ಸ್ವಂತ ವ್ಯಾಪಾರ- ವ್ಯವಹಾರ ಮಾಡುವವರಿಗೆ ಬಿಡುವಿಲ್ಲದ ದಿನವಾಗಿರುತ್ತದೆ. ಬ್ಯಾಂಕ್ ವ್ಯವಹಾರಗಳಿಗೆ ಚೆನ್ನಾಗಿ ಸಿದ್ಧತೆ ಮಾಡಿಕೊಳ್ಳಿ. ಅಗತ್ಯ ದಾಖಲೆ- ಪತ್ರಗಳನ್ನು ಒಟ್ಟುಗೂಡಿಸಿಕೊಳ್ಳಿ. ನಿಮ್ಮ ಕೆಲಸ -ಕಾರ್ಯಗಳಿಗೆ ಕುಟುಂಬದವರ ಬೆಂಬಲ ದೊರೆಯಲಿದೆ. ಒತ್ತಡದಿಂದ ಹೊರಬರಲು ಧ್ಯಾನ ಮಾಡಿದರೆ ಉತ್ತಮ.
ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಹಣದ ನೆರವು ಕೇಳುವಂಥವರ ಹಿನ್ನೆಲೆಯನ್ನು ಗಮನಿಸಿ. ಆ ನಂತರ ನಿರ್ಧಾರ ತೆಗೆದುಕೊಳ್ಳಿ. ಮೊಬೈಲ್, ಲ್ಯಾಪ್ ಟಾಪ್ ಮತ್ಯಾವುದಾದರೂ ಉಪಕರಣದ ಸಮಸ್ಯೆ ಆಗಬಹುದು. ಅದಕ್ಕಾಗಿ ಹಣ ಖರ್ಚು ಆಗಿ, ರಿಪೇರಿ ಮಾಡಿಸಬೇಕಾಗುತ್ತದೆ.
ಕೆಲಸದ ಒತ್ತಡ ಹೆಚ್ಚಿರುತ್ತದೆ. ದೀರ್ಘ ಕಾಲದ ನಂತರ ಹಳೇ ಗೆಳೆಯರ ಜತೆಗೆ ಮುಖ್ಯವಾದ ಮಾತುಕತೆ ನಡೆಸುತ್ತೀರಿ. ಕಾಲು ನೋವು- ಭುಜದ ನೋವಿನಂಥ ಸಮಸ್ಯೆಗಳು ಕಾಡಬಹುದು. ಮಕ್ಕಳಿಗಾಗಿ ಹೆಚ್ಚಿನ ಖರ್ಚು ಬರುತ್ತದೆ. ಅದನ್ನು ನಿಭಾಯಿಸಲು ಸಾಲ ಮಾಡುವುದು ಅನಿವಾರ್ಯ ಆಗಲಿದೆ.
ಆಯ್ಕೆ ವಿಚಾರದಲ್ಲಿ ಗೊಂದಲ ಏರ್ಪಡಬಹುದು. ವಿಜ್ಞಾನ, ವೈದ್ಯಕೀಯ, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಹತ್ತರವಾದ ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಸೂಕ್ತವಾದ ಸ್ಥಾನ- ಮಾನ ದೊರಕಲಿದ್ದು, ಇದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ.
ಇತರರ ವೈಯಕ್ತಿಕ ವಿಷಯಗಳಲ್ಲಿ ತಲೆದೂರಿಸಬೇಡಿ. ಸಲಹೆ ನೀಡಬೇಕು ಎಂದೆನಿಸಿದರೂ ಸನ್ನಿವೇಶವನ್ನು ಸರಿಯಾಗಿ ಅವಲೋಕನ ಮಾಡಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಿ. ಸಾವಯವ ಕೃಷಿ ಮಾಡುವ ರೈತರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಬಂಡವಾಳಕ್ಕಾಗಿ ಸಾಲ ಮಾಡಬೇಕಾಗುತ್ತದೆ.
ಧಾರ್ಮಿಕ ಚಿಂತನೆಗಳಿಂದ ಮಾನಸಿಕವಾದ ನೆಮ್ಮದಿ ದೊರೆಯುತ್ತದೆ. ಭವಿಷ್ಯದ ಬಗ್ಗೆ ನಿಮಗಿರುವ ದೂರದೃಷ್ಟಿಯಿಂದ ಹಲವು ಸವಾಲುಗಳನ್ನು ದಾಟುತ್ತೀರಿ. ನೀವು ಈ ಹಿಂದೆ ಪಟ್ಟಿದ್ದ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಹೊಸ ಅವಕಾಶಗಳು ಬಂದಾಗ ಅದನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆಲೋಚಿಸಿ.
ಹಿಂದಿನ ಕಾಯಿಲೆಗಳು ಉಲ್ಬಣವಾಗಲಿವೆ. ತಲೆ ನೋವು ಸೇರಿದಂತೆ ಇತರ ಅನಾರೋಗ್ಯ ಕಾಣಿಸಿಕೊಳ್ಳಬಹುದು. ವಿಪರೀತ ಯೋಚನೆ ಮಾಡುವುದರಿಂದ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆದ್ದರಿಂದ ಸಾಧ್ಯವಾದಷ್ಟು ಅನಗತ್ಯ ಸಂಗತಿಗಳ ಬಗ್ಗೆ ಯೋಚಿಸಬೇಡಿ. ನೆಮ್ಮದಿಯಿಂದ ಇರುವುದಕ್ಕೆ ಪ್ರಯತ್ನಿಸಿ.
ಇತರರ ಸಲಹೆಯನ್ನು ಸುಮ್ಮನೆ ಅನುಸರಿಸುವುದು ಒಳ್ಳೆಯದಲ್ಲ. ಸಾಧಕ- ಬಾಧಕಗಳ ಬಗ್ಗೆ ಸರಿಯಾಗಿ ಆಲೋಚನೆ ಮಾಡಿ. ನಿಮ್ಮ ಬಳಿ ಇರುವ ಹಣದ ಪರಿಣಾಮಕಾರಿಯಾದ ಬಳಕೆ ಹೇಗೆಂದು ಯೋಜನೆ ರೂಪಿಸಿ. ಸಾಲ ಮಾಡುವುದು ಬೇಡ. ಮುಖ್ಯ ನಿರ್ಧಾರಗಳನ್ನು ಮುಂದಕ್ಕೆ ಹಾಕಿ.
ಯಾರದೋ ಮೇಲಿನ ಸಿಟ್ಟನ್ನು ಮತ್ಯಾರ ಮೇಲೋ ತೋರಿಸಿದರೆ ಸಂಬಂಧಗಳು ಹಾಳಾಗುತ್ತವೆ. ಸಣ್ಣಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಬೇಡಿ. ಇತರರ ನಿರ್ಧಾರಗಳನ್ನು ಗೌರವಿಸಿ. ಅವರು ಹೇಳುವ ಮಾತುಗಳನ್ನು ಸಹ ಕೇಳಿಸಿಕೊಳ್ಳಿ. ಉದ್ಯೋಗ ವಿಚಾರದಲ್ಲಿ ಸಹೋದ್ಯೋಗಿಗಳ ಜತೆ ಭಿನ್ನಾಭಿಪ್ರಾಯ ಮೂಡಬಹುದು.
ಅಂದುಕೊಂಡಂಥ ವೇಗದಲ್ಲಿ ಕೆಲಸ- ಕಾರ್ಯಗಳು ಸಾಗುವುದಿಲ್ಲ. ಇದೇ ಕಾರಣಕ್ಕೆ ಬೇರೆಯವರಿಂದ ಕೊಂಕಿನ ಮಾತನ್ನು ಕೇಳಬೇಕಾಗುತ್ತದೆ. ಆದರೆ ನಿಮ್ಮ ತಾಳ್ಮೆ, ಸಮಾಧಾನದ ಸ್ವಭಾವದಿಂದ ಹಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತೀರಿ. ಸಂಗಾತಿ- ಮಕ್ಕಳಿಗಾಗಿ ಹೆಚ್ಚು ಸಮಯ ಮೀಸಲಿಡಿ.
ಏಕಾಂತದ ಸಂತೋಷವನ್ನು ಈ ದಿನ ಅನುಭವಿಸಲಿದ್ದೀರಿ. ನೀವೇ ತೀರ್ಮಾನಿಸಿದಂತೆ, ನಿರ್ಧಾರ ತೆಗೆದುಕೊಂಡಂತೆ ಬದುಕುವ ಅವಕಾಶ ಸಿಗುತ್ತದೆ. ತುರ್ತು ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು. ಅದಕ್ಕೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು, ದೇಹಾಯಾಸ ಆಗಲಿದೆ.
ನಿಮ್ಮ ಬಗ್ಗೆ ಕೆಲವರು ಮೇಲಧಿಕಾರಿಗಳಿಗೆ ದೂರು ನೀಡಲಿದ್ದಾರೆ. ಎಲ್ಲ ಕೆಲಸ ಮುಗಿಯಿತು ಎಂದು ನೆಮ್ಮದಿಯಾಗಿ ಇರುವಾಗ ಮತ್ತೆ ಅದೇ ಕೆಲಸವನ್ನು ಮೊದಲಿನಿಂದ ಮಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಲಿದೆ. ಇದಕ್ಕಾಗಿಯೇ ನಿಮ್ಮ ಶ್ರಮ ಹಾಗೂ ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ.
Tags:
ದಿನ ಭವಿಷ್ಯ