ಭಟ್ಕಳದಿಂದ ಯಾವುದೇ ಅನುಮತಿ ಪಡೆಯದೆ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಶಿರಸಿಯ ನೆಹರೂನಗರದ ಕೆನರಾಗಲ್ಲಿಯಲ್ಲಿರುವ ಮಾವನ ಮನೆಗೆ ಬಂದಿದ್ದ ಭಟ್ಕಳ ಮೂಲದ ಒರ್ವನ ಮೇಲೆ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೊರೊನಾ ಸಾಂಕ್ರಾಮಿಕ ರೋಗದ ಸೊಂಕು ಹರಡುವುದನ್ನು ತಡೆಯಲು ಕೈಗೊಳ್ಳಬೇಕಾದ ಮುಂಜಾಗ್ರತಾ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಭಟ್ಕಳದಿಂದ ಶಿರಸಿಯ ನೆಹರೂನಗರದ ಕೆನರಾಗಲ್ಲಿಗೆ ಬಂದು ಮಾವನ ಮನೆಯಲ್ಲಿ ಉಳಿದುಕೊಂಡಿದ್ದ ಆರೋಪಿತ ಮೊಹ್ಮದ್ ಮುಜಾಸ್ಮಿರ/ರೊಷನ್ ಜಮೀರ್ ಖಾನ್ ನವಾಯತ್ ಕಾಲೋನಿ ಭಟ್ಕಳ ಇತನ ಮೇಲೆ ಮಾರುಕಟ್ಟೆ ಠಾಣೆಯಲ್ಲಿ ಅಪರಾಧ ಸಂಖ್ಯೆ ೪೧/೨೦ ಕಲಂ ೨೬೯,೨೭೦,೨೭೧ ಐ.ಪಿ.ಸಿ.ಅಡಿ ಪ್ರಕರಣ ದಾಖಲಾಗಿದ್ದು ಆರೋಪಿತನನ್ನು ದಸ್ತಗಿರಿ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೊಮ್ ಕೊರಂಟೈನ್ ನಲ್ಲಿ ಇಡಲಾಗಿದೆ.
ಶಿರಸಿ ಉಪವಿಭಾಗದ ಡಿ.ಎಸ್.ಪಿ.ಯವರಾದ ಗೋಪಾಲಕೃಷ್ಣ ನಾಯಕ ರವರು ಶಿರಸಿ ನಗರದ ಜನರ ಸ್ವಾಸ್ಥ್ಯ ಮತ್ತು ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸಾರ್ವಜನಿಕರು ಹೊರರಾಜ್ಯ ಮತ್ತು ಅಂತರ್ ಜಿಲ್ಲೆಗಳಿಂದ ಶಿರಸಿ ನಗರಕ್ಕೆ ಬರುವವರ ಮಾಹಿತಿಯನ್ನು ಠಾಣೆಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.