ಇಂದಿನ ಭವಿಷ್ಯ ಏಪ್ರಿಲ್ 13, 2020

Todays horoscope in kannada Todays astrology in kannada





Today astrology in kannada today horoscope in kannada


ಇತರರ ಸುಖ- ಸಂತೋಷ, ಶ್ರೀಮಂತಿಕೆ ಕಂಡು ಕರುಬದಿರಿ. ಬೇರೆಯವರ ಶ್ರಮ, ದುಡಿಮೆ ಬಗ್ಗೆ ಹಗುರವಾಗಿ ಮಾತನಾಡದಿರಿ. ಈ ಸಲಹೆಗಳನ್ನು ಮೀರಿ ನಡೆದುಕೊಂಡರೆ ಅವಮಾನದ ಪಾಲಾಗುತ್ತೀರಿ. ಸಾಲದ ವ್ಯವಹಾರಗಳಿಗೆ ಈ ದಿನ ಕೈ ಹಾಕಬೇಡಿ. ಈ ಹಿಂದಿನ ಅನುಭವಗಳಿಂದ ಕಲಿತ ಪಾಠವನ್ನು ನೆನಪಿಸಿಕೊಳ್ಳಿ.



Today astrology in kannada today horoscope in kannada

ನಿಮಗೆ ವಾಪಸ್ ಬರಬೇಕಾದ ಸಾಲದ ಮೊತ್ತ ಇದ್ದಲ್ಲಿ ಪ್ರಯತ್ನ ಪಡಿ. ಸಂಗಾತಿ, ಮಕ್ಕಳಿಂದ ಸಂತೋಷ ಪಡುವ ಯೋಗ ಇದೆ. ಸರ್ಕಾರಿ ಯೋಜನೆಗಳ ಟೆಂಡರ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಿರುವವರಿಗೆ ಹಿನ್ನಡೆ ಇದೆ. ಅಂತರಂಗದ ಸಂಗತಿಗಳನ್ನು ಯಾರ ಜತೆಗೂ ಹಂಚಿಕೊಳ್ಳದಿರುವುದು ಉತ್ತಮ.




Today astrology in kannada today horoscope in kannada

ವಿಚಿತ್ರ ಬೆಳವಣಿಗೆಗಳು ನಿಮ್ಮನ್ನು ಚಿಂತೆಗೆ ಗುರಿ ಮಾಡುತ್ತವೆ. ಆದಾಯಕ್ಕೆ ಹೊಸ ಮೂಲಗಳು ಗೋಚರಿಸುತ್ತವೆ. ಈಗಾಗಲೇ ಮುಂದಿಟ್ಟಿರುವ ಯೋಜನೆಗಳ ಕುರಿತು ಕೆಲವು ಮಾರ್ಪಾಟುಗಳನ್ನು ಮಾಡಿಕೊಳ್ಳುವಂತೆ ಸೂಚನೆ ಬರುತ್ತದೆ. ಯಾವುದನ್ನು ನೀವು ನೇರವಂತಿಕೆ ಅಂದುಕೊಂಡಿದ್ದೀರೋ ಅದನ್ನು ಇತರರು ಅಹಂಕಾರ ಎನ್ನುವ ಅಪಾಯ ಇದೆ.




Today astrology in kannada today horoscope in kannada

ವಿವಿಧ ಮೂಲಗಳಿಂದ ಹಣಕಾಸು ಹರಿದು ಬರುವ ಸಾಧ್ಯತೆ ಇದೆ. ಉದ್ಯೋಗ ವಿಚಾರವಾಗಿ ಮಹತ್ತರವಾದ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಈ ಹಿಂದೆ ನೀವು ಪಟ್ಟಿದ್ದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ವ್ಯಕ್ತಿ ಪರಿಚಯ ಆಗುವುದರ ಮೂಲಕ ಬೆಳವಣಿಗೆಯ ನಾನಾ ಸಾಧ್ಯತೆಗಳು ತೆರೆದುಕೊಳ್ಳುತ್ತವೆ.






Today astrology in kannada today horoscope in kannada

ವೃತ್ತಿನಿರತರು, ವ್ಯಾಪಾರಿಗಳು- ಉದ್ಯಮಿಗಳಿಗೆ ಬಿಡುವಿಲ್ಲದಷ್ಟು ಕೆಲಸಗಳು ಮೇಲಿಂದ ಮೇಲೆ ಬರುತ್ತವೆ. ಆತ್ಮವ್ವಿಶ್ವಾಸ ಹೆಚ್ಚಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸುವವರು ಖರ್ಚಿನ ಮೇಲೆ ಹೆಚ್ಚಿನ ನಿಗಾ ಇಡಬೇಕು. ಅಗತ್ಯ ಇಲ್ಲದ ವಸ್ತುಗಳನ್ನು 'ಇರಲಿ ಬಿಡು' ಎಂಬ ಧೋರಣೆಯಿಂದ ಖರೀದಿಸಬೇಡಿ.





Today astrology in kannada today horoscope in kannada

ಸಾಲ ನೀಡುವ ಲೇವಾದೇವಿ ವ್ಯವಹಾರ ಮಾಡುತ್ತಿರುವವರಿಗೆ ಬಹಳ ಒತ್ತಡದ ಸನ್ನಿವೇಶ ಎದುರಾಗುತ್ತದೆ. ಆಪ್ತರ ಜತೆಗೆ ಭಿನ್ನಾಭಿಪ್ರಾಯ, ಮನಸ್ತಾಪ ಸೃಷ್ಟಿಯಾಗಬಹುದು. ಇದೇ ಸಂದರ್ಭವನ್ನು ಬಳಸಿಕೊಂಡು, ನಿಮ್ಮ ಹಿತಶತ್ರುಗಳು ಇನ್ನಷ್ಟು ಚಾಡಿ ಹೇಳಿ, ಸಂಬಂಧ ಹಾಳು ಮಾಡುವ ಸಾಧ್ಯತೆಗಳಿವೆ.






Today astrology in kannada today horoscope in kannada

ಎಲ್ಲದರಲ್ಲೂ ವ್ಯವಹಾರ- ಲಾಭವನ್ನೇ ನೋಡಬೇಕು ಅಂದರೆ ಅದು ಮನುಷ್ಯತ್ವ ಅನಿಸಿಕೊಳ್ಳುವುದಿಲ್ಲ. ನಿಮ್ಮ ನೆರವು ಕೇಳಿಕೊಂಡು ಬರುವವರಿಗೆ ಕೈಲಾದ ಸಹಾಯ ಮಾಡಿ. ಇತರರ ಕಷ್ಟದ ಸ್ಥಿತಿಯನ್ನು ಕಂಡು, ಹಿಯಾಳಿಸುವುದೋ- ಮೂದಲಿಸುವುದೋ ಮಾಡಬೇಡಿ. ನೀವು ತಪ್ಪಿಸಿಕೊಳ್ಳುವ ಸಲುವಾಗಿ ಇತರರನ್ನು ಸಿಲುಕಿಸುವಂಥ ಸುಳ್ಳು ಹೇಳಬೇಡಿ.




Today astrology in kannada today horoscope in kannada

ಯಾರನ್ನೋ ಮೆಚ್ಚಿಸುವ ಪ್ರಯತ್ನದಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಇರುವವರು ಪೋಸ್ಟ್ ಗಳು ಮತ್ತು ಕಾಮೆಂಟ್ ಬಗ್ಗೆ ಎಚ್ಚರವಾಗಿರಿ. ಇನ್ನು ಸ್ವಲ್ಪ ಎ‌ಚ್ಚರ ತಪ್ಪಿದರೂ ಪೊಲೀಸ್ ಠಾಣೆ ಮೆಟ್ಟಿಲೇರುವ ಸನ್ನಿವೇಶ ಸೃಷ್ಟಿಯಾಗುತ್ತದೆ.






Today astrology in kannada today horoscope in kannada

ಉಪನ್ಯಾಸಕರು, ಶಿಕ್ಷಕ ವೃತ್ತಿಯಲ್ಲಿ ಇರುವವರು ಯಾವುದೇ ತೀರ್ಮಾನದ ಸಾಧಕ- ಬಾಧಕಗಳ ಬಗ್ಗೆ ಸರಿಯಾದ ಆಲೋಚನೆ ಮಾಡಬೇಕು. ಉದ್ಯೋಗ ಬದಲಾವಣೆಯೋ ಅಥವಾ ಬಿಡುವುದೋ ಈಗ ಮಾಡುವುದು ಬೇಡ. ಯಾರ ಮೇಲೂ ಹಠ- ದ್ವೇಷ ಸಾಧಿಸಲು ಹೋಗಬೇಡಿ. ಇದರಿಂದ ನಿಮಗೇ ನಷ್ಟ.







Today astrology in kannada today horoscope in kannada

ಧಾರ್ಮಿಕ ಮನೋಭಾವ ನಿಮ್ಮದಾಗಿರುತ್ತದೆ. ಅಗತ್ಯ ಇರುವವರಿಗೆ ಊಟ- ತಿಂಡಿ, ಬಟ್ಟೆ, ವಾಸ್ತವ್ಯ ಹೀಗೆ ನಿಮ್ಮ ಕೈಲಿ ಸಾಧ್ಯವಾದ ಸಣ್ಣ ಸಹಾಯವಾದರೂ ಮಾಡಲಿದ್ದೀರಿ. ಮಾನಸಿಕವಾಗಿ ಒಂದು ಬಗೆಯ ನೆಮ್ಮದಿಯಿಂದ ಇರುವ ದಿನ ಇದು. ಉಳಿತಾಯಕ್ಕಾಗಿ ಕೂಡಿಟ್ಟಿದ್ದ ಹಣ ಬೇರೆ ಉದ್ದೇಶಕ್ಕೆ ಖರ್ಚಾಗುತ್ತದೆ.



Today astrology in kannada today horoscope in kannada

ಇನ್ನು ಸಾಧ್ಯವಿಲ್ಲ ಎಂದು ಅಂದುಕೊಂಡಿದ್ದ ಕೆಲವು ಕೆಲಸ ಮತ್ತೆ ಆಗುವಂಥ ಸಾಧ್ಯತೆಗಳು ಗೋಚರವಾಗುತ್ತವೆ. ಮನೆಯಲ್ಲಿ ವಿಪರೀತ ಕೆಲಸ ಬೀಳುತ್ತದೆ. ಉದ್ಯೋಗದಲ್ಲಿ ನಿರಾಸಕ್ತಿ ಹಾಗೂ ಸಹೋದ್ಯೋಗಿಗಳಿಂದ ಕಿರಿಕಿರಿ ಅನುಭವಕ್ಕೆ ಬರುತ್ತದೆ. ಸಾಧ್ಯವಾದಷ್ಟು ಈ ದಿನ ಮೌನವಾಗಿರಿ.






Today astrology in kannada today horoscope in kannada

ಕ್ರೆಡಿಟ್ ಕಾರ್ಡ್, ವಿದ್ಯುತ್ ಸೇರಿದಂತೆ ಯಾವುದೇ ಬಿಲ್ ಗಳು ಬಾಕಿಯಿದ್ದಲ್ಲಿ ಮತ್ತೊಮ್ಮೆ ಪರೀಕ್ಷಿಸಿ, ಪಾವತಿಸುವುದು ಉತ್ತಮ. ಸಂಗಾತಿ, ಮಕ್ಕಳ ಜತೆಗೆ ಅತ್ಯುತ್ತಮವಾದ ಸಮಯ ಕಳೆಯಕುದೆ. ಕ್ರೀಡೆ ಸೇರಿದಂತೆ ವಿವಿಧ ಸಾಧನೆ ಮಾಡುವುದಕ್ಕೆ ಸೂಕ್ತವಾದ ವಾತಾವರಣ ಸೃಷ್ಟಿಯಾಗುತ್ತದೆ.




ಕೃಪೆ: kannada.oneindia.com

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement