ಬಂಗಾರ ಖರೀದಿಗೆ ಅಕ್ಷಯ ತೃತೀಯ ಸಕಾಲ. ಸಾಂಪ್ರದಾಯಿಕ ಅಕ್ಷಯ ತೃತೀಯ ಇದೇ ಭಾನುವಾರ ಏಪ್ರಿಲ್ 26ರಂದು ಬರುತ್ತಲಿದೆ.
ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಅದು ವೃದ್ದಿಯಾಗುತ್ತದೆ. ಸನ್ಮಂಗಳವನ್ನು ಉಂಟುಮಾಡುತ್ತದೆ ಎಂಬುದು ಪ್ರತೀತಿ.
ಪ್ರತೀ ವರ್ಷ ಜ್ಯುವೆಲರ್ಸಗಳು ಅತ್ಯಾಕರ್ಷಕ ಉಡುಗೊರೆ, ಡಿಸ್ಕೌಂಟ್‌ಗಳನ್ನು ನೀಡುತ್ತಾರೆ. ಆದರೆ ಈ ಬಾರಿ ಕೊರೋನಾ ವೈರಸ್ ಸಮಸ್ಯೆಯಿಂದಾಗಿ ಜನರು ಮನೆಯಿಂದ ಹೊರಬರಲಾರದೇ ತೊಳಲಾಡುತ್ತಿದ್ದಾರೆ. ಮೇ 3 ರ ವರೆಗೆ ಲಾಕ್‌ಡೌನ್ ಇರುವ ಕಾರಣ ಅಂಗಡಿಗಳಿಗೆ ತೆರಳಿ ಚಿನ್ನ ಖರೀದಿ ದುಷ್ಫಲವಾಗುತ್ತಲಿದೆ.
ಈ ಸಮಸ್ಯೆಗೆ ಜ್ಯುವೆಲ್ಲರ್‌ಗಳು ಸರ್ಕಾರದ ಆದೇಶ ಪಾಲಿಸಿಕೊಂಡೇ ಆನ್ಲೈನ್ ಮುಖಾಂತರ ಬಂಗಾರ ವ್ಯವಹಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ.
ಆನ್ಲೈನ್ ಮುಖಾಂತರ ಜನರನ್ನು ಸುಲಭವಾಗಿ ತಲುಪಲು ಅವಕಾಶವಿದ್ದು, ತಮ್ಮ ಸ್ವಂತ ಅಥವಾ ಸಂಯೋಜನೆ ಮೂಲಕ ವೆಬ್ಸೈಟ್ ಬಳಸಿ ಆನ್ಲೈನ್ ನಲ್ಲಿ ಚಿನ್ನ ವ್ಯಾಪಾರಕ್ಕೆ ಅನುಕೂಲ ಒದಗಿಸಲಿದ್ದಾರೆ.
ಶಿರಸಿಯಲ್ಲಿಯೂ ಸಹ ಆನ್ಲೈನ್ ಮುಖಾಂತರ ವ್ಯಾಪಾರ ನಡೆಸಬೇಕು ಎನ್ನುವ ಮಾತಗಳು ಕೇಳಿ ಬಂದಿದ್ದು ಹಲವು ವ್ಯಾಪಾರಸ್ಥರು ಇದರ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.
ಅತೀ ಕಡಿಮೆದರದಲ್ಲಿ ವೆಬ್ಸೈಟ್ ನಿರ್ಮಿಸುವ ಅವಕಾಶವಿದ್ದು, ಸರ್ಕಾರದ ನಿಯಮ ಪಾಲಿಸಿ ಆನ್ಲೈನ್ ಮುಖಾಂತರ ವ್ಯವಹಾರಕ್ಕೆ ಇದು ಸಕಾಲವಾಗಲಿದೆ.
ವೆಬ್ಸೈಟ್ ಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಜಯ ಭಟ್ಟ - 9986448244
#GoldOnline #COVID19 #KaravaliExpress