ಬೇರೊಬ್ಬರ ಭರವಸೆ ಮಾತುಗಳನ್ನು ನಂಬಿ, ಹಣದ ವಿಚಾರದಲ್ಲಿ ಇನ್ನೊಬ್ಬರಿಗೆ ಮಾತು ನೀಡಬೇಡಿ. ವ್ಯವಹಾರ ಪೂರ್ತಿ ಆಗುವ ತನಕ ಯಾರ ಬಳಿಯೂ ಆ ಬಗ್ಗೆ ಮಾತನಾಡಬೇಡಿ. ಬರೀ ಮಾತುಕತೆಯಲ್ಲಿ ಒಪ್ಪಂದ ಮಾಡಿಕೊಳ್ಳುವುದಕ್ಕಿಂತ ದಾಖಲೆಯಲ್ಲಿ ಇರಲಿ. ನಿಮಗಿರುವ ಹಣದ ತುರ್ತನ್ನು ಇತರರು ದುರುಪಯೋಗ ಮಾಡಿಕೊಳ್ಳಬಹುದು, ಎಚ್ಚರ.
ಪ್ರೀತಿ- ಪ್ರೇಮದಲ್ಲಿ ಇರುವವರು ಈ ಬಗ್ಗೆ ಮನೆಯಲ್ಲಿ ವಿಷಯ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಮದುವೆ ಆಗುವ ಬಗ್ಗೆ ಗೊಂದಲಗಳು ಇದ್ದಲ್ಲಿ ಅದು ಈ ದಿನ ನಿವಾರಣೆ ಆಗುವ ಸಾಧ್ಯತೆ ಇದೆ. ಸೋದರ- ಸೋದರಿಯರಿಂದ ಹಲವು ವಿಚಾರಗಳಲ್ಲಿ ಒತ್ತಡ ಸೃಷ್ಟಿ ಆಗಬಹುದು.
ಏಕಾಗ್ರತೆ ಬಹಳ ಮುಖ್ಯವಾಗುತ್ತದೆ. ಹೇಳಿದ ಕೆಲಸವನ್ನು ಅತ್ಯುತ್ತಮವಾಗಿ ಮಾಡುವ ಪ್ರಯತ್ನದಲ್ಲಿ ಡೆಡ್ ಲೈನ್ ನಲ್ಲಿ ಮಾಡಲಿಕ್ಕೆ ಆಗದ ಸನ್ನಿವೇಶ ಎದುರಾಗಬಹುದು. ಆದ್ದರಿಂದ ಅಗತ್ಯವನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಕೆಲಸ ಮಾಡಿ. ಇನ್ನೊಬ್ಬರಿಂದ ನೆರವು ತೆಗೆದುಕೊಳ್ಳುವ ಸ್ಥಿತಿ ಬಂದಲ್ಲಿ ಸಜ್ಜನರಿಂದ ಸಹಾಯ ಪಡೆಯಿರಿ.
ಸ್ವಂತ ಮನೆ ಇರುವವರಿಗೆ ಸಣ್ಣ- ಪುಟ್ಟ ದುರಸ್ತಿ ಮಾಡಿಸಬೇಕಾದ ಪರಿಸ್ಥಿತಿ ಬರುತ್ತದೆ. ಇದಕ್ಕಾಗಿ ಸಾಲ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಬಹುದು. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚಿ. ಕೈಗೆ ಮೀರಿದ ಖರ್ಚು ಮಾಡಿದರೆ ಆ ನಂತರ ಪರಿತಪಿಸಬೇಕಾಗುತ್ತದೆ. ತಂದೆ- ತಾಯಿಯ ಸಲಹೆಯನ್ನು ಕೇಳಿ.
ಹಿತಶತ್ರುಗಳ ಕಾಟ ಇರುತ್ತದೆ. ನಿಮ್ಮ ಏಳ್ಗೆಯನ್ನು ಸಹಿಸಲಾಗದೆ ಮೇಲಧಿಕಾರಿಗಳ ಬಳಿ ಚಾಡಿ ಹೇಳುವ ಸಾಧ್ಯತೆ ಇದೆ. ಸಿಹಿ ಪದಾರ್ಥಗಳ ಸೇವನೆಯಿಂದ ದೂರ ಇರಿ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಿರುವಂತೆ ಎಚ್ಚರಿಕೆ ವಹಿಸಿ. ಸಹೋದ್ಯೋಗಿಗಳ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.
ನಿಮ್ಮಷ್ಟಕ್ಕೆ ಇರಬೇಕು ಅಂದರೂ ಈ ದಿನ ಸಾಧ್ಯವಾಗುವುದಿಲ್ಲ. ಸಾಮಾಜಿಕ ಕೆಲಸ- ಕಾರ್ಯಗಳಲ್ಲಿ ಸಕ್ರಿಯರಾಗಿ ತೊಡಗಿಕೊಳ್ಳುತ್ತೀರಿ. ನಿಮ್ಮ ಸಲಹೆ- ಸೂಚನೆಗಳಿಂದ ದೊಡ್ಡ ಮಟ್ಟದ ಬದಲಾವಣೆ ತರುವುದಕ್ಕೆ ಸಾಧ್ಯವಾಗಲಿದೆ. ಧಾರ್ಮಿಕ ಚಿಂತನೆಗಳಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.
ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸವಾಲಿನ ದಿನವಾಗಿರುತ್ತದೆ. ಕೆಲಸ- ಕಾರ್ಯದಲ್ಲಿ ನೆಮ್ಮದಿ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ತಾಳ್ಮೆ ಕಳೆದುಕೊಂಡು ಮಾತನಾಡಿದಲ್ಲಿ ಕೆಲಸ ಹೋಗುವ ಭೀತಿ ಇದೆ. ಆದ್ದರಿಂದ ಈ ದಿನ ಸಾಧ್ಯವಾದಷ್ಟೂ ಮೌನವಾಗಿರಿ. ದುರ ಪ್ರಯಾಣ ಯೋಗ ಇದೆ.
ಯಾರದೋ ಓಲೈಕೆಗಾಗಿ ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ದೈವಾನುಗ್ರಹ ನಿಮ್ಮ ಮೇಲೆ ಇರುವುದರಿಂದ ಹಲವು ಸವಾಲುಗಳನ್ನು ಸುಲಭವಾಗಿ ದಾಟುತ್ತೀರಿ. ಮನೆಗೆ ಅಗತ್ಯ ಇರುವ ಎಲೆಕ್ತ್ರಾನಿಕ್ ವಸ್ತುಗಳನ್ನು ಖರೀದಿ ಮಾಡಬೇಕಾಗುತ್ತದೆ. ಅದಕ್ಕಾಗಿ ಹೆಚ್ಚು ಖರ್ಚು ಮಾಡುವ ಯೋಗ ಇದೆ.
ವ್ಯಾಪಾರಿಗಳು- ವ್ಯವಹಾರಸ್ಥರಿಗೆ ಅನಿವಾರ್ಯವಾಗಿ ಬದಲಾವಣೆ ಮಾಡಿಕೊಳ್ಳಬೇಕಾದ ದಿನ ಇದು. ಹಣಕಾಸು ವಿಚಾರ, ಸಂಬಂಧ, ಮಕ್ಕಳ ಭವಿಷ್ಯ ಹೀಗೆ ನಾನಾ ಸಂಗತಿಗಳು ನಿಮ್ಮೆದುರು ಬರುತ್ತವೆ. ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವವರು ಬಹಳ ಎಚ್ಚರಿಕೆಯಿಂದ ಪೋಸ್ಟ್- ಕಾಮೆಂಟ್ ಮಾಡಬೇಕು. ಇನ್ನು ಚರ್ಮದ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗುವ ಸಾಧ್ಯತೆ ಇದೆ. ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಉತ್ತಮ. ಇತರರನ್ನು ನಂಬುವ ಮುನ್ನ ಪೂರ್ವಾಪರ ಆಲೋಚಿಸಿ.
ವಾಹನ ಖರೀದಿ, ಮನೆ ಖರೀದಿ ಅಥವಾ ಮತ್ಯಾವುದೇ ಖರೀದಿ ವ್ಯವಹಾರಗಳು ಒಂದು ಹೆಜ್ಜೆ ಮುಂದಕ್ಕೆ ಇಡಲು ನೆರವಾಗುತ್ತವೆ. ಕುಟುಂಬದವರ ಬೆಂಬಲದಿಂದಾಗಿ ನಿಮ್ಮ ಕನಸು ಈಡೇರಿಸಿಕೊಳ್ಳುವುದಕ್ಕೆ ಮಾರ್ಗಗಳು ಗೋಚರವಾಗುತ್ತವೆ. ಹಾಗಂತ ದೊಡ್ಡ ಮೊತ್ತದ ಸಾಲ ಮಾಡದಿರುವುದು ಉತ್ತಮ.
ನಿರೀಕ್ಷೆಗೆ ಮೀರಿದ ಆದಾಯ ಬರುವ ಸಾಧ್ಯತೆಗಳಿವೆ. ಹೇಗೆ ಹಣವನ್ನು ವಿನಿಯೋಗ ಮಾಡುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ. 'ನಮಗಾಗಿ ಇಷ್ಟನ್ನು ಸಹ ಖರ್ಚು ಮಾಡಿಕೊಳ್ಳದಿದ್ದರೆ ಹೇಗೆ?' ಎಂಬ ಧೋರಣೆ ಬೇಡ. ಖರ್ಚಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಿ.
Tags:
ದಿನ ಭವಿಷ್ಯ














