಕಿಕೊಂಡು ಬರುವ ಯೋಗ ಇದೆ. ಆದರೆ ಈ ಸಲ ಬಹಳ ಯೋಚನೆ ಮಾಡಿ, ಆ ನಂತರ ಮುಂದಕ್ಕೆ ಹೆಜ್ಜೆ ಇಡಬೇಕು.
ಇತರರು ಹೇಳುವ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳಿ. ಸಲಹೆಯಿಂದ ಹಲವು ಕಷ್ಟಗಳಿಂದ ದಾಟುವ ಅವಕಾಶ ನಿಮ್ಮದಾಗುತ್ತದೆ. ಸೋದರ- ಸೋದರಿಯರ ಜತೆ ಹಣಕಾಸಿನ ವಿಚಾರಕ್ಕೆ ಜೋರು ಮಾತುಕತೆ ನಡೆಯುವ ಸಾಧ್ಯತೆ ಇದೆ. ವಿವಾಹ ನಿಶ್ಚಯ ಆಗಿದ್ದಲ್ಲಿ ಗೊಂದಲಗಳಿಗೆ ಅವಕಾಶ ನೀಡಬೇಡಿ. ಸ್ವಲ್ಪ ಮೈ ಮರೆತರೂ ಸಂಬಂಧ ಈ ಹಂತದಲ್ಲೇ ಕೊನೆಯಾಗಬಹುದು.
ಉಳಿತಾಯ ಮಾಡಿಟ್ಟಿದ್ದ ಹಣ ಹಾಗೂ ನೀವು ಉಳಿಸಿಕೊಂಡಿರುವ ಬಾಕಿ ಸಾಲವನ್ನೆಲ್ಲ ಲೆಕ್ಕ ಹಾಕಿಕೊಂಡು, ಪೂರ್ತಿ ಸಾಲದಿಂದ ಹೊರಬರುವ ಆಲೋಚನೆ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಬದಲಾವಣೆ ಆಗಬಹುದು ಎಂಬ ಸೂಚನೆ ದೊರೆಯುತ್ತದೆ. ಆದರೆ ನಿಮ್ಮ ನಿರ್ಲಕ್ಷ್ಯ ಧೋರಣೆಯಿಂದ ದೊಡ್ಡ ಬೆಲೆ ತೆರುತ್ತೀರಿ.
ಹಳೆಯ ಸಂಗತಿಗಳನ್ನು ಮರೆತು ಮುಂದಕ್ಕೆ ಸಾಗುವುದು ಬುದ್ಧಿವಂತಿಕೆ. ಈ ಹಿಂದೆ ಯಾರಿಂದಲೋ ನಿಮಗೆ ಆದ ಅನ್ಯಾಯವನ್ನು ಮನಸಿನಲ್ಲಿ ಇಟ್ಟುಕೊಂಡು, ದ್ವೇಷ ತೀರಿಸಲು ಮುಂದಾದರೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಸಂಬಂಧಿಕರಿಂದ ಅವಮಾನ ಎದುರಿಸಬೇಕಾದ ಯೋಗ ಇದೆ.
ಅಧ್ಯಾತ್ಮ, ಧಾರ್ಮಿಕ ವಿಚಾರಗಳಲ್ಲಿ ದ್ವಂದ್ವ ನಿಲುವು ತಾಳುತ್ತೀರಿ. ಕುಟುಂಬದವರು ನಿಮಗೆ ಬುದ್ಧಿ ಹೇಳಿದರೂ ಕೇಳುವ ಸ್ಥಿತಿಯಲ್ಲಿ ನೀವಿರುವುದಿಲ್ಲ. ಉದ್ಯೋಗ ವಿಚಾರದಲ್ಲಿ ನಾನು ಮಾಡಿದ್ದೇ ಸರಿ ಎಂಬ ಧೋರಣೆ ಬಿಟ್ಟುಬಿಡಿ. ನಿಮ್ಮ ಬೆನ್ನಿಗೆ ನಿಂತವರನ್ನು ನಿರ್ಲಕ್ಷ್ಯ ಮಾಡಬೇಡಿ.
ಹೆಚ್ಚಿನ ಆದಾಯ ಮೂಲಗಳಿಂದ ಬರಬೇಕಾದ ಹಣ ತಡವಾದರೂ, ಪ್ರಮಾಣ ಕಡಿಮೆಯಾದರೂ ಬರುವ ಸಾಧ್ಯತೆ ಇದೆ. ಜ್ಯೋತಿಷಿಗಳು, ಪುರೋಹಿತರು, ಧಾರ್ಮಿಕ ಉಪನ್ಯಾಸಕರು ಇವರಿಗೆ ಸಮಾಜದಲ್ಲಿ ಗೌರವ, ಮನ್ನಣೆ ದೊರೆಯಲಿದೆ. ನೀವಾಗಿಯೇ ಹುಡುಕಿಕೊಂಡು ಹೋಗುತ್ತಿದ್ದ ವಸ್ತುಗಳು, ತಾವಾಗಿಯೇ ದೊರೆಯುವ ಯೋಗ ಇದೆ.
ದೂರ ಪ್ರಯಾಣದ ಯೋಗ ಇದೆ. ವ್ಯಾಪಾರ- ವ್ಯವಹಾರ ನಡೆಸುತ್ತಿರುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ತಂದೆಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಶಿಕ್ಷಕರು, ಉಪನ್ಯಾಸಕ ವೃತ್ತಿಯಲ್ಲಿ ಇರುವವರಿಗೆ ಹೊಸ ಕಲಿಕೆಗೆ ಅವಕಾಶ ದೊರೆಯಲಿದೆ. ಅನುಭವಿಗಳ ಮಾತಿನಿಂದ ಮನಸ್ಸಿಗೆ ಸಮಾಧಾನ ದೊರೆಯಲಿದೆ..
Tags:
ದಿನ ಭವಿಷ್ಯ