ದೆಹಲಿ: ಕೊರೊನ ವೈರಸ್ನಿಂದ ಮುಂಜಾಗ್ರತೆಯನ್ನು ವಹಿಸಲು ಜನರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕನ್ನು ಧರಿಸಬೇಕು ಎಂದು ಈಗಾಗಲೇ ಆರೋಗ್ಯ ಇಲಾಖೆಯ ಸೂಚನೆಯನ್ನು ಹೊರಡಿಸಿದೆ. ಮೆಡಿಕಲ್ ಶಾಪ್ ಗಳಲ್ಲಿ ಈಗಾಗಲೇ ಇದರ ಅಭಾವವಿರುವುದರಿಂದ ಜನರು ತಮ್ಮ ತಮ್ಮ ಮನೆಯಲ್ಲಿಯೇ ಇದನ್ನು ತಯಾರಿಸಿ ಉಪಯೋಗಿಸಲು ಶುರು ಮಾಡಿದ್ದಾರೆ.
ಆದರೆ ಕೊರೊನಾ ವೈರಸ್ನ ವಿರುದ್ಧ ಹೋರಾಟದಲ್ಲಿ ತೊಡಗಿರುವವರಿಗೆ ಮಾಸ್ಕನ್ನು ಸಿದ್ಧಪಡಿಸಲು ಈಗಾಗಲೇ ಸಮಯವು ಸಿಗುತ್ತಿಲ್ಲ. ಆದ್ದರಿಂದ ಹಲವರಿಗೆ ಮಾಸ್ಕ್ ರೆಡಿ ಮಾಡಿಕೊಳ್ಳೋಕೆ ಸಮಯವು ಕೂಡ ಸಿಗುತ್ತಿಲ್ಲ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ಕೆಲವರು ಇಂಥವರ ನೆರವಿಗೆ ಬರುತ್ತಿದ್ದಾರೆ. ಸಾಧ್ಯವಾದಷ್ಟು ಮಾಸ್ಕ್ಗಳನ್ನು ರೆಡಿ ಮಾಡಿ ಅಂತ ಜನರಿಗೆ ನೀಡುತ್ತಿದ್ದಾರೆ. ಅದರಲ್ಲಿ ಈಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಕೂಡ ಒಬ್ಬರಾಗಿದ್ದಾರೆ. ಅವರು ತಮ್ಮ ಮನೆಯಲ್ಲಿ ತಮ್ಮ ಕೈಯಿಂದಲೇ ಹೊಲೆದ ಮಾಸ್ಕ್ಗಳನ್ನು ಜನರಿಗೆ ನೀಡುತ್ತಿದ್ದಾರೆ.
ಕೊರೊನಾ ವೈರಸ್ನ ವಿರುದ್ಧದ ಹೋರಾಟದಲ್ಲಿ ತಮ್ಮದು ಒಂದು ಕೊಡುಗೆಯನ್ನು ನೀಡುವ ಸಲುವಾಗಿ ಸವಿತಾ ಗೋವಿಂದ ಅವರು ರಾಷ್ಟ್ರಪತಿ ಎಸ್ಟೇಟ್ ಶಕ್ತಿ ಹಾತ್ನಲ್ಲಿ ಹೊಲಿಗೆ ಯಂತ್ರದ ಮೂಲಕ ಬಟ್ಟೆಯ ಮಾಸ್ಕ್ ಗಳನ್ನು ಹೊಲೆದಿದ್ದಾರೆ. ಅವರು ಹೊಲೆದ ಮಾಸ್ಕ್ ಗಳನ್ನು ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ ವಿವಿಧ ಆಶ್ರಯ ಮನೆಗಳಿಗೆ(shelter homes) ವಿತರಿಸಲಾಗುತ್ತಿದೆ.
ಈ ಕಾರ್ಯದ ಮೂಲಕ ದೇಶದ ಜನತೆಗೆ ಎಲ್ಲರೂ ಒಗ್ಗಟ್ಟಾಗಿ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಬಹುದು ಎಂಬ ಸಂದೇಶವನ್ನು ನೀಡಿದ್ದಾರೆ.