ಇಂದಿನ ಭವಿಷ್ಯ ಏಪ್ರಿಲ್ 22, 2020

Todays horoscope in kannada Todays astrology in kannada

Today astrology in kannada today horoscope in kannada
ದಾಕ್ಷಿಣ್ಯದ ಕಾರಣಕ್ಕೆ ಕೆಲವು ಅವಕಾಶಗಳನ್ನು ಬಿಟ್ಟುಕೊಡಬೇಕಾಗುತ್ತದೆ. ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ಕಡೆಗೆ ಗಮನ ನೀಡಿ. ಉದ್ಯೋಗಸ್ಥರಿಗೆ ಮಾನಸಿಕ ಹಿಂಸೆ, ಕಿರಿಕಿರಿ ಅನುಭವಕ್ಕೆ ಬರುತ್ತದೆ. ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗುತ್ತದೆ. ಯಾರ ಜತೆಗೆ ವಾಗ್ವಾದಕ್ಕೆ ಇಳಿಯಬೇಡಿ.

Today astrology in kannada today horoscope in kannada
ನಿಮ್ಮ ಗುರಿ ಈಡೇರಿಸಿಕೊಳ್ಳಲು ಮಹತ್ವದ ಹೆಜ್ಜೆಗಳನ್ನು ಇಡಲಿದ್ದೀರಿ. ಇದಕ್ಕೆ ಕುಟುಂಬದ ಬೆಂಬಲವೂ ದೊರೆಯಲಿದೆ. ಉದ್ಯಮಿಗಳು, ವ್ಯಾಪಾರಿಗಳು ಖರ್ಚು ಕಡಿಮೆ ಮಾಡಿಕೊಳ್ಳಲು ಕೆಲವು ಕ್ರಮಗಳಿಗೆ ಮುಂದಾಗಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಕೆಲವರು ಅಪಪ್ರಚಾರ ಮಾಡಲಿದ್ದಾರೆ.

Today astrology in kannada today horoscope in kannada
ಕೆಲವು ಯೋಜನೆಗಳ ಬಗ್ಗೆ ಆರಂಭದಲ್ಲಿ ನಿಮಗಿದ್ದ ಉತ್ಸಾಹ ಈಗ ಇಲ್ಲದಂತಾಗುತ್ತದೆ. ಇತರರ ಕೊಂಕು ಮಾತಿನಿಂದ ಉತ್ಸಾಹ ಕಳೆದುಕೊಳ್ಳುತ್ತೀರಿ. ಮೇಲಧಿಕಾರಿಗಳ ಚುಚ್ಚು ಮಾತಿನಿಂದ ಇನ್ನಷ್ಟು ಸಿಟ್ಟು ಬರುತ್ತದೆ. ಧ್ಯಾನ, ಯೋಗ ಮಾಡುವ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ.

Today astrology in kannada today horoscope in kannada
ಮಾನಸಿಕವಾಗಿ ಬಹಳ ಗಟ್ಟಿ ಇರುತ್ತೀರಿ. ಪ್ರಮುಖವಾದ ತೀರ್ಮಾನಗಳನ್ನು ಲಾಭದಾಯಕ ಆಗುವಂತೆ ತೆಗೆದುಕೊಳ್ಳುವ ಮೂಲಕ ಇತರರಿಗೆ ಮಾದರಿ ಆಗುತ್ತೀರಿ. ಸಂಕುಚಿತ ಸ್ವಭಾವದ ವ್ಯಕ್ತಿಗಳಿಂದ ದೂರ ಇರಿ. ನಿಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಬರಲಿದೆ. ಸರಿಯಾಗಿ ನಿರ್ವಹಿಸುವ ಮೂಲಕ ಹೆಚ್ಚಿನ ಲಾಭ ಪಡೆದುಕೊಳ್ಳಿ.

Today astrology in kannada today horoscope in kannada
ಸ್ವಂತ ಮನೆ ಇರುವವರಿಗೆ ಖರ್ಚು- ವೆಚ್ಚ ಹೆಚ್ಚಾಗಲಿದೆ. ದುರಸ್ತಿ ಮತ್ತಿತರ ಕಾರ್ಯಗಳಿಗೆ ಹಣ ಹೊಂದಿಸಲು ಮುಂದಾಗಲಿದ್ದೀರಿ. ಏಕ ಕಾಲಕ್ಕೆ ಹಲವು ಖರ್ಚುಗಳು ಬರಲಿವೆ. ಇನ್ನು ಮನರಂಜನೆ ಸಲುವಾಗಿ ಹೆಚ್ಚಿನ ಹಣ ಖರ್ಚು ಮಾಡಲಿದ್ದೀರಿ. ದೀರ್ಘ ಕಾಲದ ಆಸೆಗಳನ್ನು ಪೂರೈಸಿಕೊಳ್ಳಲಿದ್ದೀರಿ.

Today astrology in kannada today horoscope in kannada
ಪ್ರೇಮಿಗಳಿಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಕೇಳುವ ಯೋಗ ಇದೆ. ವಾಹನ ಖರೀದಿಯ ಬಗ್ಗೆ ಬಹಳ ಹಿಂದಿನಿಂದಲೂ ಆಲೋಚಿಸುತ್ತಿರುವವರು ಅಂತಿಮ ತೀರ್ಮಾನಕ್ಕೆ ಬರಲಿದ್ದೀರಿ. ದಾನ- ಧರ್ಮಾದಿ ಕಾರ್ಯಗಳ ಬಗ್ಗೆ ಆಸಕ್ತಿ ಮೂಡುತ್ತದೆ.

Today astrology in kannada today horoscope in kannada
ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಜತೆಗೆ ಹೆಚ್ಚಿನ ಸಮಯ ಕಳೆಯಲಿದ್ದೀರಿ. ಮುಖ್ಯ ಕಾಗದ- ಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಹೂಡಿಕೆ ಮಾಡಿದ್ದರಿಂದ ಹೆಚ್ಚಿನ ಲಾಭ ನಿರೀಕ್ಷೆ ಮಾಡಬಹುದು. ಸಂಬಂಧಿಕರು ಸಹಾಯ ಕೇಳಿಕೊಂಡು ಬರುವ ಸಾಧ್ಯತೆ ಇದ್ದು, ನಿಮ್ಮಿಂದ ಸಾಧ್ಯವಾದ ನೆರವು ನೀಡಿ.

Today astrology in kannada today horoscope in kannada
ಸಣ್ಣ- ಪುಟ್ಟ ವಿಚಾರಗಳಿಗೆ ಸಂಗಾತಿ ಜತೆಗೆ ಮನಸ್ತಾಪ ಆಗಬಹುದು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಮೇಲಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಲಿದ್ದಾರೆ. ಈ ಸಮಯ ಕಳೆಯುವ ತನಕ ಸಾಧ್ಯವಾದಷ್ಟೂ ಮೌನವಾಗಿರಿ. ಅನಗತ್ಯವಾಗಿ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.

Today astrology in kannada today horoscope in kannada
ಶಿಕ್ಷಕರು, ಉಪನ್ಯಾಸಕರಿಗೆ ಹೊಸ ಅವಕಾಶಗಳು ಸಿಗುತ್ತವೆ. ಆದಾಯದಲ್ಲಿ ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುತ್ತದೆ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ನಿಮಗಿದೆ. ಹಿತಶತ್ರುಗಳಿಂದ ಬಹಳ ಎಚ್ಚರಿಕೆ ವಹಿಸಬೇಕು. ಅಂತರಂಗದ ಗುಟ್ಟನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

Today astrology in kannada today horoscope in kannada
ನೀವು ಕೈಗೊಳ್ಳುವ ನಿರ್ಧಾರಗಳು ಮೆಚ್ಚುಗೆಗೆ ಪಾತ್ರವಾಗುತ್ತವೆ. ವಾಸ್ತವಿಕ ನೆಲೆಗಟ್ಟಿನಲ್ಲಿ ಆಲೋಚಿಸಿ, ನಿರ್ಧಾರ ಕೈಗೊಳ್ಳುವ ಜಾಣ್ಮೆ ಹಾಗೂ ಧೈರ್ಯವನ್ನು ಮೇಲಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಮನೆಯಲ್ಲಿ ಮಕ್ಕಳಿಂದ ಸಂಭ್ರಮದ ವಾತಾವರಣ ಇರುತ್ತದೆ. ಖರ್ಚಿನ ಬಗ್ಗೆ ಹಿಡಿತ ಇರಲಿ.

Today astrology in kannada today horoscope in kannada
ಅನಗತ್ಯವಾದ ಆತಂಕದ ಸನ್ನಿವೇಶಗಳು ಸೃಷ್ಟಿ ಆಗುತ್ತವೆ. ಅದು ಹಣಕಾಸಿನ ವಿಚಾರಕ್ಕೆ ಇರಬಹುದು ಅಥವಾ ಉದ್ಯೋಗ, ಸಾಲಕ್ಕೆ ಸಂಬಂಧಿಸಿದ್ದಾಗಿರಬಹುದು. ಯಾವುದೇ ವದಂತಿಯನ್ನು ನಂಬಬೇಡಿ. ಆಪ್ತರ ಜತೆಗೆ ಯಾವುದೇ ಕಾರಣ ಇಲ್ಲದೆ ಜಗಳ ಮಾಡಿಕೊಳ್ಳಬಹುದು. ಆದ್ದರಿಂದ ಎಚ್ಚರಿಕೆ ಅಗತ್ಯ.

Today astrology in kannada today horoscope in kannada
ರಾಜಕೀಯದಲ್ಲಿ ಪ್ರಭಾವಿಗಳಾಗಿರುವವರಿಗೆ ಇನ್ನಷ್ಟು ಪ್ರಭಾವ ಹೆಚ್ಚಿಸಿಕೊಳ್ಳುವ ಅವಕಾಶ ದೊರೆಯಲಿದೆ. ದೂರ ದೇಶಗಳಿಂದ ಶುಭ ವಾರ್ತೆ ಬರಲಿದೆ. ಮಾನಸಿಕವಾಗಿ ನೆಮ್ಮದಿಯ ದಿನ ಇದಾಗಿರಲಿದೆ. ಆಹಾರ ಪಥ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಯಮಿತವಾದ ವ್ಯಾಯಾಮ ತಪ್ಪಿಸಬೇಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement