ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವವರಿಗೆ ಸಮಾಧಾನ ತರುವ ದಿನ ಇದಾಗಿರುತ್ತದೆ. ಉಪಯುಕ್ತವಾದ ಸಲಹೆ- ಸೂಚನೆ ದೊರೆಯಲಿದೆ. ಅವುಗಳನ್ನು ಹೇಗೆ ಬಳಸಿಕೊಳ್ಳಲಿದ್ದೀರಿ ಎಂಬುದು ಬಹಳ ಮುಖ್ಯವಾಗುತ್ತದೆ. ಭವಿಷ್ಯದ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ. ಪರ್ಯಾಯ ಮಾರ್ಗಗಳು ಗೋಚರಿಸಲಿವೆ.
ಡೇರಿ ವ್ಯವಹಾರ ಮಾಡಿಕೊಂಡಿರುವವರಿಗೆ ಆದಾಯದಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಆಗಲಿದೆ. ಕೊಟ್ಟ ಮಾತಿನಂತೆ ಹೇಳಿದ ಸಮಯಕ್ಕೆ ಹಣ ನೀಡುವುದು ಕಷ್ಟವಾಗಬಹುದು. ಆದ್ದರಿಂದ ನಿಮ್ಮ ಸ್ಥಿತಿಯನ್ನು ಮುಂಚಿತವಾಗಿಯೇ ತಿಳಿಸಿದರೆ ಅವಮಾನ ಆಗುವುದರಿಂದ ತಪ್ಪಿಸಿಕೊಳ್ಳುವ ಅವಕಾಶ ಇದೆ.
ನೀವು ಬುದ್ಧಿವಂತರೇ ಇರಬಹುದು. ಆದರೆ ಇತರರು ದಡ್ಡರಲ್ಲ ಎಂಬುದನ್ನು ನೆನಪಿನಲ್ಲಿಡಿ. ನಾಲಗೆ ಮೇಲೆ ಹಿಡಿತ ಇರಲಿ. ಯಾರನ್ನಾದರೂ ಹೀಯಾಳಿಸುವ- ಮೂದಲಿಸುವ ಮುನ್ನ ವಾಸ್ತವ ಸ್ಥಿತಿಯನ್ನು ಚೆನ್ನಾಗಿ ಅರಿತುಕೊಳ್ಳಿ. ಗುರು- ಹಿರಿಯರು ಹೇಳುವ ಬುದ್ಧಿ ಮಾತನ್ನು ಅನುಸರಿಸಿ.
ವಂಚಕರು ಯಾರು, ಸಜ್ಜನರು ಯಾರು ಎಂದು ತಿಳಿದುಕೊಳ್ಳಲಾಗದಂಥ ಸಂದಿಗ್ಧಕ್ಕೆ ಸಿಲುಕಿಬೀಳುತ್ತೀರಿ. ಬೆಲೆ ಬಾಳುವ ವಸ್ತುಗಳ ಬಗ್ಗೆ ಗಮನ ನೀಡಿ. ಇತರರಿಗೆ ಜಾಮೀನಾಗಿ ನಿಂತಲ್ಲಿ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರಿ. ವಾಸ್ತವ ನೆಲೆಗಟ್ಟಿನಲ್ಲಿ ಯೋಚನೆ ಮಾಡಿ. ಭಾವನಾತ್ಮಕವಾಗಿ ಆಲೋಚಿಸಿದರೆ ಪ್ರಯೋಜನ ಇಲ್ಲ.
ಸಂಗೀತಗಾರರು, ರಾಜಕಾರಣಿಗಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಯಲ್ಲಿ ಇರುವವರಿಗೆ ಬಹಳ ಒಳ್ಳೆ ದಿನ. ಆದಾಯವನ್ನು ಹೆಚ್ಚಿಸಿಕೊಳ್ಳಲು ನಾನಾ ಮಾರ್ಗಗಳು ಗೋಚರಿಸುತ್ತವೆ. ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯದ ಉಸ್ತುವಾರಿಯನ್ನು ನೀವೇ ನೋಡಿಕೊಳ್ಳಬೇಕು ಎಂದು ಸೂಚನೆ ಬರುತ್ತದೆ.
ಇನ್ನೊಬ್ಬರನ್ನು ಹಂಗಿಸಲೆಂದು ಪ್ರಯತ್ನಿಸದಿರಿ. ಆಯಾ ವ್ಯಕ್ತಿಯ ಸಾಮರ್ಥ್ಯವು ಅಷ್ಟೇ ಎಂಬುದನ್ನು ಅರಿತುಕೊಳ್ಳಿ. ಭವಿಷ್ಯದ ಯೋಜನೆಗಳು ಮತ್ತು ಅದಕ್ಕಾಗಿ ಕಂಡುಕೊಂಡಿರುವ ಹಣಕಾಸಿನ ಮೂಲದ ಬಗ್ಗೆ ಯಾರ ಜತೆಗೂ ಚರ್ಚಿಸಬೇಡಿ. ನಿಮ್ಮಿಂದ ಸಹಾಯ ಪಡೆದವರಿಂದ ಯಾವ ನೆರವು ಸಹ ನಿರೀಕ್ಷಿಸಬೇಡಿ.
ಅಳೆದು- ತೂಗಿ ನಿರ್ಧಾರ ಕೈಗೊಳ್ಳುವ ನಿಮ್ಮ ಚಾಕಚಕ್ಯತೆಗೆ ಎಲ್ಲರೂ ಮೆಚ್ಚುಗೆ ಸೂಚಿಸಲಿದ್ದಾರೆ. ಆದರೆ ಹಣದ ವಿಚಾರದಲ್ಲಿ ಒತ್ತಡ ಹೆಚ್ಚಾಗಲಿದೆ. ಸಾಲ ಮಾಡುವುದು ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಬಹುದು. ಈ ಸಂದರ್ಭದಲ್ಲಿ ತಾಳ್ಮೆಯಿಂದ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.
ಸ್ವಂತ ಆಸೆಗಳನ್ನು ಪೂರೈಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಕುಟುಂಬ ಸದಸ್ಯರ ಅಗತ್ಯಗಳನ್ನೇ ಪೂರೈಸುತ್ತಾ ಹೋದರೆ ನನ್ನ ಸಂತೋಷದ ಬಗ್ಗೆ ಆಲೋಚಿಸುವವರು ಯಾರು ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಧಾರ್ಮಿಕ ಕಾರ್ಯಕ್ರಮಗಳ ಮುಂದಾಳತ್ವವನ್ಮು ವಹಿಸಬೇಕಾಗುತ್ತದೆ.
ದಾನ- ಧರ್ಮ ಕಾರ್ಯಗಳಿಗಾಗಿ ಉಳಿತಾಯದ ಹಣವನ್ನೇ ಖರ್ಚು ಮಾಡಲಿದ್ದೀರಿ. ಮಕ್ಕಳು ನಿಮ್ಮ ಮಾತಿಗೆ ಎದುರಾಡಲಿದ್ದಾರೆ. ಇದೊಂದು ಸನ್ನಿವೇಶ ಅಂದುಕೊಳ್ಳಿ. ಆದರೆ ಅನಗತ್ಯವಾಗಿ ಬೇಸರ ಮಾಡಿಕೊಂಡರೆ ಆರೋಗ್ಯ ಸಮಸ್ಯೆ ಎದುರಾಗಬಹುದು. ಆದ್ದರಿಂದ ಎಚ್ಚರಿಕೆ ವಹಿಸಿ.
ಹಣದ ವಿಚಾರಕ್ಕೆ ಸ್ನೇಹಿತರ ಜತೆಗೆ ಮನಸ್ತಾಪ ಆಗಬಹುದು. ಎಲ್ಲರೂ ಒಪ್ಪಿಕೊಂಡ ಸಂಗತಿಯ ಬಗ್ಗೆ ನಿಮಗೆ ಆಕ್ಷೇಪ ಮೂಡುವ ಸಾಧ್ಯತೆ ಇದೆ. ಇದರಿಂದ ನಿಮಗಿಂತ ಬಲಿಷ್ಠರನ್ನು ಎದುರು ಹಾಕಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಲಿದೆ. ಹೇಳುವ ವಿಚಾರವನ್ನು ನಯ- ನಾಜೂಕಿನಿಂದ ತಿಳಿಸುವುದಕ್ಕೆ ಪ್ರಯತ್ನಿಸಿ.
ಉಸಿರಾಟದ ಸಮಸ್ಯೆ, ಬಿ.ಪಿ., ಮಧುಮೇಹ ಉಲ್ಬಣವಾಗುವಂಥ ಸಾಧ್ಯತೆ ಇದೆ. ಊಟ- ಪಥ್ಯದ ವಿಚಾರದಲ್ಲಿ ಕಟ್ಟುನಿಟ್ಟಾಗಿರಿ. ಮನೆಯಲ್ಲಿ ರುಚಿಕಟ್ಟಾದ ಅಡುಗೆ ಮಾಡಿದ್ದರೂ ನಿಮ್ಮ ದೇಹ ಪ್ರಕೃತಿಗೆ ಒಗ್ಗದ ಆಹಾರ ಪದಾರ್ಥಗಳನ್ನು ಸೇವನೆ ಮಾಡದಿರಿ. ಗುರು ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡಿ.
ನಿಮ್ಮ ಸಲಹೆ- ಸೂಚನೆಯಂತೆ ಮಾಡಿದ ಕೆಲಸಗಳಿಂದ ಅದ್ಭುತ ಫಲಿತಾಂಶ ದೊರೆಯಲಿದೆ. ಈ ಕಾರಣಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಲಿದ್ದಾರೆ. ವ್ಯಾಪಾರ- ಉದ್ಯಮದ ಸಲುವಾಗಿ ಸಾಲ ಮಾಡುವ ಸಂದರ್ಭ ಬರಲಿದೆ. ಇದಕ್ಕೆ ನಿಮ್ಮ ಸ್ನೇಹಿತರು- ಸಂಬಂಧಿಗಳು ನೆರವಾಗಲಿದ್ದಾರೆ.