ಇಂದಿನ ಭವಿಷ್ಯ ಏಪ್ರಿಲ್ 12, 2020

Todays horoscope in kannada Todays astrology in kannada





Today astrology in kannada today horoscope in kannada


ನೀವು ರೂಪಿಸಿದ ಕಾರ್ಯತಂತ್ರದ ಪರಿಣಾಮವಾಗಿ ದೊಡ್ಡ ಮಟ್ಟದ ನಷ್ಟ, ತೊಂದರೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ವ್ಯವಹಾರಸ್ಥರು- ಉದ್ಯಮಿಗಳು ವ್ಯಾಪಾರ ವಿಸ್ತರಣೆಗೆ ಯೋಜನೆ ರೂಪಿಸುತ್ತೀರಿ. ಬಂಧುಗಳು- ಸ್ನೇಹಿತರ ಜತೆ ಮುಖ್ಯ ವಿಚಾರಗಳ ಚರ್ಚೆ ನಡೆಸುತ್ತೀರಿ. ವೃತ್ತಿನಿರತರು ಉಳಿತಾಯ ಯೋಜನೆಗಳನ್ನು ರೂಪಿಸುತ್ತೀರಿ.



Today astrology in kannada today horoscope in kannada

ನಿಮಗೆ ಸಿಗುವ ಸದವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಿ. ಹಿರಿಯರ ಅನುಭವದ ಮಾತನ್ನು ಕೇಳಿಸಿಕೊಂಡು, ಮುಂದಕ್ಕೆ ಹೆಜ್ಜೆ ಇಡಿ. ಮಕ್ಕಳ ಏಳ್ಗೆ- ಪ್ರಗತಿಯಿಂದ ನೆಮ್ಮದಿ ದೊರೆಯುತ್ತದೆ. ನಿರೀಕ್ಷಿತ ಮೂಲಗಳಿಂದ ಆದಾಯ ಹರಿದುಬರುವುದಕ್ಕೆ ಯಾವುದೇ ಸಮಸ್ಯೆ ಇಲ್ಲ. ನಿಮ್ಮ ಮಾತಿನ ಮೂಲಕ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುತ್ತೀರಿ.




Today astrology in kannada today horoscope in kannada

ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸುವವರಿಗೆ ಒತ್ತಡದ ದಿನವಾಗಿರುತ್ತದೆ. ಮಾತಿನ ಮೇಲೆ ಹಿಡಿತ ಇರಲಿ. ನಿಮ್ಮ ಮಾತಿಗೆ ನಾನಾ ಅರ್ಥ ಕಲ್ಪಿಸಿ, ಆತ್ಮವಿಶ್ವಾಸವನ್ನು ತಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ಸಂಗಾತಿ ಜತೆಗೆ ಸಣ್ಣ- ಪುಟ್ಟ ಸಂಗತಿಗಳಿಗೂ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆ ಇದೆ.




Today astrology in kannada today horoscope in kannada

ಕೂಡಿಟ್ಟಿರುವ ಹಣವನ್ನು ಈ ತಕ್ಷಣಕ್ಕೆ ಯಾವುದೇ ಉಳಿತಾಯ ಯೋಜನೆಗಳಿಗೆ ಹೂಡಿಕೆ ಮಾಡುವ ಆಲೋಚನೆ ಬೇಡ. ಇನ್ನೂ ನಿಮ್ಮ ಕೈ ಸೇರದ ಹಣದ ಕುರಿತಾಗಿ ಯಾರಿಗೂ ಮಾತು ಕೊಡಬೇಡಿ. ಕೆಲಸ ಬಿಡುವ ಆಲೋಚನೆ ಬೇಡವೇ ಬೇಡ. ನಿಮ್ಮ ಒಳಿತನ್ನು ಬಯಸುವವರು ಯಾರು ಎಂಬುದನ್ನು ತಿಳಿದುಕೊಳ್ಳಿ.






Today astrology in kannada today horoscope in kannada

ನಿಮಗಿಂತ ಚಿಕ್ಕವರ ಜತೆಗೆ ಮಾತನಾಡುವಾಗ ನಾಲಗೆ ಮೇಲೆ ಹಿಡಿತ ಇರಲಿ. ಬಾಡಿ ಲಾಂಗ್ವೇಜ್ ಕೂಡ ಗಮನದಲ್ಲಿ ಇರಲಿ. ನಿಮ್ಮ ವರ್ಚಸ್ಸಿಗೆ ಹಾನಿಯಾಗುವಂಥ ಕೆಲವು ಬೆಳವಣಿಗೆ ಆಗಬಹುದು. ಆದ್ದರಿಂದ ನಿಮ್ಮ ನಡವಳಿಕೆ- ಗುಣವನ್ನು ಇತರರು ಗಮನಿಸುತ್ತಾರೆ ಎಂಬುದು ತಿಳಿದಿರಲಿ.





Today astrology in kannada today horoscope in kannada

ವೃತ್ತಿಪರರಿಗೆ ಸಾಲದ ಒತ್ತಡ ಜಾಸ್ತಿ ಆಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡುವಾಗ ಖರ್ಚಿನ ಮೇಲೆ ಹಿಡಿತ ಇರಲಿ. ಯಾರದೋ ಮೇಲಿನ ಸವಾಲಿಗೆ ಕೈಯಲ್ಲಿನ ಎಲ್ಲ ಹಣವನ್ನು ಖರ್ಚು ಮಾಡಿದರೆ ನಿಮಗೇ ಕಷ್ಟವಾಗುತ್ತದೆ. ಧ್ಯಾನ ಮಾಡುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.






Today astrology in kannada today horoscope in kannada

ಈಗಾಗಲೇ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅದು ಉಲ್ಬಣ ಆಗುವ ಎಲ್ಲ ಸಾಧ್ಯತೆ ಇದೆ. ಆಹಾರ ಪಥ್ಯದಲ್ಲಿ ಕಟ್ಟುನಿಟ್ಟಾಗಿ ಇರಬೇಕು. ಇತರರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಸಂಗಾತಿ- ಮಕ್ಕಳ ಜತೆ ಸುಳ್ಳು ಹೇಳಬೇಡಿ. ಪ್ರಮುಖ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಬೇಡಿ.




Today astrology in kannada today horoscope in kannada

ಯಾರಿಗೋ ಹೊರೆಯಾಗುತ್ತಿದ್ದೇನೆ ಎಂಬ ಭಾವನೆ ನಿಮಗೆ ಮೂಡುತ್ತದೆ. ಆದರೆ ಇದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ದೊರೆಯುತ್ತದೆ. ಸೋದರ- ಸೋದರಿಯರ ನೆರವಿಗೆ ಹಣದ ವ್ಯವಸ್ಥೆ ಮಾಡಿಕೊಡುತ್ತೀರಿ. ಪ್ರೇಮಿಗಳಿಗೆ ಖುಷಿ ನೀಡುವಂಥ ಬೆಳವಣಿಗೆಗಳು ಇವೆ.






Today astrology in kannada today horoscope in kannada

ಪುಸ್ತಕದ ವಿದ್ಯೆಗಿಂತ ಅನುಭವ ಪಾಠವೇ ಕೈ ಹಿಡಿಯುತ್ತದೆ ಎಂಬ ನಿಮ್ಮ ನಂಬಿಕೆ ನಿಜವಾಗುತ್ತದೆ. ನಿಮ್ಮ ಬುದ್ಧಿವಂತಿಕೆಯಿಂದ ಹಲವು ಸವಾಲುಗಳನ್ನು ನಿವಾರಿಸಿಕೊಳ್ಳುತ್ತೀರಿ. ತಂದೆ- ತಾಯಿ ಆರೋಗ್ಯದ ಸಲುವಾಗಿ ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಮೇಲೆ ದೇವತಾನುಗ್ರಹ ಇರಲಿದೆ.







Today astrology in kannada today horoscope in kannada

ನನಗೆ ಎಲ್ಲವೂ ತಿಳಿದಿದೆ, ಯಾರ ಮಾತು ಕೂಡ ಕೇಳುವ ಅಗತ್ಯ ಇಲ್ಲ ಎಂಬ ಧೋರಣೆಯನ್ನು ಬಿಡಬೇಕು. ಇಲ್ಲದಿದ್ದಲ್ಲಿ ಮಾನಸಿಕ ನೆಮ್ಮದಿ ಹಾಳಾಗಲಿದೆ. ಈ ಹಿಂದೆ ಬುದ್ಧಿವಂತಿಕೆಯಿಂದ ಉಳಿಸಿಕೊಂಡ ಉಳಿತಾಯ ಹಣ ಈಗ ಉಪಯೋಗಕ್ಕೆ ಬರಲಿದೆ. ಸಂಗಾತಿ- ಮಕ್ಕಳು ನಿಮ್ಮ ಮಾತಿಗೆ ವಿರೋಧ ವ್ಯಕ್ತಪಡಿಸಲಿದ್ದಾರೆ.



Today astrology in kannada today horoscope in kannada

ಧಾರ್ಮಿಕ ಚಟುವಟಿಕೆಗಳು, ಅಧ್ಯಾತ್ಮ ಚಿಂತನೆಗೆ ಹೆಚ್ಚು ಸಮಯ ಮೀಸಲಿಡುತ್ತೀರಿ. ಮನರಂಜನೆಗಾಗೆ ಹಣ ಖರ್ಚು ಮಾಡಲಿದ್ದೀರಿ. ರುಚಿಕಟ್ಟಾದ ಊಟ- ತಿಂಡಿ ಸವಿಯುವ ಯೋಗ ಇದೆ. ಸಣ್ಣ- ಪುಟ್ಟ ವಿಚಾರಗಳಿಗೆ ಸೋದರ ಸಂಬಂಧಿಗಳ ಜತೆ ಭಿನ್ನಾಭಿಪ್ರಾಯ ಮೂಡಬಹುದು. ಆದರೆ ಅದನ್ನು ನೀವು ಬಗೆಹರಿಸಿಕೊಳ್ಳುತ್ತೀರಿ.






Today astrology in kannada today horoscope in kannada

ಪರಿಸರಪ್ರೇಮಿಗಳು, ಸಾಮಾಜಿಕ ಕಾರ್ಯಕರ್ತರು, ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಕಲಾವಿದರಿಗೆ, ಬರಹಗಾರರಿಗೆ ಆದಾಯಕ್ಕೆ ಹೊಸ ಮೂಲಗಳು ಗೋಚರಿಸಲಿವೆ. ವಾಹನ ಸಂಚಾರದ ವೇಳೆ ಎಚ್ಚರಿಕೆಯಿಂದ ಇರಬೇಕು.




ಕೃಪೆ: kannada.oneindia.com

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement