ಭೂಮಿ- ಆಸ್ತಿ ಖರೀದಿ ವ್ಯವಹಾರಗಳನ್ನು ಮುಂದುವರಿಸಲು ಸೂಕ್ತವಾದ ಸನ್ನಿವೇಶ ನಿರ್ಮಾಣ ಆಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಸಂಗಾತಿ ಜತೆ ಕಿರು ಪ್ರಯಾಣ ಕೈಗೊಳ್ಳುವ ಯೋಗ ಇದೆ. ತಂದೆ- ತಾಯಿ ಬಹಳ ಕಾಲದಿಂದ ಆಸೆ ಪಡುತ್ತಿದ್ದ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ.
ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ನಿಮ್ಮದಲ್ಲದ ತಪ್ಪಿಗೆ ನಿಂದನೆ ಕೇಳುವಂತಾಗುತ್ತದೆ. ನಿಮ್ಮ ಉಳಿತಾಯದ ಹಣದಿಂದ ದೊಡ್ಡ ಮೊತ್ತವನ್ನು ತೆಗೆಯಬೇಕಾಗುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದಲ್ಲಿ ಅಪಘಾತ ಆಗಲಿದೆ.
ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ಮನೆಯಲ್ಲಿ ಪೂಜೆ- ಪುನಸ್ಕಾರ ಆಯೋಜಿಸುವ ಕುರಿತು ಚರ್ಚೆ ನಡೆಸಲಿದ್ದೀರಿ. ಉದ್ಯೋಗ ಬದಲಾವಣೆ ಬಗ್ಗೆ ಸ್ನೇಹಿತರು, ಬಂಧುಗಳ ಜತೆ ಮಾತುಕತೆ ಮಾಡಲಿದ್ದೀರಿ. ಇತರರ ಜಗಳ ಬಿಡಿಸಲು ಸಂಧಾನ ಮಾತುಕತೆಯನ್ನು ಮಾಡುವ ಸಾಧ್ಯತೆ ಇದೆ.
ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ, ಕಲಾವಿದರಿಗೆ, ಚಿತ್ರರಂಗದಲ್ಲಿ ಇರುವವರಿಗೆ ಅವಕಾಶಗಳನ್ನು ತಪ್ಪಿಸುವವರಿಂದಾಗಿ ಬಹಳ ಬೇಸರವಾಗುತ್ತದೆ. ನೀವಾಗಿಯೇ ಒಪ್ಪಿಕೊಂಡ ಕೆಲಸವನ್ನು ಆಲಸ್ಯದ ಕಾರಣಗಳಿಗಾಗಿ ಹೇಳಿದ ಸಮಯಕ್ಕೆ ಮುಗಿಸಲು ಸಾಧ್ಯವಾಗದೆ ವರ್ಚಸ್ಸಿಗೆ ಧಕ್ಕೆ ಆಗಬಹುದು.
ಮಕ್ಕಳ ಸಂತೋಷಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ. ಮನೆಯಲ್ಲಿ ರುಚಿಕಟ್ಟಾದ ಅಡುಗೆ ಮಾಡಿಸಲಿದ್ದೀರಿ. ಕೆಲಸಗಳನ್ನ್ನು ಬೇಗ ಮುಗಿಸುವ ಉಮೇದಿನಲ್ಲಿ ಕೆಲವು ತಪ್ಪುಗಳಾಗಬಹುದು. ಆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಏಕಾಗ್ರತೆಯಿಂದ ಕೆಲಸ ಮಾಡಿ. ಸಾಮಾಜಿಕ ಜಾಲತಾಣಗಳ ಮೂಲಕ ಆದಾಯ ಹೆಚ್ಚಳ ಆಗಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್, ಶೇರ್ ಮಾಡುವಾಗ ಎಚ್ಚರಿಕೆ ವಹಿಸಿ. ವಿವಾದ ಆಗುವಂಥ ಸಂಗತಿಗಳಿಂದ ದೂರ ಇರಿ. ವ್ಯಾಪಾರ- ವೃತ್ತಿ ವಿಸ್ತರಣೆಗೆ ಅವಕಾಶಗಳಿದ್ದು, ಈ ಹಿಂದಿನ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುತ್ತಿರುವವರಿಗೆ ಏಳ್ಗೆ ಇದೆ.
ಸಂಗೀತಗಾರರಿಗೆ, ಕ್ರೀಡಾಪಟುಗಳಿಗೆ ಭವಿಷ್ಯದ ಯೋಜನೆಗಳ ಸುಳಿವು ದೊರೆಯಲಿದೆ. ಭವಿಷ್ಯದ ಸಲುವಾಗಿ ಹಣ ಉಳಿತಾಯ ಯೋಜನೆಗಳಲ್ಲಿ ಈ ತನಕ ಕೂಡಿಟ್ಟಿದ್ದ ದುಡ್ಡನ್ನು ತೆಗೆಯಲು ಆಲೋಚನೆ ಬರಲಿದೆ. ತಾಯಿಯ ಕಡೆ ಸಂಬಂಧಿಕರು ಮುಖ್ಯವಾದ ಆಸ್ತಿ ವಿಚಾರಕ್ಕೆ ನಿಮ್ಮನ್ನು ಸಂಪರ್ಕಿಸುವ ಸಾಧ್ಯತೆ ಇದೆ.
ಆಪ್ತರ ಮೇಲೆ ಅನುಮಾನ ಪಡುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ಹಣಕಾಸಿನ ಲೆಕ್ಕಪತ್ರಗಳಲ್ಲಿ ಗೊಂದಲ ಸೃಷ್ಟಿಯಾಗಲಿದೆ. ಮನೆಯಲ್ಲೇ ಬೆಲೆ ಬಾಳುವ ವಸ್ತುಗಳನ್ನು ಎಚ್ಚರಿಕೆಯಿಂದ ಇರಿಸಿಕೊಳ್ಳಿ. ಇಲ್ಲದಿದ್ದಲ್ಲಿ ಬೆಲೆ ಬಾಳುವ ವಸ್ತುಗಳು ಕಳುವಾಗುವ ಅಥವಾ ಕಳೆದುಹೋಗುವ ಸಾಧ್ಯತೆ ಇದೆ.
ವೃತ್ತಿಯಲ್ಲಿ ಇರುವವರಿಗೆ ಕಚೇರಿ ಬದಲಾವಣೆ, ಹೊಸ ಮನೆಗೆ ಬದಲಾಯಿಸಿಕೊಳ್ಳುವ ಯೋಗ ಇದೆ. ಇದಕ್ಕಾಗಿ ಈ ಹಿಂದೆ ನೀವು ಸಾಲ ನೀಡಿದ್ದವರಿಂದ ವಾಪಸ್ ಕೇಳುವ ಆಲೋಚನೆ ಮಾಡಲಿದ್ದೀರಿ. ಅಥವಾ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಪಡೆಯುವ ಅಗತ್ಯ ಕಂಡುಬರಲಿದೆ.
ಮಾಧ್ಯಮ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಸ್ವಂತ ವಿಚಾರಗಳಲ್ಲಿ ಇತರರು ಹಸ್ತಕ್ಷೇಪ ಮಾಡದಿರುವಂತೆ ನೋಡಿಕೊಳ್ಳಿ. ಅಂತರಂಗದ ರಹಸ್ಯವನ್ನು ಯಾರ ಜತೆಗೆ ಹೇಳಿಕೊಳ್ಳಬೇಡಿ. ಹಣಕಾಸಿನ ನೆರವು ನೀಡುವುದಾಗಿ ಯಾರಿಗಾದರೂ ಮಾತು ನೀಡಿದ್ದಲ್ಲಿ ಅದು ಪೂರೈಸುವುದು ಕಷ್ಟವಾಗುತ್ತದೆ.
ದೈವಾನುಗ್ರಹ ನಿಮ್ಮ ಮೇಲೆ ಇರುತ್ತದೆ. ಸಂಬಂಧಿಕರ ಮನೆಗಳಿಗೆ ಔತಣ ಕೂಟಗಳಿಗೆ ಆಹ್ವಾನ ಬರಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಪದೋನ್ನತಿ ದೊರೆಯುವ ಸೂಚನೆಗಳು ದೊರೆಯುತ್ತವೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರಬೇಕು.
ಆಹಾರ- ನೀರು ಸೇವನೆ ಮಾಡುವಾಗ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಿ. ರಾಜಕೀಯದಲ್ಲಿ ಇರುವವರಿಗೆ ಪ್ರಭಾವವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸನ್ನಿವೇಶ ಸೃಷ್ಟಿಯಾಗುತ್ತದೆ. ಸ್ವತಂತ್ರ ಆಲೋಚನೆಯಿಂದ ತೆಗೆದುಕೊಳ್ಳುವ ತೀರ್ಮಾನವು ವೃತ್ತಿ- ವ್ಯಾಪಾರದಲ್ಲಿ ಲಾಭ ತಂದುಕೊಂಡಲಿದೆ.
Tags:
ದಿನ ಭವಿಷ್ಯ