ಇಂದಿನ ಭವಿಷ್ಯ ಏಪ್ರಿಲ್ 29, 2020

Today astrology in kannada today horoscope in kannada
ಸ್ವತಂತ್ರವಾಗಿ ವ್ಯಾಪಾರ- ವ್ಯವಹಾರ ಆರಂಭಿಸಬೇಕು ಅಂದುಕೊಳ್ಳುತ್ತಿರುವವರು ಆ ಕಡೆ ಪ್ರಯತ್ನವನ್ನು ಆರಂಭಿಸಬೇಡಿ. ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ ಭೇಟಿ- ಚರ್ಚೆಗಳನ್ನು ಮುಂದಕ್ಕೆ ಹಾಕಿಕೊಳ್ಳಿ. ಸಂಗಾತಿ- ಮಕ್ಕಳಿಗಾಗಿ ಸಮಯವನ್ನು ಮೀಸಲಿಡಿ. ರಕ್ತದೊತ್ತಡದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕು.
Today astrology in kannada today horoscope in kannada
ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ. ಸಾಲವನ್ನು ಹಿಂತಿರುಗಿಸಲು ಸಾಧ್ಯವಿದ್ದಲ್ಲಿ ಈ ಸಮಯದಲ್ಲಿ ವಾಪಸ್ ಮಾಡಿ. ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಪಡುವ ಅಗತ್ಯ ಇಲ್ಲ. ಅಡೆತಡೆಗಳು ಕೇವಲ ತಾತ್ಕಾಲಿಕ. ಭವಿಷ್ಯದ ಯೋಜನೆಗಳು ಸಾಕಾರಗೊಳಿಸಲು ಸಿದ್ಧತೆ ಆರಂಭಿಸಿ.

Today astrology in kannada today horoscope in kannada
ಮಿತ್ರರು- ಸಂಬಂಧಿಕರ ನೆರವಿನಿಂದ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಸಣ್ಣ-ಪುಟ್ಟ ಸಾಲಗಳಿದ್ದಲ್ಲಿ ತೀರಿಸುವುದು ಉತ್ತಮ. ವೃತ್ತಿಯ ಕಾರಣಗಳಿಗಾಗಿ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿಯಾದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡುವುದು ಅಗತ್ಯ.

Today astrology in kannada today horoscope in kannada
ಸಾಲಕ್ಕಾಗಿ ಪ್ರಯತ್ನ ಪಡುತ್ತಿದ್ದಲ್ಲಿ ಅಡೆತಡೆಗಳು ನಿವಾರಣೆ ಆಗುತ್ತವೆ. ಸಂಗಾತಿ ಜತೆಗೆ ನಿಮ್ಮ ನಿರ್ಧಾರದ ವಿಚಾರದಲ್ಲಿ ಮನಸ್ತಾಪ ಕಾಣಿಸಿಕೊಳ್ಳಬಹುದು. ಯಾವ ವಿಚಾರವನ್ನೂ ಮುಚ್ಚಿಡಬೇಡಿ. ಈ ಹಿಂದೆ ನೀವು ಮಾಡಿದ ಉಪಕಾರಕ್ಕೆ ಯಾರಾದರೂ ಪ್ರತ್ಯುಪಕಾರ ಮಾಡಲಿದ್ದಾರೆ.

Today astrology in kannada today horoscope in kannada
ಚಿತ್ರರಂಗದಲ್ಲಿ ಇರುವವರಿಗೆ ಹಲವು ಬಗೆಯ ಸವಾಲುಗಳ ಎದುರಾಗುತ್ತವೆ. ಸಾಲಗಾರರ ಒತ್ತಡ ಜಾಸ್ತಿ ಆಗಲಿದೆ. ಆಸ್ತಿ ಮಾರಾಟ ಮಾಡಬೇಕು ಎಂಬ ಆಲೋಚನೆ ಸಹ ಮೂಡಬಹುದು. ಆದರೆ ಪ್ರಮುಖ ವ್ಯಕ್ತಿಗಳ ಪರಿಚಯದ ಮೂಲಕ ಅನುಕೂಲ ಆಗುವ ಸಾಧ್ಯತೆ ಇದೆ. ಆ ಪರಿಚಯದ ಸದುಪಯೋಗ ಮಾಡಿಕೊಳ್ಳಿ.

Today astrology in kannada today horoscope in kannada
ಮೇಲಧಿಕಾರಿಗಳು ಕೇಳುವ ಮಾಹಿತಿ ಒದಗಿಸುವುದು ಸವಾಲಾಗಿ ಪರಿಣಮಿಸಬಹುದು. ಇದರಿಂದ ಮನಸ್ತಾಪ ಏರ್ಪಡಬಹುದು. ಸಿಟ್ಟು ಮಾಡಿಕೊಳ್ಳದೆ ಪರಿಸ್ಥಿತಿಯನ್ನು ವಿವರಿಸಿ ಹೇಳುವುದಕ್ಕೆ ಪ್ರಯತ್ನಿಸಿ. ಈಗಾಗಲೇ ನೀವು ತೆಗೆದುಕೊಂಡ ನಿರ್ಧಾರಕ್ಕೆ ಪಶ್ಚಾತ್ತಾಪ ಪಡುವಂತೆ ಆಗುತ್ತದೆ.

Today astrology in kannada today horoscope in kannada
ಕೃಷಿಕರಿಗೆ ಉತ್ತಮವಾದ ದಿನ. ಸರ್ಕಾರಿ ಕೆಲಸಗಳ ಆಗಬೇಕಿದ್ದಲ್ಲಿ ಅದರಲ್ಲಿ ಪ್ರಗತಿ ಕಾಣಿಸಿಕೊಳ್ಳುತ್ತದೆ. ಈಗಾಗಲೇ ನಿಶ್ಚಯ ಆಗಿರುವ ಮದುವೆಯನ್ನು ಮುರಿಯಲು ಇತರರು ಪ್ರಯತ್ನಿಸಬಹುದು. ನಿಮ್ಮ ಬಳಿ ಇತರರು ಹೇಳುವ ಚಾಡಿ ಮಾತನ್ನು ನಂಬದಿರಿ. ಯಾವುದೇ ವಿಚಾರವನ್ನು ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿ.

Today astrology in kannada today horoscope in kannada
ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹಣಕಾಸಿನ ವಿಚಾರದಲ್ಲಿ ಮುಜುಗರ ಎದುರಾಗುತ್ತದೆ. ನಿಮ್ಮ ಸ್ಪಷ್ಟನೆಯನ್ನು ಕೇಳುವುದಕ್ಕೆ ಯಾರೂ ಸಿದ್ಧರಿರುವುದಿಲ್ಲ. ಆದ್ದರಿಂದ ಸಿಟ್ಟು ಮಾಡಿಕೊಳ್ಳುವುದರಿಂದ, ಇತರರ ಮೇಲೆ ಕೋಪ ತೋರಿಸಿಕೊಳ್ಳುವುದರಿಂದ ಏನೂ ಪ್ರಯೋಜನ ಆಗುವುದಿಲ್ಲ.

Today astrology in kannada today horoscope in kannada
ಚರ್ಮ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸೂಕ್ತ ಔಷಧ ದೊರೆಯುವ ಸಾಧ್ಯತೆ ಇದೆ. ಅನಗತ್ಯವಾಗಿ ಸಂಗಾತಿ- ಮಕ್ಕಳ ಮೇಲೆ ಕೋಪ ಮಾಡಿಕೊಳ್ಳಬೇಡಿ. ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಂಬಂಧಿಕರು ಹಣದ ಸಹಾಯ ಕೇಳಬಹುದು. ನಿಮ್ಮಿಂದ ಸಾಧ್ಯವಿದ್ದಲ್ಲಿ ನೆರವಾಗಿ.

Today astrology in kannada today horoscope in kannada
ನಿಮ್ಮ ಮೇಲೆ ದೈವಾನುಗ್ರಹ ಇರಲಿದೆ. ಆದರೆ ಷೇರು ಮಾರ್ಕೆಟ್ ವ್ಯವಹಾರ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಇತರರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ಅತಿಯಾದ ಆತ್ಮವಿಶ್ವಾಸದಿಂದ ನಷ್ಟ ಅನುಭವಿಸಬೇಕಾದೀತು, ಎಚ್ಚರ.

Today astrology in kannada today horoscope in kannada
ಸ್ವಂತ ವಾಹನ ಇರುವವರಿಗೆ ಖರ್ಚುಗಳು ಕಾಣಿಸಿಕೊಳ್ಳಲಿದೆ. ಸರ್ಕಾರದಿಂದ ಬರಬೇಕಾದ ಬಾಕಿ ಇದ್ದಲ್ಲಿ ವಸೂಲಾಗುವ ಸಾಧ್ಯತೆಗಳಿವೆ. ವೃತ್ತಿಪರರು ಒಪ್ಪಂದ ಮಾಡಿಕೊಂಡ ಅವಧಿಯೊಳಗೆ ಕೆಲಸ ಮಾಡಿಕೊಡುವ ಕಡೆಗೆ ಗಮನ ನೀಡಿ. ವ್ಯಾಪಾರ ವಿಸ್ತರಣೆಗೆ ಅವಕಾಶ ಸಿಕ್ಕಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಿ.

Today astrology in kannada today horoscope in kannada
ಸಹೋದ್ಯೋಗಿಗಳ ಬಗ್ಗೆ ಪ್ರೀತಿ- ವಿಶ್ವಾಸ ಇರಲಿ. ಸಣ್ಣ, ಪುಟ್ಟ ತಪ್ಪುಗಳನ್ನು ಮುಂದೆ ಮಾಡಿಕೊಂಡು ರೇಗುವುದು, ಸಿಡುಕುವುದು ಮಾಡಬೇಡಿ. ಇದರಿಂದ ನಿಮ್ಮ ನೆಮ್ಮದಿಯೇ ಹಾಳಾಗುತ್ತದೆ. ಪ್ರೀತಿ- ಪ್ರೇಮ ವಿಚಾರದಲ್ಲಿ ಉತ್ತಮ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಆದರೆ ಅನುಮಾನ ಸ್ವಭಾವ ಬಿಡಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement