ಧಾರವಾಡ: Covid - 19 ಪರಿಣಾಮವಾಗಿ ಲಾಕ್‍ಡೌನ್ ಶುರುವಾದಗಿನಿಂದ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಹಿತದೃಷ್ಟಿಯಿಂದ ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಅಪರೂಪದ ಪೊಲೀಸ್ ಪೇದೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿಯನ್ನು ತಲುಪಿಸಲು 450 ಕಿಲೋಮೀಟರ್ ನಷ್ಟು ದೂರ ಆಕ್ಟಿವಾ ಬೈಕ್ ಮೇಲೆ ಬರುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.
ಕುಮಾರಸ್ವಾಮಿ ಎಂಬ ಹೆಸರಿನ ಪೊಲೀಸ್ ಪೇದೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಔಷಧಿಯನ್ನು ತಲುಪಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಇವರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಪಬ್ಲಿಕ್ ಟಿವಿಯಲ್ಲಿ ಬರುವ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮದಲ್ಲಿ ಧಾರವಾಡದ ಮಣಿಕಂಠನಗರದ ಉಮೇಶ್ ಕೋಟಿ ಎಂಬವರು ಎಂಬುವವರು ಲಾಕ್ಡೌನ್ ಪರಿಣಾಮವಾಗಿ ತಮಗೆ ಕ್ಯಾನ್ಸರ್ ರೋಗದ ಔಷಧಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಈ ಔಷಧಿಯು ಕೇವಲ ಬೆಂಗಳೂರಿನಲ್ಲಿ ಮಾತ್ರ ಸಿಗುತ್ತದೆ ಎಂದು ಉಮೇಶ್ ಹೇಳಿದ್ದರು ಆದ್ದರಿಂದ ಕುಮಾರಸ್ವಾಮಿಯವರು ಬೆಂಗಳೂರಿನಿಂದ 450 ಕಿಲೋ ಮೀಟರ್ ದೂರ ಕ್ರಮಿಸಿ ಉಮೇಶ್ ಕೋಟಿಗೆ ಅವರಿಗೆ ಆ ಔಷಧಿಯನ್ನು ಮುಟ್ಟಿಸಿದ್ದಾರೆ.
ಬೆಂಗಳೂರಿನಿಂದ ತಮಗಾಗಿ ಬಂದು ಔಷಧಿಯನ್ನು ತಂದುಕೊಟ್ಟ ಕುಮಾರಸ್ವಾಮಿ ಪೊಲೀಸ್ ಪೇದೆಗೆ ಉಮೇಶ್ ಅವರ ಮನೆಯವರೆಲ್ಲರೂ ಹೃತ್ಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಿ ಬಿಳ್ಕೊಟ್ಟರು.