ಕೌಟುಂಬಿಕ ಅಗತ್ಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೀರಿ. ಸಂಗಾತಿ- ಮಕ್ಕಳ ಆರೋಗ್ಯ ವಿಚಾರ ಚಿಂತೆಗೆ ಕಾರಣವಾಗಲಿದೆ. ದೊಡ್ಡ ವ್ಯವಹಾರವೊಂದು ನಾನಾ ಕಾರಣಗಳಿಗಾಗಿ ಹಿನ್ನಡೆ ಅನುಭವಿಸಲಿದೆ. ಉದ್ಯೋಗ ಬದಲಾವಣೆ ಅಥವಾ ಹೊಸ ವ್ಯಾಪಾರ- ವ್ಯವಹಾರ ಶುರು ಮಾಡುವ ಆಲೋಚನೆ ಬೇಡ.
ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯ ಸೃಷ್ಟಿಯಾಗಬಹುದು. ಹಣದ ವಿಚಾರಕ್ಕೆ ಪ್ರಾಮುಖ್ಯತೆ ನೀಡಿ, ಕುಟುಂಬಕ್ಕೆ ಅಗತ್ಯ ಸಮಯ ನೀಡುವುದು ಕಷ್ಟವಾಗುತ್ತದೆ. ಬೇರೆಯವರಿಗೆ ಸಾಲ ಕೊಡಿಸಲು ಜಾಮೀನು ನಿಲ್ಲಬೇಡಿ. ನೀವೇ ಹಣ ಪಾವತಿಸಬೇಕಾದ ಸನ್ನಿವೇಶ ನಿರ್ಮಾಣ ಆಗಬಹುದು.
ದಾನ-ಧರ್ಮಾದಿ ಚಟುವಟಿಕೆಗಳಲ್ಲಿ ಭಾಗಿ ಆಗುವ ಯೋಗ ಇದೆ. ನಿಮ್ಮ ದುಡಿಮೆ ಹಣದಲ್ಲಿ ಅಲ್ಪ ಭಾಗವನ್ನು ಅದಕ್ಕಾಗಿ ಖರ್ಚು ಮಾಡಲಿದ್ದೀರಿ. ಸ್ನೇಹಿತರು- ಬಂಧುಗಳು ನಿಮ್ಮ ಸಲಹೆ, ಸೂಚನೆಗಳಿಗಾಗಿ ಕೇಳಬಹುದು. ಮೇಲಧಿಕಾರಿಗಳಿಂದ ನಾನಾ ಬಗೆಯ ಆಕ್ಷೇಪಗಳು ಕೇಳಿಸಿಕೊಳ್ಳಬೇಕಾಗುತ್ತದೆ.
ನಿರೀಕ್ಷಿತ ಮಟ್ಟದಲ್ಲಿ ಆದಾಯ ಬಾರದೆ ಚಿಂತೆಗೆ ಕಾರಣವಾಗುತ್ತದೆ. ಏಕಾಏಕಿ ಖರ್ಚು ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ನಿದ್ರೆ ಸಮಸ್ಯೆ ಕಾಡುವ ಸಾಧ್ಯತೆ ಇದೆ. ಸರಿಯಾದ ವಿಶ್ರಾಂತಿ ಪಡೆಯಿರಿ. ಅನಗತ್ಯವಾದ ಚಿಂತೆಯನ್ನು ಮನಸ್ಸಿನಿಂದ ತೆಗೆದುಹಾಕಿ.
ಕರಿದ ಪದಾರ್ಥಗಳು, ಮಸಾಲೆ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಡಿ. ನಿಮ್ಮ ಆದ್ಯತೆಯನ್ನು ನಿರ್ಧಾರ ಮಾಡಿದ ನಂತರ ಖರ್ಚನ್ನು ಮಾಡಿ. ನಿಮ್ಮ ಬಗ್ಗೆ ಇತರರು ಚಾಡಿ ಹೇಳುವ ಸಾಧ್ಯತೆ ಇದೆ. ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಆ ಸಮಸ್ಯೆಯಿಂದ ಹೊರಗೆ ಬರಲಿದ್ದೀರಿ. ತಾಳ್ಮೆ ಕಳೆದುಕೊಳ್ಳಬೇಡಿ.
ಯಾರ ಬಗ್ಗೆ ಮಾತನಾಡುವಾಗಲೂ ನಾಲಗೆ ಮೇಲೆ ಹತೋಟಿ ಇರಲಿ. ಹಗುರವಾದ ಮಾತನಾಡಿ, ನಿಮ್ಮ ವರ್ಚಸ್ಸಿಗೆ ಧಕ್ಕೆ ತಂದುಕೊಳ್ಳಬೇಡಿ. ಲ್ಯಾಪ್ ಟಾಪ್, ಕ್ಯಾಮೆರಾ, ಮೊಬೈಲ್ ಫೋನ್ ಅನ್ನು ಜೋಪಾನವಾಗಿ ಇರಿಸಿಕೊಳ್ಳಿ. ಅವುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಯಾರನ್ನೋ ಓಲೈಸುವ ಸಲುವಾಗಿ ಉಡುಗೊರೆಗಳನ್ನು ನೀಡಲಿದ್ದೀರಿ. ಎಲ್ಲರಿಗೂ ಒಳ್ಳೆಯದಾಗುವ ಆಲೋಚನೆಗಳನ್ನು ಜಾರಿಗೆ ತರುವುದಕ್ಕೆ ಪ್ರಯತ್ನಿಸಿ. ಸಹೋದ್ಯೋಗಿಗಳು ನಿಮ್ಮನ್ನು ಸ್ವಾರ್ಥಿ ಎಂದು ದೂಷಿಸಬಹುದು. ಇದು ನಿಮ್ಮ ವರ್ತನೆ ಹೇಗಿರುತ್ತದೆ ಎಂಬುದರ ಮೇಲೆ ಅವಲಂಬನೆ ಆಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ನೀವು ಹಾಕುವ ಪೋಸ್ಟ್ ಗಳು ಹಾಗೂ ಮಾಡುವ ಕಾಮೆಂಟ್ ಗಳ ಮೇಲೆ ಹತೋಟಿ ಇರಲಿ. ಸಲ್ಲದ ವಿವಾದವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ಅನಿರೀಕ್ಷಿತವಾದ ಧನಾಗಮ ಇದೆ. ನಿಮ್ಮ ಅಗತ್ಯಗಳು ಯಾವುವು ಎಂಬುದರ ತೀರ್ಮಾನ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ.
ಮಾನಸಿಕ ಒತ್ತಡದ ಇದ್ದಲ್ಲಿ ಅದರಿಂದ ಆಚೆ ಬರಲು ಅನುಕೂಲವಾಗುವಂಥ ಸನ್ನಿವೇಶ ಸೃಷ್ಟಿಯಾಗುತ್ತದೆ. ಮಕ್ಕಳು- ಸಂಗಾತಿಗೆ ನಿಮ್ಮಿಂದ ಅಗತ್ಯ ಇರುವ ಬೆಂಬಲ ದೊರೆಯಲಿದೆ. ವೈದ್ಯರಿಗೆ, ವಿಜ್ಞಾನಿಗಳಿಗೆ ವಿಪರೀತ ಕೆಲಸದ ದಿನವಾಗಿರುತ್ತದೆ. ಆಹಾರ- ನೀರು ಸೇವನೆ ಬಗ್ಗೆ ಜಾಗ್ರತೆಯಿಂದ ಇರಿ.
ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ನಿಮಗೆ ಗೊತ್ತಿರುವ ಅಥವಾ ಗೊತ್ತಾದ ಸಂಗತಿಯೆಲ್ಲ ನಿಜ ಅಂದುಕೊಳ್ಳಬೇಡಿ. ಗುರು- ಹಿರಿಯರ ಮಾತನ್ನು, ಸಲಹೆಗಳನ್ನು ಕೇಳಿಸಿಕೊಳ್ಳಿ. ತುಂಬ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮಗೆ ಆಗಲಿದೆ. ಭವಿಷ್ಯದ ಯೋಜನೆಗಳನ್ನು ರೂಪಿಸಲು ಅನುಭವ ಬಳಸಿಕೊಳ್ಳಿ.
ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಧ್ಯಾನ- ಯೋಗ ಕಲಿಕೆ ಆರಂಭಿಸುವುದಕ್ಕೆ ಆಸಕ್ತಿ ಮೂಡುತ್ತದೆ. ಹಳೇ ಸ್ನೇಹಿತರು ನಿಮ್ಮಿಂದ ನೆರವು ಕೇಳಬಹುದು. ಆಂಜನೇಯಸ್ವಾಮಿ ಸ್ಮರಣೆ ಮಾಡಿ. ಹಣಕಾಸಿನ ಸಮಸ್ಸ್ಯೆಗಳು ಇದ್ದಲ್ಲಿ ನಿವಾರಣೆ ಆಗಲಿದೆ. ದೈವಾನುಗ್ರಹ ಇದೆ.
ವಾಹನ ಚಾಲನೆ ವೇಳೆ ಎಚ್ಚರಿಕೆಯಿಂದ ಇರಬೇಕು. ಕಾನೂನು ಪಾಲನೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬೇಡಿ. ಹೊಸ ಆದಾಯ ಮೂಲವೊಂದು ಗೋಚರಿಸಲಿದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಸಾಲ ಮಾಡುವುದೋ ಅಥವಾ ಕ್ರೆಡಿಟ್ ಕಾರ್ಡ್ ಬಳಸುವುದೋ ಸರಿ. ಇಲ್ಲದಿದ್ದಲ್ಲಿ ಸಾಲದ ತಂಟೆಗೆ ಹೋಗಬೇಡಿ.
Tags:
ದಿನ ಭವಿಷ್ಯ