ಇಂದಿನ ಭವಿಷ್ಯ ಏಪ್ರಿಲ್ 15, 2020

Todays horoscope in kannada Todays astrology in kannada





Today astrology in kannada today horoscope in kannada


ದೇವರ ಮೇಲಿನ ನಂಬಿಕೆ ಕಡಿಮೆ ಆಗುವ ಸಾಧ್ಯತೆಗಳಿವೆ. ಈಚೆಗೆ ನಡೆದ ಬೆಳವಣಿಗೆಗಳ ಕಾರಣಕ್ಕೆ ಬೇಸರಗೊಳ್ಳುವ ನೀವು, ಸ್ವಭಾವದಲ್ಲಿ ಬದಲಾಗಲಿದ್ದೀರಿ. ನಿಮ್ಮ ಕರ್ಮ ಹಾಗೂ ಗ್ರಹಚಾರದ ಫಲವನ್ನು ಅನುಭವಿಸುತ್ತಿದ್ದೀರಿ ವಿನಾ ದೇವರನ್ನು ದೂಷಿಸಿ ಪ್ರಯೋಜನವಿಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.



Today astrology in kannada today horoscope in kannada

ನಿಮ್ಮ ಬುದ್ಧಿವಂತಿಕೆಯ ಪ್ರಯೋಜನ ದೊಡ್ಡ ಮಟ್ಟದ ಜನ ಸಮುದಾಯಕ್ಕೆ ಆಗಲಿದೆ. ಧೈರ್ಯವಾಗಿ ತೆಗೆದುಕೊಳ್ಳುವ ನಿರ್ಧಾರವೊಂದು ಮನ್ನಣೆಗೆ ಪಾತ್ರವಾಗಲಿದೆ. ಗುರಿಯಿಟ್ಟು ಇಟ್ಟ ಹೆಜ್ಜೆಗಳು ಸಕಾರಾತ್ಮಕವಾದ ಫಲಿತಾಂಶ ನೀಡಲು ಆರಂಭವಾಗುತ್ತವೆ. ಸರಿ- ತಪ್ಪು ನಿರ್ಧಾರಗಳ ಬಗ್ಗೆ ಸ್ಪಷ್ಟತೆ ಇರಲಿ.




Today astrology in kannada today horoscope in kannada

ಕೈಗೆ ನಿಲುಕದ ಸಂಗತಿ- ವಿಚಾರಗಳನ್ನು ತಲೆಯಿಂದ ತೆಗೆದುಹಾಕಿ. ಸುಖಾಸುಮ್ಮನೆ ಇತರರನ್ನು ದೂಷಿಸಿ, ನಿಮ್ಮ ಹುಳುಕನ್ನು ಮುಚ್ಚಿಕೊಳ್ಳುವುದು ಈ ದಿನದ ಮಟ್ಟಿಗಂತೂ ಸಾಧ್ಯವಾಗುವುದಿಲ್ಲ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರುವುದು ಒಳ್ಳೆಯದು. ಆದರೆ ಅತಿಯಾದ ವಿಶ್ವಾಸ ಮಾರಕ ಆಗುತ್ತದೆ, ಎಚ್ಚರಿಕೆ.




Today astrology in kannada today horoscope in kannada

ಕಡಿಮೆ ಖರ್ಚಿನಲ್ಲಿ ಏಕಕಾಲಕ್ಕೆ ಹಲವು ಕೆಲಸಗಳನ್ನು ಮಾಡಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತೀರಿ. ಸ್ನೇಹಿತರು- ಬಂಧುಗಳ ಸಲಹೆ ಕೂಡ ಪಡೆಯುವ ಸಾಧ್ಯತೆ ಇದೆ. ಈ ಹಿಂದೆ ನಿಮ್ಮ ವಿರುದ್ಧ ಬಂದಿದ್ದ ದೂರಿನ ವಿಚಾರಣೆಯನ್ನು ಈಗ ಮಾಡುವ ಸಾಧ್ಯತೆ ಇದೆ.






Today astrology in kannada today horoscope in kannada

ನಿಮಗೆ ದೊರೆಯುವ ದೈವ ಪ್ರೇರಣೆಯ ಮೂಲಕ ಮಾಡುವ ಕೆಲಸಗಳು ಯಶಸ್ಸು ಕಾಣಲಿವೆ. ಇತರರ ಬಗ್ಗೆ ದಯೆಯನ್ನು ತೋರಿಸಲಿದ್ದೀರಿ. ನಿಮ್ಮ ಉಳಿತಾಯದ ಹಣವನ್ನು ಕುಟುಂಬದ ಅಗತ್ಯಗಳಿಗೆ ಖರ್ಚು ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ಇಂಥ ಸನ್ನಿವೇಶದಲ್ಲಿ ಭಾವುಕರಾಗಿ ಆಲೋಚನೆ ಮಾಡದಿರಿ. ವಾಸ್ತವ ನೆಲೆಗಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ.





Today astrology in kannada today horoscope in kannada

ಎಲ್ಲದರಲ್ಲೂ ಪರ್ಫೆಕ್ಷನಿಸ್ಟ್ ಗಳಾದ ನೀವು, ಇತರರಲ್ಲೂ ಅದನ್ನೇ ಬಯಸುವುದು ಅತಿ ಎನಿಸಿಕೊಳ್ಳುತ್ತದೆ. ಆಯಾ ವ್ಯಕ್ತಿಯ ಮಿತಿಗಳನ್ನು ಅರಿತು, ವ್ಯವಹರಿಸಿ. ದೀರ್ಘಾವಧಿ ಯೋಜನೆಗಳಿಗೆ ನಿಶ್ಚಿತ ರೂಪ ದೊರೆಯುವ ಕಾಲ ಸನ್ನಿಹಿತವಾಗಿದೆ. ಆದರೆ ಅದಕ್ಕಾಗಿ ಬಹಳ ಶ್ರಮ ಪಡಬೇಕಾಗುತ್ತದೆ.






Today astrology in kannada today horoscope in kannada

ನಿಮ್ಮ ಅನುಮಾನ ಸ್ವಭಾವದಿಂದ ಆಪ್ತರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ. ಎಲ್ಲ ಸಲವೂ ನೀವು ಅಂದುಕೊಂಡಿದ್ದೇ ಸತ್ಯ ಎಂಬ ನಿಲುವು ಸರಿಯಲ್ಲ. ಎಲ್ಲರಲ್ಲೂ ತಪ್ಪನ್ನೇ ಹುಡುಕುತ್ತೀರಿ ಎಂದು ಆರೋಪಿಸಿ, ನಿಮ್ಮ ಗುಣವನ್ನು ಈ ದಿನದ ಮಟ್ಟಿಗೆ ಪ್ರಮುಖ ಮಾಡಿಕೊಂಡು, ಇತರರು ದೂರುವ ಹಾಗೂ ಮೂದಲಿಸುವ ಕೆಲಸ ಆಗುತ್ತದೆ.




Today astrology in kannada today horoscope in kannada

ನಿಮ್ಮ ನಿಷ್ಠೆ, ನಿಯತ್ತು, ಪ್ರಾಮಾಣಿಕತೆಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತದೆ. ಪ್ರಮುಖ ಯೋಜನೆಯೊಂದರ ನಾಯಕತ್ವದ ಹೊಣೆ ನಿಮಗೆ ವಹಿಸುವ ಸಾಧ್ಯತೆ ಇದೆ. ಇದರಿಂದ ಆದಾಯ, ಮನ್ನಣೆ, ಮೇಲಧಿಕಾರಿಗಳ ಜತೆಗೆ ನಿಕಟ ಸಂಪರ್ಕ ಇತ್ಯಾದಿ ಅನುಕೂಲಗಳು ದೊರೆಯಲಿವೆ.






Today astrology in kannada today horoscope in kannada

ನಿಮ್ಮ ಮನಸಿನಲ್ಲಿ ಅನಗತ್ಯವಾದ ಆತಂಕ ಕಾಡಲಿದೆ. ಉದ್ಯೋಗ ನಷ್ಟ, ಹಣಕಾಸಿನ ಸಮಸ್ಯೆ, ಪೋಷಕರ ಅನಾರೋಗ್ಯ ಹೀಗೆ ಏನಾದರೊಂದು ಸಮಸ್ಯೆ ನಿಮ್ಮನ್ನು ಬಿಟ್ಟೂ ಬಿಡದೆ ಕಾಡಲಿದೆ. ಈ ಮಧ್ಯೆ ನೀವಾಡಿದ ಮಾತಿಗೆ ಬೇರೆಯದೇ ಬಣ್ಣ ಹಚ್ಚಿ, ವರ್ಚಸ್ಸಿಗೆ ಹಾನಿ ತರುವಂಥ ಪ್ರಯತ್ನ ಮಾಡಲಾಗುತ್ತದೆ.







Today astrology in kannada today horoscope in kannada

ಉದ್ಯೋಗ ಬದಲಾವಣೆಯ ಅನಿವಾರ್ಯ ಸನ್ನಿವೇಶ ಎದುರಾದಂತೆ ಭಾಸವಾಗುತ್ತದೆ. ಅದಕ್ಕೆ ಪೂರಕವಾದ ಪ್ರಯತ್ನಗಳನ್ನು ಮಾಡಲಿದ್ದೀರಿ. ಆಲಸ್ಯ ನಿಮ್ಮನ್ನು ಈ ದಿನ ವಿಪರೀತ ಕಾಡಲಿದೆ. ಈ ಹಿಂದೆ ಮಾಡಿದ ತಪ್ಪಿನ ಫಲ ಈಗ ಅನುಭವಿಸುತ್ತೀರಿ. ಅಪಾತ್ರರಿಗೆ ನೀಡಿದ ಮನ್ನಣೆಯಿಂದ ಅವಮಾನದ ಪಾಲಾಗಬೇಕಾಗುತ್ತದೆ.



Today astrology in kannada today horoscope in kannada

ಬೇಕು- ಬೇಡಗಳ ಬಗ್ಗೆ ಸ್ಪಷ್ಟತೆ ಇರಲಿ. ಇಲ್ಲದಿದ್ದಲ್ಲಿ ಸಾಲಗಾರರಾಗುತ್ತೀರಿ. ಕ್ರೆಡಿಟ್ ಕಾರ್ಡ್ ಬಳಸುತ್ತಿರವವರು ತುಂಬ ಎಚ್ಚರಿಕೆಯಿಂದ ಇರಬೇಕು. ಬಹಳ ಆಪ್ತರಿಂದಲೇ ನಿಮಗೆ ವಂಚನೆ ಆಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಾತಿನ ಮೂಲಕ ನೀವೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಳ್ಳಬಹುದು. ಆದ್ದರಿಂದ ಸಾಧ್ಯವಾದಷ್ಟೂ ಮೌನವಾಗಿರಿ.






Today astrology in kannada today horoscope in kannada

ಅಂದುಕೊಳ್ಳದ ಮೂಲಗಳಿಂದ ಆದಾಯ ಮಾರ್ಗಗಳು ಗೋಚರಿಸುತ್ತವೆ. ಅವಕಾಶಗಳು ಮೇಲ್ನೋಟಕ್ಕೆ ಕಾಣುವುದಕ್ಕಿಂತ ದೊರೆಯುವುದು ಕಷ್ಟವಿದೆ ಎಂಬ ಅರಿವಾಗುತ್ತದೆ. ಆಹಾರ- ನೀರು ಸೇವನೆ ಬಗ್ಗೆ ಎಚ್ಚರಿಕೆ ಅಗತ್ಯ. ಮೂಳೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಅಥವಾ ಈ ಹಿಂದೆ ಅನುಭವಿಸಿದ್ದ ಅನಾರೋಗ್ಯ ಸಮಸ್ಯೆ ಮರುಕಳಿಸಬಹುದು.




ಕೃಪೆ: kannada.oneindia.com

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement