ಆಪ್ತರ ಬಗ್ಗೆಯೇ ಅನಗತ್ಯ ವಿಚಾರಗಳಿಗೆ ಅನುಮಾನ ಪಡುವುದು ಸರಿಯಲ್ಲ. ಚಾಡಿ ಮಾತಿಗೆ ಕಿವಿ ಕೊಡಬೇಡಿ. ಯಾವುದೇ ಸಂದೇಹ ಇದ್ದರೂ ಕೂತು, ಮಾತನಾಡಿ ಬಗೆಹರಿಸಿಕೊಳ್ಳಿ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಸುಲಭಕ್ಕೆ ಹಣ ಮಾಡಬಹುದು ಎಂದು ಇತರರು ದಾರಿ ತಪ್ಪಿಸಬಹುದು, ಅಂಥವರಿಂದ ಜೋಪಾನವಾಗಿರಿ.
ಮನಸ್ಸಿನಲ್ಲಿ ಇರುವ ಮಾತನ್ನು ಧೈರ್ಯವಾಗಿ ಹೇಳಿ. ಉದ್ಯೋಗದ ಅನಿಶ್ಚಿತತೆ ಕಾಡುತ್ತಿದ್ದಲ್ಲಿ ಆ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗುವಂಥ ಬೆಳವಣಿಗೆಗಳು ನಡೆಯುತ್ತವೆ. ಈ ಹಿಂದೆ ನಿಮ್ಮಿಂದ ಸಹಾಯ ಪಡೆದವರು ಈಗ ನಿಮಗೆ ನೆರವು ನೀಡುವುದಕ್ಕೆ ಸಹಾಯ ಹಸ್ತ ಚಾಚಬಹುದು.
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಕಾಲು ನೋವು- ಭುಜದ ನೋವು ಕಾಡಬಹುದು. ಮೇಲಧಿಕಾರಿಗಳ ಜತೆಗಿನ ಸಂಬಂಧ ಉತ್ತಮಗೊಳ್ಳಲಿದೆ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಸಹೋದ್ಯೋಗಿಗಳು ಮೆಚ್ಚಿಕೊಳ್ಳಲಿದ್ದಾರೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರು ಉತ್ತಮ ಅವಕಾಶವನ್ನು ಎದುರು ನೋಡಬಹುದು.
ಎಲ್ಲೆಡೆಯೂ ಸಲ್ಲುವಂಥ ವ್ಯಕ್ತಿ ನೀವು ಎಂಬ ಗೌರವಕ್ಕೆ ಪಾತ್ರರಾಗುತ್ತೀರಿ. ಸ್ವತಂತ್ರವಾಗಿ ನೀವು ತೆಗೆದುಕೊಂಡ ನಿರ್ಧಾರಗಳಿಂದ ಅನುಕೂಲವಾಗಲಿದೆ. ವಾಹನ- ಮನೆ ಖರೀದಿ ಪ್ರಯತ್ನದಲ್ಲಿ ಇರುವವರಿಗೆ ಬ್ಯಾಂಕ್ ವ್ಯವಹಾರ ಸಲೀಸಾಗಿ ಆಗುವ ಸಾಧ್ಯತೆಗಳು ಇವೆ. ಪ್ರೇಮಿಗಳಿಗೆ ಸುಮಧುರ ಕ್ಷಣಗಳನ್ನು ಕಳೆಯುವ ಯೋಗ ಇದೆ.
ಉದ್ಯೋಗದಲ್ಲಿ ಒತ್ತಡ ಕಂಡುಬರಲಿದೆ. ನಿಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ. ನಿಯಮಿತವಾಗಿ ಮಾತ್ರೆ- ಔಷಧಿಗಳನ್ನು ಸ್ವೀಕರಿಸಿ. ಇಲ್ಲದಿದ್ದಲ್ಲಿ ಈ ಹಿಂದೆ ಇದ್ದ ಕಾಯಿಲೆ ಮರುಕಳಿಸಿ, ಉಲ್ಬಣಿಸುವ ಸಾಧ್ಯತೆಗಳಿವೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಸಾಲ ಕೊಡುವುದಕ್ಕೋ ಅಥವಾ ಸಾಲಕ್ಕೆ ಜಾಮೀನಾಗುವುದಕ್ಕೋ ಹೋಗಬೇಡಿ.
ನಿಮ್ಮ ಪ್ರಭಾವಿ ಮಾತುಗಳಿಂದ ಇತರರಲ್ಲಿ ಬದಲಾವಣೆ ತರುವಷ್ಟು ಸಮರ್ಥರಾಗುತ್ತೀರಿ. ಅನಿವಾರ್ಯ ಸ್ಥಿತಿ ಏರ್ಪಟ್ಟು, ಪ್ರಯಾಣ ಮಾಡಬೇಕಾಗುತ್ತದೆ. ಸಂಗಾತಿ ಆರೋಗ್ಯದ ಕಾಳಜಿ ಮಾಡುವ ಸಲುವಾಗಿ ಹೆಚ್ಚಿನ ಖರ್ಚಿದೆ. ನೆರವು ಪಡೆಯುವ ಮುಂಚೆ ಆ ವ್ಯಕ್ತಿಯ ಅರ್ಹತೆಯನ್ನು ಅರಿತುಕೊಳ್ಳಿ.
ನಿರಂತರವಾದ ಕೆಲಸದಿಂದ ಮಾನಸಿಕ- ದೈಹಿಕ ಒತ್ತಡ ಏರ್ಪಡಬಹುದು. ಯಾರ ಮೇಲಿನ ಮುನಿಸಿಗಾಗಿ ಮತ್ಯಾರನ್ನೋ ಓಲೈಸುವುದಕ್ಕೆ ಹೋಗದಿರಿ. ಇದರಿಂದ ಅವಮಾನದ ಪಾಲಾಗುತ್ತೀರಿ. ನಿಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತನಾಡಿ, ಕೆರಳಿಸುವುದಕ್ಕೆ ಕೆಲವರು ಪ್ರಯತ್ನಿಸುತ್ತಾರೆ. ಅಂಥವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ.
ಉದ್ಯೋಗ ವಿಚಾರದಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಮೇಲಧಿಕಾರಿಗಳು ಸಂತಸ ವ್ಯಕ್ತಪಡಿಸುತ್ತಾರೆ. ಹೊಸ ಹುದ್ದೆ ಅಥವಾ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ಇದನ್ನು ಹಿಂಜರಿಯದೆ ಒಪ್ಪಿಕೊಂಡರೆ ಭವಿಷ್ಯದಲ್ಲಿ ಇನ್ನಷ್ಟು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಇಡೀ ದಿನ ನೆಮ್ಮದಿಯಿಂದ ಕಳೆಯುವುದಕ್ಕೆ ಬೇಕಾದ ವಾತಾವರಣ ಇರುತ್ತದೆ. ಅಧ್ಯಾತ್ಮ ಚಿಂತನೆಯಿಂದ ಹೊಸ ಉತ್ಸಾಹ ನಿಮ್ಮಲ್ಲಿ ಮೂಡಲಿದೆ. ಅಸಹಾಯಕರಿಗೆ ನೆರವು ನೀಡಲಿದ್ದೀರಿ. ಹೊಸ ಬಟ್ಟೆ, ಒಡವೆಗಳನ್ನು ಖರೀದಿ ಮಾಡುವ ಯೋಗ ಇದೆ. ಆದರೆ ಸಾಲದ ಬಗ್ಗೆ ಗಮನ ಇರಲಿ.
ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಎಚ್ಚರಿಕೆ ಇರಲಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿಮ್ಮ ರಹಸ್ಯವನ್ನು ಇತರರ ಜತೆಗೆ ಹಂಚಿಕೊಳ್ಳಬೇಡಿ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ ವಿಪರೀತ ಜಾಗ್ರತೆ ಅಗತ್ಯ. ಹೆಚ್ಚಿನ ಬಡ್ಡಿ ಆಸೆಗೆ ಅಥವಾ ಸಟ್ಟಾ ವ್ಯವಹಾರದಲ್ಲಿ ಹಣ ತೊಡಗಿಸಿ, ನಷ್ಟ ಅನುಭವಿಸುವ ಯೋಗ ಇದೆ.
ಭೂಮಿ- ಆಸ್ತಿ ವ್ಯವಹಾರಗಳನ್ನು ಮಾಡುವಾಗ ಅನುಭವಿಗಳ ನೆರವು ಪಡೆಯಿರಿ. ಸುಲಭಕ್ಕೆ ಸಾಲ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಹಣವನ್ನು ಸಾಲ ಪಡೆಯುವುದು ಒಳ್ಳೆ ನಿರ್ಧಾರ ಅಲ್ಲ. ನೀವಾಗಿಯೇ ಮುಂದಾಗಿ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದು ಉತ್ತಮವಲ್ಲ. ಇದರಿಂದ ಇತರರು ನಿಮ್ಮನ್ನು ಅನುಮಾನದಿಂದ ನೋಡುವಂತಾಗುತ್ತದೆ.
ನೀವು ಯಾರ ಬಗ್ಗೆ ಸಿಟ್ಟು ಇಟ್ಟುಕೊಂಡಿರುವಿರೋ ಅಂಥವರ ಜತೆಗೆ ಮಾತನಾಡಬೇಕಾದ ಅಥವಾ ಜತೆಗೂಡಿ ಕೆಲಸ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ಇದರಿಂದ ನಿಮ್ಮ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವ ಅಗತ್ಯ ಇಲ್ಲ. ಇದು ತಾತ್ಕಾಲಿಕ ಮಾತ್ರ ಎಂಬುದು ನೆನಪಿನಲ್ಲಿರಲಿ.
Tags:
ದಿನ ಭವಿಷ್ಯ














