ಉಡುಪಿ, ಮೇ 24: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ಮಂಗಳೂರಿನಲ್ಲಿ ರಮ್ಜಾನ್ ಹಿನ್ನೆಲೆ ಯಾವುದೇ ಮಸೀದಿಗಳಲ್ಲಿ ಸಾಮೂಹಿಕ ನಮಾಜನ್ನು ಮಾಡದೆ ಮುಸ್ಲಿಂ ಬಾಂಧವರು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಪ್ರಾರ್ಥನೆ ನಮಾಜನ್ನು ಮಾಡಿಕೊಂಡಿದ್ದಾರೆ.
ಮನೆಯ ಸದಸ್ಯರು ಸೇರಿಕೊಂಡು ಈದ್ ನಮಾಜ್ ಮಾಡಿ ಮನೆಯಲ್ಲಿಯೇ ಪರಸ್ಪರ ಶು ಮುಸ್ಲಿಂ ಬಾಂಧವರೆಲ್ಲರೂ ತಮ್ಮ ಮನೆಯ ಸದಸ್ಯರ ಜೊತೆ ಸೇರಿಕೊಂಡು ನಮಾಜ್ ಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ರವಿವಾರ ಲಾಕ್ ಡೌನ್ ನಿಂದ ಸಂಪೂರ್ಣ ಬಂದ್ ಇರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಈದ್ ಆಚರಣೆ ಆಚರಿಸಿದ್ದಾರೆ.
ಮುಸ್ಲಿಂ ಬಾಂಧವರು ತಮ್ಮ ಮನೆಯ ಸದಸ್ಯರ ಜೊತೆ ಸೇರಿಕೊಂಡು ತಮ್ಮ ತಮ್ಮ ಮನೆಯಲ್ಲಿ ನಮಾಜ್ ಮಾಡುವ ಮೂಲಕ ಪರಸ್ಪರ ಸದಸ್ಯರ ಜೊತೆ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ರವಿವಾರ ಲಾಕ್ಡೌನ್ ಕಾರಣದಿಂದಾಗಿ ಸಂಪೂರ್ಣ ಬಂದ್ ಕಾರಣ ಮನೆಯಲ್ಲಿಯೇ ರಂಜಾನ್ ಈದ್ ಮಿಲಾದ್ ಅನ್ನು ಆಚರಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಮಾಜಿನ ನೇರ ಕಾರ್ಯಕ್ರಮವನ್ನು ಟಿವಿಯಲ್ಲಿ ಬಿತ್ತರಿಸುವ ಮೂಲಕ ಟಿವಿ ಕಾರ್ಯಕ್ರಮವನ್ನು ನೋಡುತ್ತಾ ನಮಾಜ್ ಆಚರಣೆಗೆ ಅನುಮತಿಯನ್ನು ನೀಡಲಾಗಿದೆ. ಟಿವಿ ಮುಖಾಂತರವೇ ನಮಾಜ್ ಪ್ರಾರ್ಥನೆ ವಿಧಿಗಳನ್ನು ಧರ್ಮಗುರುಗಳ ಮುಖಾಂತರ ನಡೆಸಲಾಯಿತು. ಉಡುಪಿಯ ಜಾಮಿಯಾ ಮಸೀದಿ ಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
Tags:
ಉಡುಪಿ ಜಿಲ್ಲಾ ಸುದ್ದಿಗಳು