ನಿಮ್ಮ ಸಲಹೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಚಿಂತೆ ಬೇಡ. ಅದರಲ್ಲೂ ನಿಮ್ಮ ಸಹೋದ್ಯೋಗಿಗಳು, ಮೇಲಧಿಕಾರಿಗಳು ಹೀಗೆ ಮಾತನ್ನು ಅಸಡ್ಡೆ ಮಾಡಬಹುದು. ಇದು ತಾತ್ಕಾಲಿಕ ಮಾತ್ರ. ಈ ಕಾರಣಕ್ಕೆ ಆಸಕ್ತಿ ಕಳೆದುಕೊಳ್ಳಬೇಡಿ. ಸಮಾಧಾನ, ತಾಳ್ಮೆ ಬಹಳ ಅಗತ್ಯ.
ನೀವು ಹಣ ಹೂಡಿಕೆ ಮಾಡಿ, ಮರೆತುಹೋಗಿದ್ದ ಮೊತ್ತವೊಂದು ವಾಪಸ್ ಬರುವ ಸಾಧ್ಯತೆಗಳು ಗೋಚರಿಸುತ್ತವೆ. ಆದರೆ ಇದಕ್ಕೆ ನಿಮ್ಮ ಪ್ರಯತ್ನ ಬಹಳ ಮುಖ್ಯ. ನಾಜೂಕಾದ ಮಾತನಾಡಿ, ವ್ಯವಹಾರ ಬಗೆಹರಿಸಿಕೊಳ್ಳುವ ಕಡೆಗೆ ಗಮನ ನೀಡಿ. ಸಿಟ್ಟು ಮಾಡಿಕೊಂಡರೆ ಏನೂ ಪ್ರಯೋಜನ ಇಲ್ಲ ಎಂಬುದನ್ನು ನೆನಪಿಡಿ.
ಊಟ- ತಿಂಡಿ ವಿಚಾರಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತೀರಿ. ಹಾಕಿಕೊಂಡ ಗುರಿಯನ್ನು ತಲುಪಲು ಮಾಮೂಲಿಗಿಂತ ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಮಹತ್ತರವಾದ ಜವಾಬ್ದಾರಿ ಹೆಗಲೇರಬಹುದು. ನಿಮ್ಮ ಮೂಲ ಸ್ವಭಾವವನ್ನು ಬಿಡಬೇಡಿ. ಯಾರದೋ ಓಲೈಕೆಗಾಗಿ ಪ್ರಿಯವಾದ ಮಾತನ್ನು ಆಡಬೇಕು ಎಂದೇನಿಲ್ಲ.
ಸ್ವತಂತ್ರ ಆಲೋಚನೆಗೆ ಅವಕಾಶ ಇಲ್ಲದ ಸಮಯ ಇದು. ಆ ಕಾರಣಕ್ಕೆ ಅಲ್ಲಿಂದ ಬಿಟ್ಟು ಹೊರಟರೆ ಮುಂದೆ ಪರಿತಾಪ ಪಡಬೇಕಾಗುತ್ತದೆ. ಆದ್ದರಿಂದ ಸ್ವಲ್ಪ ಮಟ್ಟಿಗಾದರೂ ಹೊಂದಾಣಿಕೆ ರೂಢಿಸಿಕೊಳ್ಳಿ. ಹೊಸ ವ್ಯವಹಾರವು ಆಕರ್ಷಕವಾಗಿದೆ ಎಂಬ ಕಾರಣಕ್ಕೆ ದೊಡ್ಡ ಮಟ್ಟದ ಹೂಡಿಕೆ ಬೇಡ.
ಹೊಸ ಆದಾಯ ಮೂಲಕ್ಕೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಾನಾ ಬಗೆಯಲ್ಲಿ ಆಲೋಚನೆ ಮಾಡುತ್ತೀರಿ. ಸಂಗಾತಿ- ಮಕ್ಕಳ ಜತೆಗೂ ಈ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ. ಹೂಡಿಕೆಯಿಂದ ಬಂದ ಅಲ್ಪ ಪ್ರಮಾಣದ ಲಾಭವಾದರೂ ಸರಿ, ವಾಪಸ್ ತೆಗೆದುಕೊಳ್ಳುವುದು ಉತ್ತಮ. ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡಿ.
ಸಾಲ ತೀರಿಸುವುದಕ್ಕೆ ಬಹಳ ಕಷ್ಟ ಆಗಲಿದೆ. ಪೋಷಕರ ಅನಾರೋಗ್ಯವು ಚಿಂತೆಗೆ ಕಾರಣ ಆಗಬಹುದು. ವಾಹನ ಅಥವಾ ಭೂಮಿಯನ್ನು ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮನೆಯ ಖರ್ಚು- ವೆಚ್ಚದ ಪ್ರಮಾಣ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗುವುದರಿಂದ ಆತಂಕಕ್ಕೆ ಒಳಗಾಗುತ್ತೀರಿ.
ನಿಮ್ಮ ಮಾತಿನ ಮೂಲಕ ಇತರರನ್ನು ಮೋಡಿ ಮಾಡುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇರುವವರಿಂದ ಮಹತ್ತರವಾದ ಕೆಲಸ- ಕಾರ್ಯಗಳು ಆಗಲಿವೆ. ಅಂದುಕೊಳ್ಳದ ರೀತಿಯಲ್ಲಿ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ವ್ಯಾಪಾರ- ಉದ್ಯಮಗಳ ವಿಸ್ತರಣೆಗೆ ಯೋಜನೆ ರೂಪಿಸಲಿದ್ದೀರಿ.
ಸೋದರ- ಸೋದರಿಯರ ಜತೆಗೆ ಭಿನ್ನಾಭಿಪ್ರಾಯ ಸೃಷ್ಟಿಯಾಗಬಹುದು. ತಂದೆ- ತಾಯಿ ಮಾತು, ಸಲಹೆಗಳನ್ನು ಕೇಳಿಸಿಕೊಳ್ಳಿ. ನಾನು ಮಾಡಿದ ನಿರ್ಧಾರವೇ ಸರಿ ಎಂಬ ಧೋರಣೆ ಸರಿಯಲ್ಲ. ಮೇಲಧಿಕಾರಿ ಜತೆಗೆ ಮಾತನಾಡುವಾಗ ಗಮನ ಇರಲಿ. ತಪ್ಪು ಕಂಡುಹಿಡಿದು, ತೊಂದರೆ ನೀಡುವುದಕ್ಕೆ ಕಾಯ್ದುಕೊಂಡಿದ್ದಾರೆ.
ನಿರುದ್ಯೋಗ ಸಮಸ್ಯೆ ಕಾಡಬಹುದು. ಸಂಗಾತಿ- ಮಕ್ಕಳ ಜತೆಗೆ ಸಣ್ಣ- ಪುಟ್ಟ ವಿಚಾರಕ್ಕೆ ವಾಗ್ವಾದ ಏರ್ಪಡಬಹುದು. ನಿಮ್ಮನ್ನು ವಿಮರ್ಶಿಸುವವರ ಬಗ್ಗೆ ಅನವಶ್ಯಕವಾಗಿ ಸಿಟ್ಟಾಗದಿರಿ. ನಿಮ್ಮಿಂದ ಸಾಧ್ಯವಾದಲ್ಲಿ ಧ್ಯಾನವನ್ನು ಮಾಡಿ. ಏಕಾಂತದಲ್ಲಿ ಸಮಯ ಕಳೆಯುವುದಕ್ಕೆ ಪ್ರಯತ್ನ ಮಾಡಿ.
ಅನಗತ್ಯ ಖರ್ಚುಗಳನ್ನು ತಡೆಯುವಲ್ಲಿ ಸಫಲರಾಗುತ್ತೀರಿ. ಭವಿಷ್ಯದ ಬಗ್ಗೆ ಗಂಭೀರ ಚಿಂತನೆಗಳು ಬರುತ್ತವೆ. ಬೇರೆಯವರ ಕುಟುಂಬದಲ್ಲಿ ಕಾಣಿಸಿಕೊಂಡ ಸಮಸ್ಯೆಗಳನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ. ಆದರೆ ಈ ವೇಳೆ ನಿಮ್ಮ ಬುದ್ಧಿವಂತಿಕೆ, ಸಮಯಪ್ರಜ್ಞೆಯ ಮಾತನಾಡಿ.
ನಿಮ್ಮ ತಾಳ್ಮೆಯ ಸ್ವಭಾವವನ್ನು ಎಲ್ಲರೂ ಮೆಚ್ಚಲಿದ್ದಾರೆ. ಸವಾಲುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಸಮಯಕ್ಕೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಸಫಲರಾಗುತ್ತೀರಿ. ಹಿರಿಯರಿಗೆ ಭುಜ- ಸೊಂಟದ ನೋವು ಕಾಡಬಹುದು. ಭಾರವಾದ ವಸ್ತುಗಳನ್ನು ಎತ್ತಬೇಡಿ, ಎಚ್ಚರಿಕೆ.
ಸರ್ಕಾರದ ಪ್ರಮುಖ ಹುದ್ದೆಯಲ್ಲಿ ಇರುವವರಿಗೆ ಒತ್ತಡದ ದಿನ ಇದಾಗಿರುತ್ತದೆ. ವಿಪರೀತ ಓಡಾಟ, ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೊಸ ಸನ್ನಿವೇಶಗಳು. ಇವೆಲ್ಲವೂ ಸೇರಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಆಹಾರ ಪಥ್ಯದ ಕಡೆಗೆ ಗಮನ ನೀಡಿ.
ಕೃಪೆ: kannada.oneindia.com
Tags:
ದಿನ ಭವಿಷ್ಯ