ತಂದೆ- ತಾಯಿಗಳ ಅಗತ್ಯವನ್ನು ತಿಳಿದುಕೊಂಡು, ಅವರಿಗೆ ಒದಗಿಸಲು ಪ್ರಯತ್ನ ಮಾಡಿ. ದೈವಾನುಗ್ರಹ ನಿಮ್ಮ ಮೇಲೆ ಇರುತ್ತದೆ. ಇದರ ಸದುಪಯೋಗ ಮಾಡಿಕೊಳ್ಳಿ. ಕೆಲಸದ ಮೇಲಿನ ಶ್ರದ್ಧೆ ಹೆಚ್ಚಿಸಿಕೊಳ್ಳಿ. ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಉಳಿತಾಯ ಯೋಜನೆಗಳ ಕಡೆಗೆ ಗಮನ ಹರಿಸುವಿರಿ.
ಎಲ್ಲರೂ ನಿಮ್ಮ ಕಡೆಗೆ ಅಚ್ಚರಿಯಿಂದ ನೋಡುವಂಥ ತೀರ್ಮಾನ, ಕೆಲಸಗಳನ್ನು ಮಾಡಲಿದ್ದೀರಿ. ದೇವತಾರಾಧನೆ, ಸ್ಮರಣೆಗಾಗಿ ಸಮಯ ಮೀಸಲಿಡಲಿದ್ದೀರಿ. ಈ ಹಿಂದೆ ಮಾಡಿಕೊಂಡ ಒಪ್ಪಂದದಂತೆ ಕೆಲಸ ಪೂರ್ತಿ ಮಾಡಿಕೊಡುವುದು ವ್ಯಾಪಾರಿಗಖು- ಉದ್ಯಮಿಗಳಿಗೆ ಕಷ್ಟವಾಗಲಿದೆ.
ಸ್ವಂತ ಆಸಕ್ತಿಗಳ ಕಡೆಗೆ ಹೆಚ್ಚಿನ ಗಮನ ನೀಡುವಿರಿ. ಭವಿಷ್ಯದ ಬಗೆಗಿನ ಅನಿಶ್ಚಿತತೆ ಕಾರಣಕ್ಕೆ ಹೊಸ ಯೋಜನೆಗಳಲ್ಲಿ ತೊಡಗಿಕೊಳ್ಳುವ ಆಲೋಚನೆ ಬರುತ್ತದೆ. ಆಪ್ತರ ಜತೆಗೆ ಮಹತ್ವವಾದ ಚರ್ಚೆ ನಡೆಸಲಿದ್ದೀರಿ. ಬಂಧುಗಳು- ಸ್ನೇಹಿತರು ನಿಮ್ಮ ನೆರವನ್ನು ಕೋರಬಹುದು. ಸಾಧ್ಯವಿದ್ದಲ್ಲಿ ಸಹಾಯ ಮಾಡಿ.
ನಿಮ್ಮ ಆದ್ಯತೆಗಳು ಬದಲಾಗುವ ದಿನ ಇದು. ಕೆಲಸ ಹುಡುಕುತ್ತಿರುವ ಹೊಸಬರಿಗೆ, ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಹೊಸ ಅವಕಾಶಗಳು, ಪರಿಚಯಗಳು ದೊರೆಯುತ್ತವೆ. ಅವುಗಳನ್ನು ನೀವು ಯಾವ ಮಟ್ಟಿಗೆ ಸದುಪಯೋಗ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ.
ವಿಪರೀತ ಕೆಲಸದ ಒತ್ತಡ ಏರ್ಪಡುತ್ತದೆ. ಮೇಲಧಿಕಾರಿಗಳು ನಿಮ್ಮ ಮಾತನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಹೊಸಬರ ಜತೆಗೆ ಹಣಕಾಸಿನ ವಿಚಾರವನ್ನು ಚರ್ಚೆ ಮಾಡಬೇಡಿ. ನಿಮ್ಮ ಪ್ರಾಮಾಣಿಕತೆಗೆ ಪರೀಕ್ಷೆ ಒಡ್ಡುವ ಪ್ರಯತ್ನಗಳಾಗುತ್ತವೆ. ಮುಖ್ಯ ದಾಖಲೆ ಪತ್ರಗಳನ್ನು ಜೋಪಾನವಾಗಿಡಿ.
ನಿಮ್ಮ ವೇಗಕ್ಕೆ ತಕ್ಕಂತೆ ಇತರರು ಕೆಲಸ ಮಾಡುತ್ತಿಲ್ಲ ಎಂಬ ಹತಾಶೆ ಕಾಡುತ್ತದೆ. ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಖರ್ಚು ಕಾಣಿಸಿಕೊಂಡು, ಆತಂಕಕ್ಕೆ ಕಾರಣವಾಗಲಿದೆ. ಕೆಲಸ ಪೂರ್ಣವಾಗುವ ಮುನ್ನವೇ ಎಲ್ಲ ಹಣವನ್ನು ನೀಡುವುದು ಬುದ್ಧಿವಂತಿಕೆಯಲ್ಲ. ಈ ಸಂದರ್ಭ ಭಾವನಾತ್ಮಕವಾದ ಆಲೋಚನೆ ಪ್ರಯೋಜನಕ್ಕೆ ಬರುವುದಿಲ್ಲ.
ಬೇರೆಯವರ ಶ್ರಮದ ಪಾಲನ್ನು ಕಸಿಯುವ ಪ್ರಯತ್ನ ಮಾಡಬೇಡಿ. ನಿಮ್ಮ ಆಪ್ತರು ದೂರವಾಗುವಂತೆ ಆದೀತು, ಎಚ್ಚರ. ಸರ್ಕಾರಿ ಕೆಲಸಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿ ದೊರೆಯಲಿದೆ. ಆಲಸ್ಯ ಮಾಡದಂತೆ ಸಾಮರ್ಥ್ಯವನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ.
ಧೈರ್ಯ ಮಾಡಿ, ನಿಮ್ಮ ನಿರ್ಧಾರವನ್ನು ಹೇಳಬೇಕಾಗಿದೆ. ಮುಂದಿನ ಹಂತಕ್ಕೆ ಸಾಗುವ ನಿಟ್ಟಿನಲ್ಲಿ ಇದು ಪ್ರಮುಖವಾದ ಹೆಜ್ಜೆ ಆಗಲಿದೆ. ಸ್ವಾಭಿಮಾನವನ್ನು ಬಿಡದೆ ಹಿಡಿದ ಕೆಲಸವನ್ನು ಸಾಧಿಸುವ ಕಡೆಗೆ ದೃಷ್ಟಿ ನೆಡಿ. ಸುಖಾಸುಮ್ಮನೆ ಆಕ್ಷೇಪ ಮಾಡುವವರ ಬಗ್ಗೆ ಗಮನ ನೀಡುವ ಅಗತ್ಯ ಇಲ್ಲ.
ವಿಪರೀತ ಮರೆವು ನಿಮ್ಮನ್ನು ಕಾಡಬಹುದು. ದುಡ್ಡು, ಒಡವೆ, ಅಗತ್ಯ ದಾಖಲೆಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಸ್ವಂತ ಮನೆ ಇರುವವರಿಗೆ ದುರಸ್ತಿ ಮತ್ತೊಂದಕ್ಕೆ ಖರ್ಚು ಮಾಡಬೇಕಾದ ಅಗತ್ಯಗಳು ಕಂಡುಬರುತ್ತವೆ. ನಿರೀಕ್ಷಿತ ಮಟ್ಟದಲ್ಲಿ ಆದಾಯದ ಒಳಹರಿವು ಇರುವುದೇ ಎಂಬುದನ್ನು ಖಚಿತ ಮಾಡಿಕೊಳ್ಳಿ.
ಆವೇಶದಲ್ಲಿ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಬೇಡಿ. ನಿಶ್ಚಿತ ಆದಾಯದ ಕಡೆಗೆ ಗಮನ ಇರಲಿ. ಈಗಿನ ಹಿನ್ನಡೆ ಅಲ್ಪ ಕಾಲದ್ದು ಮಾತ್ರ. ಭವಿಷ್ಯದ ಸಾಧ್ಯತೆಗಳನ್ನು ಆಲೋಚಿಸಿ. ಯಾವುದೇ ಮುಖ್ಯ ನಿರ್ಣಯ ತೆಗೆದುಕೊಳ್ಳುವ ಮುನ್ನ ಸಂಗಾತಿ, ಸ್ನೇಹಿತರ ಜತೆಗೆ ಮಾತುಕತೆ ನಡೆಸಿ.
ಎಲ್ಲದರಲ್ಲೂ ಸ್ವಾರ್ಥ ಆಲೋಚನೆ ಮಾಡುವುದು ಸರಿಯಲ್ಲ. ನಿಮ್ಮ ಗುರಿಯನ್ನು ತಲುಪುವುದು ಎಷ್ಟು ಮುಖ್ಯವೋ ಅದಕ್ಕಾಗಿ ಸಾಗುವ ದಾರಿಯೂ ಅಷ್ಟೇ ಮುಖ್ಯವಾದದ್ದು. ಸಹೋದ್ಯೋಗಿಗಳ ಸಣ್ಣ ಪುಟ್ಟ ತಪ್ಪುಗಳನ್ನು ಮರೆಯಲು ಪ್ರಯತ್ನಿಸಿ. ಈ ದಿನ ಸಾಧ್ಯವಾದಷ್ಟು ಮೌನವಾಗಿರಿ.
ಉದ್ದೇಶ ಇಟ್ಟುಕೊಂಡು ನೀವು ಹಾಕಿದ ಈ ಹಿಂದಿನ ಪರಿಶ್ರಮಕ್ಕೆ ಪ್ರತಿಫಲ ದೊರೆಯಲಿದೆ. ಸಂಗಾತಿಯ ಬೇಡಿಕೆ ಮೇಲೆ ಹಣಕಾಸಿನ ನೆರವು ನೀಡಬೇಕಾಗುತ್ತದೆ. ದೂರದ ಬಂಧುಗಳಿಂದ ಮುಖ್ಯವಾದ ಸುದ್ದಿಯೊಂದು ನಿಮ್ಮನ್ನು ತಲುಪಲಿದೆ. ವೃತ್ತಿಪರರಿಗೆ ಹೊಸ ಆದಾಯದ ಮೂಲ ಗೋಚರಿಸಲಿದೆ.
Tags:
ದಿನ ಭವಿಷ್ಯ