ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರು ಲೆಕ್ಕಪತ್ರಗಳನ್ನು ಸರಿಯಾಗಿ ನೋಡಿಕೊಳ್ಳಿ. ದಾಖಲೆಗಳನ್ನು ಸರಿಯಾಗಿ ಇಟ್ಟುಕೊಂಡಿರಿ. ಬ್ಯಾಂಕ್ ವ್ಯವಹಾರಕ್ಕಾಗಿ ನಿಮ್ಮ ಬಹಳ ಸಮಯ ಮೀಸಲಿಡಬೇಕಾಗುತ್ತದೆ. ತಡವಾಗಿಯಾದರೂ ಕೆಲಸ ಮುಗಿಯುತ್ತದೆ ಎಂಬುದು ಸಮಾಧಾನಕರ ಸಂಗತಿ.
ನೀವು ಯಾರಿಗೆ ಈ ಹಿಂದೆ ಸಹಾಯ ಮಾಡಿದ್ದರೋ ಅದೇ ವ್ಯಕ್ತಿಯಿಂದ ಕೆಲಸಕ್ಕೆ ಸಮಸ್ಯೆ ಆಗುವ ಸಾಧ್ಯತೆ ಇದೆ. ದೇಹಾಲಸ್ಯದಿಂದ ಮುಖ್ಯ ಕೆಲಸಗಳನ್ನು ಮುಂದಕ್ಕೆ ಹಾಕುವಂತೆ ಆಗಬಹುದು. ಸಿಕ್ಕ ಅವಕಾಶವೊಂದು ಕೈ ಜಾರಿ ಹೋಗುವ ಸಾಧ್ಯತೆ ಇದೆ. ಸುಲಭವಾಗಿ ಸೋಲಪ್ಪದ ಆಸಾಮಿ ನೀವು. ಪಟ್ಟು ಹಿಡಿದು ಸಾಧನೆ ಮಾಡುತ್ತೀರಿ.
ದೇವರ ಮೇಲಿನ ನಂಬಿಕೆಯನ್ನು ಬಿಡಬೇಡಿ. ಯಾವುದೇ ತಾತ್ಕಾಲಿಕ ಹಿನ್ನಡೆಗೆ ಇನ್ಯಾರನ್ನೋ ಹೊಣೆ ಮಾಡಿ, ಆರೋಪಿಸುವುದಕ್ಕಿಂತ ವಾಸ್ತವವನ್ನು ಒಪ್ಪಿಕೊಳ್ಳಿ. ದೀರ್ಘ ಕಾಲದಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಉಲ್ಬಣ ಆಗುವ ಸಾಧ್ಯತೆಗಳಿವೆ. ಹಣ ಹೂಡಿಕೆ ಮಾಡುವ ಮುನ್ನ ಸೂಕ್ಷ್ಮವಾಗಿ ಅಳೆದು- ತೂಗಿ ಮುಂದಕ್ಕೆ ಹೆಜ್ಜೆ ಇಡಿ.
ಸ್ವಾವಲಂಬಿಯಾಗಿ ಇರಬೇಕು ಎಂಬ ನಿಮ್ಮ ಆಸೆಗೆ ಪೂರಕವಾದ ಬೆಳವಣಿಗೆಗಳು ನಡೆಯಲಿವೆ. ನಿಮಗೆ ಬರಬೇಕಿದ್ದ ಮೊತ್ತವನ್ನು ವಾಪಸ್ ಪಡೆಯುವುದಕ್ಕೆ ಮಾರ್ಗ ಗೋಚರಿಸುತ್ತದೆ. ದಾಕ್ಷಿಣ್ಯದಿಂದ ದೊಡ್ಡ ಜವಾಬ್ದಾರಿಯೊಂದನ್ನು ನೀವಾಗಿಯೇ ಮೈ ಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆ.
ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ನಿರಾಶಾದಾಯಕವಾದ ಕೆಲ ಬೆಳವಣಿಗೆಗಳು ನಡೆಯಲಿವೆ. ಕೈಲಿರುವ ಹಣ ಕೂಡ ಖರ್ಚಾಗಿ ಮುಂದೇನು ಮಾಡಬೇಕು ಎಂದು ದಿಕ್ಕು ತೋಚದಂತಾಗುತ್ತದೆ. ನಂಬಿಕೆ ಇಟ್ಟು ನಡೆಸಿದ್ದ ವ್ಯವಹಾರವು ನಷ್ಟಕ್ಕೆ ಗುರಿಯಾಗಬಹುದು ಅಥವಾ ಲಾಭದ ಪ್ರಮಾಣ ಕಡಿಮೆ ಆಗಲಿದೆ.
ಲ್ಯಾಪ್ ಟಾಪ್, ಫೋನ್ ಅಥವಾ ಇನ್ಯಾವುದೇ ಗ್ಯಾಜೆಟ್ ಖರೀದಿಗೆ ಹಣ ಖರ್ಚು ಮಾಡುವ ಯೋಗ ಇದೆ. ನಿಮ್ಮಿಂದ ನೆರವು ಕೇಳಿಕೊಂಡು ಬಂದವರಿಗೆ ಸಹಾಯ ಹಸ್ತ ಚಾಚಲಿದ್ದೀರಿ. ಈ ಮೂಲಕ ನಿಮ್ಮ ಕೀರ್ತಿ, ಪ್ರತಿಷ್ಠೆಗಳು ಸಮಾಜದಲ್ಲಿ ಹೆಚ್ಚಾಗಲಿದೆ. ತಾಯಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.
ನೀವು ಈ ಹಿಂದೆ ಪಟ್ಟಿದ್ದ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಪ್ರಭಾವಿ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ. ನೀವಾಡುವ ಯಾವುದೋ ಒಂದು ಮಾತಿನಿಂದ ಭವಿಷ್ಯಕ್ಕೆ ತೊಂದರೆ ಆಗಬಹುದು. ಆದ್ದರಿಂದ ಮೌನವಾಗಿದ್ದುಕೊಂಡೇ ಕೆಲಸ ಪೂರ್ತಿ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಿ.
ಸಣ್ಣ- ಪುಟ್ಟ ಸಂಗತಿಗಳಲ್ಲೂ ನಿಮ್ಮ ಸಾಮರ್ಥ್ಯ ತೋರುವುದಕ್ಕೆ ಅವಕಾಶ ದೊರೆಯುತ್ತದೆ. ಮೇಲಧಿಕಾರಿಗಳ ಜತೆ ಉತ್ತಮ ಬಾಂಧವ್ಯ ಇರುತ್ತದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗೆ ಸೂಕ್ತ ಔಷಧೋಪಚಾರ ದೊರೆಯುವ ಸಾಧ್ಯತೆ ಇದೆ.
ಅಪರಿಚಿತರ ಜತೆಗೆ ವಿನಾಕಾರಣ ವಾಗ್ವಾದ, ಸಣ್ಣ- ಪುಟ್ಟ ಮನಸ್ತಾಪಗಳು ಆಗುವ ಸಾಧ್ಯತೆ ಇದೆ. ನೀವಾಗಿಯೇ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಿರಿ. ಯಾರೋ ಹೇಳಿದ ಮಾತನ್ನು ನಂಬಿಕೊಂಡು, ಆಪ್ತರ ಬಗ್ಗೆ ಅನುಮಾನ ಪಡುವುದು ಒಳ್ಳೆಯದಲ್ಲ. ನಿದ್ರೆ ಕೆಡದಂತೆ ಜಾಗ್ರತೆ ವಹಿಸಿ.
ದುಡ್ಡು- ಕಾಸಿನ ವಿಚಾರದಲ್ಲಿ ಕಡ್ಡಿ ತುಂಡು ಮಾಡಿದಂತೆ ಮಾತನಾಡುವ ನಿಮ್ಮ ವೈಖರಿ ಮೆಚ್ಚುಗೆಗೆ ಪಾತ್ರವಾಗಲಿದೆ. ಈ ದಿನ ನಿಮ್ಮ ಮೇಲೆ ದೈವಾನುಗ್ರಹ ಇರುತ್ತದೆ. ಬಹಳ ಕಷ್ಟದ ಕೆಲಸಗಳನ್ನು ಸುಲಭವಾಗಿ ಮಾಡಿಕೊಳ್ಳಲು ದಾರಿ ಗೋಚರವಾಗುತ್ತದೆ. ಆಲಸ್ಯ ಮಾಡದೆ ಬೇಗ ಕೆಲಸ ಮುಗಿಸಿಕೊಳ್ಳಿ.
ನಿಮ್ಮ ಸಂಸಾರದ ಗುಟ್ಟನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ. ಇದರಿಂದ ಅವಮಾನದ ಪಾಲಾಗುತ್ತೀರಿ. ಗುರು- ಹಿರಿಯರ ಸಲಹೆಯನ್ನು ಪಾಲಿಸಿ. ಆಹಾರ- ನೀರು ಸೇವನೆ ವಿಚಾರದಲ್ಲಿ ಕಟ್ಟುನಿಟ್ಟಿನ ಪಥ್ಯವನ್ನು ಪಾಲಿಸಿ. ಹೆಚ್ಚು ಖರ್ಚು ಮಾಡಬೇಕಾದ ಸನ್ನಿವೇಶ ಎದುರಾಗಲಿದೆ.
ಕುಟುಂಬದವರ ಜತೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ. ಮನರಂಜನೆಗಾಗಿ, ಔತಣ ಕೂಟಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ. ನಿಮ್ಮ ಮಾತಿನ ಮೂಲಕ ಇತರರನ್ನು ಆಕರ್ಷಿಸುತ್ತೀರಿ. ನಿರೀಕ್ಷಿತ ಮೂಲಗಳಿಂದ ಧನಾಗಮ ಇರುವುದರಿಂದ ಚಿಂತೆ ಮಾಡುವ ಅಗತ್ಯ ಇಲ್ಲ.
Tags:
ದಿನ ಭವಿಷ್ಯ