ಇಂದಿನ ಭವಿಷ್ಯ ಏಪ್ರಿಲ್ 25, 2020

Today astrology in kannada today horoscope in kannada
ಪಾರದರ್ಶಕತೆಯಿಂದ ಇರಲು ಪ್ರಯತ್ನಿಸಿ. ಹೇಗಾದರೂ ಹಣ ಮಾಡಲೇಬೇಕು ಎಂಬ ಧೋರಣೆಯಲ್ಲಿ ಮುಂದುವರಿದರೆ ಇತರರ ಮುಂದೆ ಅವಮಾನದ ಪಾಲಾಗುತ್ತೀರಿ. ನೀವಾಗಿಯೇ ಹೊಸ ಜವಾಬ್ದಾರಿಗಳನ್ನು ಮೈಮೇಲೆ ಎಳೆದುಕೊಳ್ಳಲು ಹೋಗದಿರಿ. ಸಾಧ್ಯವಾದಷ್ಟೂ ಈ ದಿನ ಮೌನವಾಗಿರಿ.
Today astrology in kannada today horoscope in kannada
ಅನುಭವದ ಕೊರತೆ ನಿಮ್ಮನ್ನು ಕಾಡಲಿದೆ. ಅನಾರೋಗ್ಯವಾದಲ್ಲಿ ಕೂಡಲೇ ವೈದ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಿ. ಮಧುಮೇಹ ಇರುವಂಥವರು ಆಹಾರ, ಪಥ್ಯ ಹಾಗೂ ಔಷಧಿ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಹಿತಶತ್ರುಗಳ ಕಾಟ ನಿಮಗೆ ಇರುತ್ತದೆ. ಏಕಾಂತವಾಗಿ ಸಂಗೀತ ಕೇಳುತ್ತಾ, ಪುಸ್ತಕ ಓದುತ್ತಾ ಸಮಯ ಕಳೆಯುವುದು ಉತ್ತಮ.

Today astrology in kannada today horoscope in kannada
ದೇವತಾರಾಧನೆ, ಯೋಗ ಮತ್ತಿತರ ವಿಚಾರಗಳಿಗೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ನೆರವಿನ ಅಗತ್ಯ ಇರುವವರಿಗೆ ಹಣದ ಸಹಾಯ ಮಾಡಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ದೀರ್ಘಕಾಲದ ಸ್ನೇಹಿತರು- ಸ್ನೇಹಿತೆಯರ ಜತೆ ಆತ್ಮೀಯ ಮಾತುಕತೆ ಇದೆ.

Today astrology in kannada today horoscope in kannada
ವಿನಾಕಾರಣ ಕೋಪ ಬರುವಂತೆ ಆಗುತ್ತದೆ. ಮಕ್ಕಳ ಸಲುವಾಗಿ ಕೆಲವು ವಿಚಾರಗಳಲ್ಲಿ ರಾಜೀ ಮಾಡಿಕೊಳ್ಳಬೇಕಾಗುತ್ತದೆ. ಬಾಕಿ ಉಳಿದ ಕೆಲಸ- ಕಾರ್ಯಗಳು ಇನ್ನಷ್ಟು ಸಮಯ ಮುಂದಕ್ಕೆ ಹಾಕಬೇಕಾಗುತ್ತದೆ. ಒಟ್ಟಾರೆ ಯಾವುದೋ ಅಂದುಕೊಂಡಂಥ ದಿಕ್ಕಿನಲ್ಲಿ ಸಾಗದೆ ಅಸಮಾಧಾನ ಇರುತ್ತದೆ.

Today astrology in kannada today horoscope in kannada
ಬಾಕಿ ಬರಬೇಕಾದ ಅಥವಾ ನೀವೇ ಉಳಿತಾಯ ಮಾಡಿದ್ದ ಹಣ ಬರುವ ಸಾಧ್ಯತೆ ಇದೆ. ವೃತ್ತಿ ಬದಲಾವಣೆಗಾಗಿ ಎದುರು ನೋಡುತ್ತಿರುವವರಿಗೆ ನಾನಾ ಬಗೆಯ ಅವಕಾಶ ಗೋಚರಿಸುತ್ತದೆ. ಸ್ನೇಹಿತರ ಮೂಲಕ ಪರಿಚಯವಾಗುವ ವ್ಯಕ್ತಿಗಳಿಂದ ದೊಡ್ಡ ಮಟ್ಟದ ಅನುಕೂಲ ಆಗಲಿದೆ.

Today astrology in kannada today horoscope in kannada
ನಿಮ್ಮ ಪಾಲಿನ ಜವಾಬ್ದಾರಿಗಳನ್ನು ಸಣ್ಣದಾಗಿ ವಿಂಗಡಿಸಿಕೊಳ್ಳುವ, ನಿಯಮಿತವಾಗಿ ಪೂರ್ಣಗೊಳಿಸುವ ಯೋಜನೆ ರೂಪಿಸುತ್ತೀರಿ. ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗಲಿದೆ. ಧೈರ್ಯವಾಗಿ ಕೆಲವು ಮುಖ್ಯ ತೀರ್ಮಾನಗಳನ್ನು ಕೈಗೊಳ್ಳಲಿದ್ದೀರಿ. ವ್ಯಾಪಾರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡಬೇಡಿ.

Today astrology in kannada today horoscope in kannada
ಯಾವ ವಿಚಾರವನ್ನೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ. ಹಾಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ. ವಾಸ್ತವವನ್ನು ಒಪ್ಪಿಕೊಳ್ಳಿ. ಯಾವುದೋ ಒಂದೆರಡು ಘಟನೆಗಳಿಂದ ಮಾನಸಿಕವಾಗಿ ಕುಗ್ಗದಿರಿ. ಆಂಜನೇಯ ಸ್ವಾಮಿ ಸ್ಮರಣೆ ಮಾಡಿ, ಆತ್ಮಸ್ಥೈರ್ಯ ಹೆಚ್ಚಾಗಲಿದೆ.

Today astrology in kannada today horoscope in kannada
ಗುರುಗಳಿಂದ ಸೂಕ್ತವಾದ ಮಾರ್ಗದರ್ಶನ ದೊರೆಯಲಿದೆ. ತಪ್ಪುಗಳನ್ನು ಸರಿಪಡಿಸಿಕೊಳ್ಳುವುದಕ್ಕೆ, ತಿದ್ದುಕೊಂಡು ಮುನ್ನಡೆಯುವುದಕ್ಕೆ ಅವಕಾಶಗಳು ಸಿಗಲಿವೆ. ಸೋದರ -ಸೋದರಿಯರ ಹಣಕಾಸಿನ ಅಗತ್ಯ ಪೂರೈಸುವುದು ನಿಮ್ಮ ಜವಾಬ್ದಾರಿಯಾಗಿ ಹೆಗಲಿಗೆ ಬೀಳಲಿದೆ. ಕುಟುಂಬದ ನೆಮ್ಮದಿ ಕಾಪಾಡುವುದು ನಿಮ್ಮ ನಿರ್ಧಾರದ ಮೇಲಿದೆ.

Today astrology in kannada today horoscope in kannada
ವಿಪರೀತ ಚಂಚಲ ಸ್ವಭಾವ ಇರುತ್ತದೆ. ಪ್ರೇಮ ಪ್ರಕರಣಗಳಿಂದ ಮಾನಸಿಕ ಒತ್ತಡ ಬೀಳುತ್ತದೆ. ಇತರರು ಅನುಮಾನದಿಂದ ನೋಡುವಂತಾಗುತ್ತದೆ. ಯಾವುದೇ ಕೆಲಸ ಮಾಡುವಾಗಲೂ ಏಕಾಗ್ರತೆ ಇರಲಿ. ಅದರಲ್ಲೂ ಬೆಂಕಿ ಮುಂದೆ ಕೆಲಸ ಮಾಡುವವರು ಬಹಳ ಎಚ್ಚರಿಕೆಯಿಂದ ಇರಬೇಕು.

Today astrology in kannada today horoscope in kannada
ಮನೆಯಲ್ಲಿ ದೇವತಾ ಕಾರ್ಯ ಅಥವಾ ಪ್ರವಚನ ಕೇಳುವುದು ನಡೆಯುತ್ತದೆ. ಮಾನಸಿಕವಾಗಿ ನೆಮ್ಮದಿಯ ದಿನವಾಗಿರುತ್ತದೆ. ಹಿರಿಯರ ನೆನಪಿನ ಮೂಲಕ ಹೊಸ ಉತ್ಸಾಹ ಮೂಡುತ್ತದೆ. ಕೂಡಿಟ್ಟ ಹಣ ಖರ್ಚಾಗಿ, ಮುಂದೇನು ಎಂಬ ಪ್ರಶ್ನೆ ಕಾಡಲಿದ್ದು, ಅದಕ್ಕೆ ಪರ್ಯಾಯ ಅವಕಾಶಗಳು ದೊರೆಯಲಿವೆ.

Today astrology in kannada today horoscope in kannada
ಇತರರು ಟೀಕಿಸಿದರು ಎಂಬ ಕಾರಣಕ್ಕೆ ಸಿಟ್ಟಾಗಬೇಡಿ. ಆ ಟೀಕೆಗೆ ಕಾರಣ ತಿಳಿದುಕೊಳ್ಳಿ. ತಪ್ಪು ನಿಮ್ಮದಿದ್ದರೆ ಅದನ್ನು ತಿದ್ದುಕೊಳ್ಳುವುದಕ್ಕೆ ಪ್ರಯತ್ನಿಸಿ. ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ. ಈ ಹಿಂದೆ ಯಾರಿಂದ ಸಹಾಯ ಪಡೆದುಕೊಂಡಿದ್ದರೋ ಅವರಿಗೆ ನೆರವಿನ ಅಗತ್ಯವಿದ್ದಲ್ಲಿ ಸಹಾಯ ಹಸ್ತ ಚಾಚಿ.

Today astrology in kannada today horoscope in kannada
ಲ್ಯಾಪ್ ಟಾಪ್, ಗ್ಯಾಜೆಟ್ ಗಳು, ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟಗಾರರಿಗೆ ಹೊಸ ಅವಕಾಶಗಳು ಗೋಚರಿಸುತ್ತವೆ. ಬಂಧುಗಳು, ಸ್ನೇಹಿತರು ನಿಮ್ಮ ನೆರವಿಗೆ ಬರುತ್ತಾರೆ. ಸಂಗಾತಿ, ಮಕ್ಕಳ ಬೆಂಬಲದೊಂದಿಗೆ ಪ್ರಮುಖವಾದ ತೀರ್ಮಾನ ಕೈಗೊಳ್ಳಲಿದ್ದೀರಿ. ನಿಸ್ವಾರ್ಥ ಮನೋಭಾವದಿಂದ ಇತರರಿಗೆ ನೆರವಾಗಲಿದ್ದೀರಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement