ಇಂದಿನ ಭವಿಷ್ಯ ಏಪ್ರಿಲ್ 30, 2020

Today astrology in kannada today horoscope in kannada
ಭಾರೀ ವಾಹನಗಳ ಚಾಲಕರು, ಮಾಲೀಕರಿಗೆ ಸವಾಲಿನ ಸನ್ನಿವೇಶ ಎದುರಾಗಲಿದೆ. ಹಣಕಾಸಿನ ತುರ್ತಿಗಾಗಿ ಒಪ್ಪಿಕೊಂಡ ಕೆಲಸವನ್ನು ಅನಿವಾರ್ಯವಾಗಿ ಮುಗಿಸುವ ಒತ್ತಡಕ್ಕೆ ಸಿಲುಕಲಿದ್ದೀರಿ. ದಾಕ್ಷಿಣ್ಯಕ್ಕೆ ಬೇರೆಯವರ ಜವಾಬ್ದಾರಿಯನ್ನು ನೀವು ವಹಿಸಿಕೊಳ್ಳಬೇಡಿ. ದೂರದೃಷ್ಟಿ ಇಟ್ಟುಕೊಂಡು ನಿರ್ಧಾರ ಮಾಡಿ.
Today astrology in kannada today horoscope in kannada
ಸ್ವಾಭಿಮಾನದ ತೀರ್ಮಾನಗಳನ್ನು ಸಮರ್ಥಿಸಿಕೊಳ್ಳುವಂತೆ ಕಾರ್ಯ ನಿರ್ವಹಿಸಲಿದ್ದೀರಿ. ಗುರಿಯ ಕಡೆಗೆ ಹೆಜ್ಜೆಯನ್ನು ಇಡುತ್ತೀರಿ. ಬಾಕಿ ಉಳಿದ ಹೋದ ಕೆಲಸ- ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಮಯ ಕೂಡಿ ಬರುತ್ತದೆ. ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಮನೆಯಲ್ಲಿ ಜೋರು ಮಾತುಕತೆ ನಡೆಯುವ ಸಾಧ್ಯತೆ ಇದೆ.

Today astrology in kannada today horoscope in kannada
ಟೆಕ್ನಿಕಲ್ ಕೋರ್ಸ್ ಗಳನ್ನು ಮಾಡಬೇಕು ಅಂದುಕೊಳ್ಳುತ್ತಿರುವವರಿಗೆ ಅವಕಾಶ ಒದಗಿ ಬರಲಿದೆ. ಹಳೆಯ ಒಪ್ಪಂದದಂತೆ ಕೆಲಸ- ಕಾರ್ಯಗಳನ್ನು ಮುಗಿಸಿಕೊಡಲು ಒತ್ತಾಯ ಮಾಡಲಾಗುತ್ತದೆ. ದೈಹಿಕ ಆಯಾಸ ಕಾಡುವುದರಿಂದ ಏಕಾಗ್ರತೆಯಿಂದ ಯಾವ ಕೆಲಸ ಮಾಡುವುದು ಕಷ್ಟವಾಗಲಿದೆ.

Today astrology in kannada today horoscope in kannada
ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ವಿಸ್ತರಣೆಗೆ ಅತ್ಯುತ್ತಮ ಅವಕಾಶ ದೊರೆಯಲಿದೆ. ಸಂಗಾತಿ ಜತೆಗೆ ಮಧುರವಾದ ಕ್ಷಣಗಳನ್ನು ಕಳೆಯಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ.

Today astrology in kannada today horoscope in kannada
ನಿಮ್ಮ ತೀರ್ಮಾನಗಳನ್ನು ತಪ್ಪು ಎಂದು ಸಾಬೀತು ಮಾಡುವ ಸಲುವಾಗಿ ಹಿತಶತ್ರುಗಳು ಬಹಳ ಪ್ರಯತ್ನ ಪಡುತ್ತಾರೆ. ಸಹೋದ್ಯೋಗಿಗಳ ಜತೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹಗುರವಾದ ಮಾತನಾಡಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂತೆ ಮಾಡಿಕೊಳ್ಳಬೇಡಿ, ಎಚ್ಚರ.

Today astrology in kannada today horoscope in kannada
ಮರೆವು ನಿಮ್ಮನ್ನು ಕಾಡಬಹುದು. ಈ ಕಾರಣಕ್ಕೆ ಒಂದೇ ಕೆಲಸವನ್ನು ಎರಡೆರಡು ಸಲ ಮಾಡುವಂತಾಗುತ್ತದೆ. ಧ್ಯಾನ, ಯೋಗ, ಸೂರ್ಯ ನಮಸ್ಕಾರ ಮಾಡುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ. ಮನೆಯ ಸಲುವಾಗಿ ಖರ್ಚು ಹೆಚ್ಚಾಗುತ್ತದೆ. ಆದರೆ ಈ ಬಗ್ಗೆ ಯೋಚನೆ ಮಾಡುವಂಥ ಅಗತ್ಯವಿಲ್ಲ.

Today astrology in kannada today horoscope in kannada
ಗ್ಯಾಜೆಟ್ ಗಳು, ಇಂಟರ್ ನೆಟ್ ಉಪಕರಣಗಳು ಇಂಥವನ್ನು ಖರೀದಿ ಮಾಡುವ ಅಗತ್ಯ ಕಂಡುಬರುತ್ತದೆ. ನಿಮಗೆ ಬಂದ ಅವಕಾಶವನ್ನು ಇತರರಿಗೆ ಬಿಟ್ಟುಕೊಡುವ ಸಾಧ್ಯತೆ ಇದೆ. ಭಾವನಾತ್ಮಕವಾದ ಸನ್ನಿವೇಶ ಸೃಷ್ಟಿಯಾಗುವುದರಿಂದ ಕೆಲವು ವ್ಯವಹಾರಗಳನ್ನು ಕಡ್ಡಿ ತುಂಡು ಮಾಡಿದಂತೆ ಪೂರ್ತಿ ಮಾಡಲು ಆಗುವುದಿಲ್ಲ.

Today astrology in kannada today horoscope in kannada
ಸಜ್ಜನರು, ಸಾತ್ವಿಕ ಜನರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಭವಿಷ್ಯದ ಬಗ್ಗೆ ಕಾಡುತ್ತಿದ್ದ ಆತಂಕ ಕೂಡ ದೂರವಾಗಲಿದೆ. ದಾನ- ಧರ್ಮಾದಿ ಕಾರ್ಯಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಲಿದ್ದೀರಿ. ತಂದೆ- ತಾಯಿ ಆಶೀರ್ವಾದ ನಿಮ್ಮ ಮೇಲೆ ಇರಲಿದೆ.

Today astrology in kannada today horoscope in kannada
ಮನೆಯಲ್ಲಿ ಹಿರಿಯರು ಹೇಳಿದ ಮಾತನ್ನು ಕೇಳಿ. ಆತುರಕ್ಕೆ ಬಿದ್ದು ತೆಗೆದುಕೊಂಡ ನಿರ್ಧಾರದಿಂದ ದೊಡ್ಡ ಮಟ್ಟದ ನಷ್ಟ ಅನುಭವಿಸಬೇಕಾಗುತ್ತದೆ. ಆಸ್ತಿ ಮಾರಾಟದ ಆಲೋಚನೆ ಇದ್ದಲ್ಲಿ ಈ ದಿನ ಯಾವ ಹೆಜ್ಜೆಯನ್ನೂ ಇಡಬೇಡಿ. ಹೇಳಿಕೆ ಮಾತುಗಳನ್ನು ಕೇಳುವ ಮೊದಲು ವಾಸ್ತವದ ನೆಲೆಗಟ್ಟಿನಲ್ಲಿ ಸಾಧ್ಯಾಸಾಧ್ಯತೆಯನ್ನು ಆಲೋಚಿಸಿ.

Today astrology in kannada today horoscope in kannada
ಯಾರ ಜತೆ ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಎಚ್ಚರವಿರಲಿ. ಈ ಹಿಂದೆ ನಿಮಗೆ ಸಹಾಯ ಮಾಡಿದ ವ್ಯಕ್ತಿಯ ಎದುರೇ ಧ್ವನಿ ಎತ್ತರಿಸಿ ಮಾತನಾಡಬೇಡಿ. ಈಗಿನ ತಪ್ಪು- ಸರಿಗಳನ್ನು ಒಂದು ತಕ್ಕಡಿಯಲ್ಲಿಟ್ಟು ಅಳೆಯಲು ಸಾಧ್ಯವಿಲ್ಲ. ಈ ಸಮಯ ಕಳೆಯಲು ಬಿಡಿ. ಮುಂದೆ ಒಳ್ಳೆ ದಿನಗಳು ಬರಲಿವೆ.

Today astrology in kannada today horoscope in kannada
ನಿಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಲಿದ್ದೀರಿ. ಮೇಲಧಿಕಾರಿಗಳು ಅಚ್ಚರಿ ಪಡುವ ಮಟ್ಟಕ್ಕೆ ಕಾರ್ಯ ನಿರ್ವಹಣೆ ಇರಲಿದೆ. ಈ ಸಮಯದಲ್ಲಿ ಸಾಮರ್ಥ್ಯದ ಅರಿವನ್ನು ಮೂಡಿಸಿ. ಯಾರನ್ನಾದರೂ ನಿಮ್ಮ ಮೇಲೆ ನಿಗಾ ಮಾಡಲು ತಂದು ಕೂರಿಸಬಹುದು. ಆದರೆ ಇದನ್ನು ಹಿನ್ನಡೆ ಎಂದು ಭಾವಿಸುವ ಅಗತ್ಯ ಇಲ್ಲ.

Today astrology in kannada today horoscope in kannada
ನಿಮ್ಮ ಹಣವೇ ಇಂದು ಸಮಯಕ್ಕೆ ನೆರವಿಗೆ ಬಾರದಂತೆ ಆಗುತ್ತದೆ. ಆದರೆ ಚಿಂತೆ ಮಾಡುವ ಅಗತ್ಯ ಇಲ್ಲ. ದೈವಾನುಗ್ರಹ ನಿಮ್ಮ ಮೇಲಿದೆ. ತುರ್ತು ಸಂದರ್ಭದಲ್ಲಿ ಒಬ್ಬರಲ್ಲ ಒಬ್ಬರು ನಿಮ್ಮ ನೆರವಿಗೆ ಧಾವಿಸುತ್ತಾರೆ. ಕಾಲು ನೋವಿನ ಸಮಸ್ಯೆ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement