ಮೋದಿ ಸರ್ಕಾರ ಕರೋನಾ ವೈರಸ್ ನಿಂದ ಜರ್ಜರಿತವಾಗಿರುವ ಕುಟುಂಬಕ್ಕೆ ತುಸು ನಿರಾಳ ನೀಡುವ ಉದ್ದೇಶದಿಂದ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರ ಜನಧನ ಖಾತೆಗಳಿಗೆ ತಲಾ 500 ರೂ. ನೇರ ನಗದು ಜಮೆ ಮಾಡುವ ಕಾರ್ಯ ಏ. 3 ರಿಂದ ದೇಶದಲ್ಲಿ ಆರಂಭಗೊಂಡಿದೆ.
ಆದರೆ ಕೆವೈಸಿ (ದಾಖಲೆ) ಒದಗಿಸದೇ, ಹಣ ಪಡೆಯಲಾರದೆ ತೊಳಲಾಡುವ ಸ್ಥಿತಿ ಎದುರಾಗಿದೆ. ಸಾಕಷ್ಟು ಜನರು ತಮ್ಮ ಖಾತೆಗೆ ದಾಖಲೆ ನೀಡಿಲ್ಲ, ಇನ್ನು ಕೆಲವರು ಬ್ಯಾಂಕ್ ಖಾತೆ ಬಳಸದೇ ತಾತ್ಕಾಲಿಕ ಸ್ಥಗಿತಗೊಂಡಿದೆ. ಇದು ಝೀರೊ ಬ್ಯಾಲೆನ್ಸ್ ಖಾತೆಯಾದ್ದರಿಂದ ಹಲವರಂತೂ ಮರೆತೆ ಬಿಟ್ಟಿರುತ್ತಾರೆ.
ಆದ್ದರಿಂದ ತಕ್ಷಣ ನಿಮ್ಮ ಖಾತೆಗೆ ಕೆವೈಸಿ ಮಾಡಿಸಿ, ನಿಮ್ಮ ಹಣ ಪಡೆದುಕೊಳ್ಳಿ.
ಕೆವೈಸಿ ಮಾಡಿಸಲು ನಿಮ್ಮ ಬ್ಯಾಂಕ್ ಗೆ ಭೇಟಿ ನೀಡಿ ಕೆ.ವೈ.ಸಿ. (ದಾಖಲೆ ನೀಡಿ) ಮಾಡಿಸಿಕೊಳ್ಳಿ. ತಮ್ಮ ಖಾತೆಗೆ ಬಂದ ಹಣವನ್ನು ಪಡೆದುಕೊಳ್ಳಿ.
ಖಾತೆ ಹೊಂದಿದವರು ಹಳ್ಳಿಯ ಬಡ ಜನರಿರುವದರಿಂದ ಈ ಮೆಸೇಜ್ ಹೆಚ್ಚಿನ ಜನರಿಗೆ ತಲುಪಿಸಿ, ಬಡವರಿಗೆ ನಮ್ಮಿಂದಾದ ಸಹಾಯ ಮಾಡಿ.
#JandhanKhate #PMJDY #MoneyinBank #PMJDY #KaravaliExpress
Tags:
ಹಣಕಾಸು