ನಿಮ್ಮ ನೇರವಂತಿಕೆಗೆ ತಕ್ಕ ಮನ್ನಣೆ ಸಿಗಲಿದೆ. ದೀರ್ಘಾವಧಿ ಸಾಲ ತೀರಿಸಲು ನಾನಾ ಮಾರ್ಗಗಳನ್ನು ಕಂಡುಕೊಳ್ಳಲಿದ್ದೀರಿ. ಕಾಲು- ಭುಜದ ನೋವಿನ ಸಮಸ್ಯೆ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕಷ್ಟ ಸಮಯದಲ್ಲಿ ನಿಮಗೆ ಸಹಾಯ ಮಾಡಿದವರಿಗೆ ನಿಮ್ಮ ನೆರವಿನ ಅಗತ್ಯ ಬರುತ್ತದೆ.
ಉಳಿತಾಯದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎಂಬ ಬಗ್ಗೆ ತಂದೆ- ತಾಯಿ ಹಾಗೂ ಸಂಗಾತಿ ಜತೆಗೆ ಚರ್ಚೆ ನಡೆಸಲಿದ್ದೀರಿ. ಮುಂದಾಲೋಚನೆಯಿಂದ ಕೈಗೊಂಡ ಯೋಜನೆಗಳಿಂದ ಹಲವು ಸಮಸ್ಯೆಗಳಿಂದ ಈಚೆಗೆ ಬರಲು ಸಾಧ್ಯವಾಗುತ್ತದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸಂಬಂಧಿಗಳ ಜತೆ ಮಾತುಕತೆ ನಡೆಸಲಿದ್ದೀರಿ.
ಎಲ್ಲರನ್ನೂ ಜತೆಗೂಡಿಸಿಕೊಂಡು ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಪ್ರಯತ್ನಕ್ಕೆ ಕುಟುಂಬದವರ ಬೆಂಬಲ ಇರುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ದೇಹಾಯಾಸ ಕಾಡುವಷ್ಟು ಕೆಲಸ ಬರುತ್ತದೆ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದ್ದು, ಸಿಗುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ.
ತಂದೆ- ತಾಯಿಯ ಆರೋಗ್ಯದ ಸಮಸ್ಯೆಗಳಿಗೆ ಹಣ ಖರ್ಚು ಮಾಡಲಿದ್ದೀರಿ. ದೈವಾನುಗ್ರಹ ನಿಮ್ಮ ಮೇಲೆ ಇರಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಣ್ಣ- ಪುಟ್ಟ ವಿಚಾರಕ್ಕೆ ಆಪ್ತರ ಬಗ್ಗೆ ಅಸಮಾಧಾನ ಪಟ್ಟುಕೊಳ್ಳುವುದು ಒಳ್ಳೆಯದಲ್ಲ. ನೆಮ್ಮದಿ ಹಾಳಾಗುತ್ತದೆ.
ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ಇರುವವರು ಪೋಸ್ಟ್ ಗಳು, ಕಾಮೆಂಟ್ ಗಳ ಕುರಿತು ಎಚ್ಚರಿಕೆಯಿಂದ ಇರಬೇಕು. ಸುಖಾಸುಮ್ಮನೆ ಮೈ ಮೇಲೆ ವಿವಾದವನ್ನು ಎಳೆದುಕೊಳ್ಳಬೇಡಿ. ಹೊಸದಾಗಿ ಪರಿಚಯವಾದವರೊಬ್ಬರ ಮೂಲಕ ನಿಮಗೆ ಗೊತ್ತಿಲ್ಲದ ಎಷ್ಟೋ ಸಂಗತಿಗಳು ತಿಳಿಯುತ್ತವೆ.
ಪರ್ಫೆಕ್ಷನಿಸ್ಟ್ ಗಳಾಗಿ ಇರುವುದರಿಂದ ನಿಮ್ಮದೇ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೀರಿ. ಆದ್ದರಿಂದ ಇತರರ ಸಣ್ಣ- ಪುಟ್ಟ ತಪ್ಪು, ಓರೆ- ಕೋರೆಗಳನ್ನು ಒಪ್ಪಿಕೊಳ್ಳುವುದು ರೂಢಿಸಿಕೊಳ್ಳಿ. ನಿಮ್ಮ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಿ. ಇತರರ ಮೇಲೆ ಆಕ್ಷೇಪ ಮಾಡುವುದಕ್ಕಿಂತ ಸಹಾಯ ಮಾಡಿ.
ಎಲ್ಲರಿಗೂ ಸಮ್ಮತಿ ಆಗುವಂಥ ಪರಿಷ್ಕಾರವೊಂದನ್ನು ನೀಡುವಲ್ಲಿ ಸಫಲರಾಗುತ್ತೀರಿ. ತಂದೆ- ತಾಯಿ ನಿಮ್ಮ್ ನಡವಳಿಕೆಯಿಂದ ಸಂತೋಷ ಪಡುತ್ತಾರೆ. ಸಣ್ಣ- ಪುಟ್ಟ ಹಿನ್ನಡೆಗಳಿಗೆ ಅಂಜಬೇಡಿ. ಧೈರ್ಯವಾಗಿ ಮುನ್ನಡೆದರೆ ನೀವು ಪಟ್ಟ ಶ್ರಮಕ್ಕೆ ಖಂಡಿತಾ ಫಲ ದೊರೆಯಲಿದೆ ಎಂಬುದನ್ನು ನೆನಪಿಡಿ.
ಹಣದ ಅನಿವಾರ್ಯಕ್ಕಾಗಿ ಸಾಲ ಮಾಡಬೇಕಾಗುತ್ತದೆ. ಯಾರಿಗಾದರೂ 'ಹೌದು' ಎಂದು ಹೇಳುವ ಮುನ್ನ ಸಾಧಕ- ಬಾಧಕಗಳನ್ನು ಚಿಂತಿಸಿ. ಪರ ಸ್ಥಳದಲ್ಲಿ ವಾಸಿಸುತ್ತಿರುವವರಿಗೆ ಅಲ್ಲಿಂದ ನಿಮ್ಮ ಇಷ್ಟದ ಸ್ಥಳಕ್ಕೆ ಹಿಂತಿರುಗಲು ಅವಕಾಶ ದೊರೆಯಲಿದೆ. ಆದರೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕು.
ಮತ್ತೊಬ್ಬರಿಗಾಗಿ ದೊಡ್ಡ ತ್ಯಾಗಕ್ಕೆ ಸಿದ್ಧವಾಗಬೇಕಾಗುತ್ತದೆ. ನಿಮಗೆ ದೊರೆಯಬೇಕಾದ ಅವಕಾಶ, ಸ್ಥಾನ- ಮಾನ ಇನ್ನೊಬ್ಬರ ಪಾಲಾಗಬಹುದು. ಆದರೆ ಈ ಬಗ್ಗೆ ಹೆಚ್ಚು ಆಲೋಚಿಸುವ ಅಗತ್ಯ ಇಲ್ಲ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಹಾಳಾಗದಿರುವಂತೆ ನೋಡಿಕೊಳ್ಳಿ. ಭವಿಷ್ಯದ ಬಗ್ಗೆ ಯೋಜನೆ ರೂಪಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ನಿಮಗಿಂತ ಚಿಕ್ಕ ವಯಸ್ಸಿನವರು ಅಥವಾ ದೊಡ್ಡ ಜವಾಬ್ದಾರಿ ಇರುವವರ ಜತೆಗೆ ಹೇಗೆ ವರ್ತಿಸುತ್ತಿದ್ದೀರಿ ಎಂಬ ಬಗ್ಗೆ ಎಚ್ಚರಿಕೆ ಇಟ್ಟುಕೊಳ್ಳಿ. ಒಂಚೂರು ಮೈ ಮರೆತರೂ ಅದಕ್ಕೆ ದೊಡ್ಡ ಬೆಲೆ ತೆರುವಂತಾಗುತ್ತದೆ. ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ.
ಬಹಳ ಇಷ್ಟಪಡುವ ವ್ಯಕ್ತಿಯ ಜತೆಗೆ ಸಮಯ ಕಳೆಯುವುದಕ್ಕೆ ಅವಕಾಶ ದೊರೆಯುತ್ತದೆ. ಮನಸ್ಸಿನಲ್ಲಿರುವ ವಿಚಾರವನ್ನು ಹೇಳಿಕೊಳ್ಳುವುದಕ್ಕೆ ಸಮಯ ಕೂಡ ದೊರೆತು, ನಿರಾಳವಾಗುತ್ತೀರಿ. ಉದ್ಯೋಗ ಬದಲಾವಣೆ ಬಗ್ಗೆ ಆಪ್ತರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಮನೆ ಬದಲಾವಣೆ ಬಗ್ಗೆ ಕೂಡ ಮಾತುಕತೆ ನಡೆಯಲಿದೆ.
ಬರಹಗಾರರು, ಕಲಾವಿದರಿಗೆ ಮುಂದಿನ ಯೋಜನೆಗಳಿಗೆ ಸಿದ್ಧತೆ ನಡೆಸಲು ಏಕಾಂತದ ಸಮಯ ಸಿಗಲಿದೆ. ಸ್ವತಂತ್ರ ಆಲೋಚನೆಯಿಂದ ಆಕರ್ಷಣೆ ಕೇಂದ್ರ ಬಿಂದು ಆಗಲಿದ್ದೀರಿ. ಅಪರಿಚಿತರೊಂದಿಗೆ ವೈಯಕ್ತಿಕ ಹಣಕಾಸು ವಿಚಾರಗಳನ್ನು ಹಂಚಿಕೊಳ್ಳಬೇಡಿ. ಇದರಿಂದ ದೊಡ್ಡ ಸಮಸ್ಯೆ ಆಗಬಹುದು.
Tags:
ದಿನ ಭವಿಷ್ಯ