ಇಂದಿನ ಭವಿಷ್ಯ ಏಪ್ರಿಲ್ 11, 2020

Todays horoscope in kannada Todays astrology in kannada

Today astrology in kannada today horoscope in kannada

ನೀವಾಗಿಯೇ ಕೆಲವು ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತೀರಿ. ಸಿಟ್ಟಿನ ಕಾರಣಕ್ಕೆ ಹಣಕಾಸಿನ ನಷ್ಟ ಅನುಭವಿಸುತ್ತೀರಿ. ಆದ್ದರಿಂದ ತಾಳ್ಮೆಯಿಂದ ಇರುವುದನ್ನು ರೂಢಿಸಿಕೊಳ್ಳಿ. ಇನ್ಯಾರನ್ನೋ ಸಮಸ್ಯೆಯಿಂದ ಪಾರು ಮಾಡುವ ಪ್ರಯತ್ನದಲ್ಲಿ ನೀವು ಆರ್ಥಿಕ ಸಮಸ್ಯೆಗೆ ಸಿಲುಕಬಹುದು, ಎಚ್ಚರ ಇರಲಿ.

Today astrology in kannada today horoscope in kannada

ಮೊದಲಿನಂತೆ ಎಲ್ಲವೂ ಇಲ್ಲ ಎಂಬ ಅರಿವು ನಿಮಗಾಗುತ್ತದೆ. ನೀವು ಹೇಳಿದ್ದನ್ನು ಕೇಳುತ್ತಿದ್ದವರು ಹಲವು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ. ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಮಾತು ಕೇಳಬೇಕಾಗುತ್ತದೆ. ಸಾಧ್ಯವಾದಷ್ಟು ಪ್ರಮುಖವಾದ ಕೆಲಸಗಳನ್ನು ಈ ದಿನ ಮಾಡಬೇಡಿ.

Today astrology in kannada today horoscope in kannada

ದೀರ್ಘಾವಧಿ ಯೋಜನೆಗಳನ್ನು ಸ್ನೇಹಿತರು, ಸಂಬಂಧಿಗಳ ಜತೆಗೆ ಹಂಚಿಕೊಳ್ಳುತ್ತೀರಿ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಒಂದು ಅವಕಾಶ ಗೋಚರಿಸದಂತಾಗುತ್ತದೆ. ಆದರೆ ಬಹಳ ಅಳೆದು- ತೂಗಿ ನಿರ್ಧಾರ ಮಾಡಬೇಕಾಗುತ್ತದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಚಿಂತೆ ಮಾಡುವಂತಾಗುತ್ತದೆ.

Today astrology in kannada today horoscope in kannada

ನಿಮ್ಮಂತೆಯೇ ಇತರರು ಎಂಬುದನ್ನು ಆಲೋಚಿಸಿ. ಬೇರೆಯವರ ಸಣ್ಣ- ಪುಟ್ಟ ತಪ್ಪುಗಳನ್ನು ಅಲ್ಲಿಗೆ ಮರೆಯುವುದನ್ನು ರೂಢಿ ಮಾಡಿಕೊಳ್ಳಿ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚು ಚಿಂತೆಯಾಗುತ್ತದೆ. ಮುಂಜಾಗ್ರತೆಯಾಗಿ ಹಣ ಕೂಡಿಟ್ಟುಕೊಳ್ಳುವ ಅಗತ್ಯ ಈ ಹಿಂದೆಂದಿಗಿಂತಲೂ ಹೆಚ್ಚು ಕಂಡುಬರುತ್ತದೆ.

Today astrology in kannada today horoscope in kannada

ಸ್ವಾರ್ಥಿಗಳು ಯಾರು ಹಾಗೂ ನಿಮ್ಮ ಪರವಾಗಿ ಇರುವವರು ಯಾರು ಎಂಬುದನ್ನು ತಿಳಿದುಕೊಳ್ಳಿ. ಹೊಗಳಿ ನಿಮ್ಮಿಂದ ಸಹಾಯ ಪಡೆದು, ಆ ನಂತರ ಮರೆಯುವ ಜನರು ಇದ್ದಾರೆ ಎಚ್ಚರ. ದೇವತಾರಾಧನೆ, ಅಧ್ಯಾತ್ಮ ಚಿಂತನೆ ಕಡೆಗೆ ಮನಸ್ಸು ಆಕರ್ಷಿತವಾಗುತ್ತದೆ. ವಿಶ್ರಾಂತಿ ಪಡೆಯುವ ದಿನ ಇದಾಗಿರುತ್ತದೆ.

Today astrology in kannada today horoscope in kannada

ಆಪ್ತರೊಬ್ಬರ ಹಣಕಾಸು ಅಗತ್ಯಕ್ಕೆ ನೀವು ಸ್ಪಂದಿಸಬೇಕಾಗುತ್ತದೆ. ವೃತ್ತಿಪ್ರರರಿಗೆ ಹಲವು ಅವಕಾಶಗಳು ಗೋಚರಿಸುತ್ತವೆ. ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈಗ ಫಲ ಸಿಗುತ್ತದೆ. ಕೋರ್ಟ್- ಕಚೇರಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಮುಖ ದಾಖಲಾತಿಗಳು ನಿಮ್ಮ ಪರವಾಗಿ ಲಭ್ಯವಾಗಲಿವೆ.

Today astrology in kannada today horoscope in kannada

ಎರಡೆರಡು ಆಲೋಚನೆ, ಸವಾಲು, ಆಯ್ಕೆಗಳ ಮಧ್ಯೆ ಸಿಲುಕಿಕೊಳ್ಳುತ್ತೀರಿ. ಸಲಹೆ ಪಡೆಯಲು ಯತ್ನಿಸಿದರೆ ಅದು ಇನ್ನಷ್ಟು ಗೊಂದಲವನ್ನೇ ಸೃಷ್ಟಿಸಲಿದೆ. ಸಂಗಾತಿ- ಮಕ್ಕಳ ಇನ್ಷೂರೆನ್ಸ್, ಹೂಡಿಕೆಗಾಗಿ ಹೆಚ್ಚಿನ ಖರ್ಚಾಗಲಿದೆ. ವಾಹನ ಚಾಲನೆ ವೇಳೆ ತುಂಬ ಎಚ್ಚರಿಕೆಯನ್ನು ವಹಿಸಬೇಕು.

Today astrology in kannada today horoscope in kannada

ಮತ್ತೊಬ್ಬರಿಗೆ ಸಿಗಬೇಕಾದ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಂಬಂಧಿಗಳ ಮಧ್ಯೆ ಏಕಾಭಿಪ್ರಾಯ ರೂಪಿಸಲು ಶ್ರಮಿಸುತ್ತೀರಿ. ಧಾರ್ಮಿಕ ಕಾರ್ಯಗಳಿಗಾಗಿ ಹಣ ನೀಡುವ ಸಾಧ್ಯತೆ ಇದೆ. ದಾನ- ಧರ್ಮಾದಿ ಕಾರ್ಯಗಳಿಗೆ ಹೆಚ್ಚಿನ ಸಮಯ ಹೋಗಲಿದೆ.

Today astrology in kannada today horoscope in kannada

ಉದ್ಯೋಗ- ವೃತ್ತಿಯ ಬಗ್ಗೆ ಸಲಹೆ, ಸೂಚನೆಗಳು ಬಂದರೆ ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಎಲ್ಲಿ ತಪ್ಪಾಗಿದೆ, ಏನು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಆತ್ಮವಿಮರ್ಶೆಗೆ ಇದು ಸಕಾಲ. ಯಾರನ್ನಾದರೂ ನಂಬಲೇ ಬೇಕಿದೆ. ಎಲ್ಲವನ್ನೂ ಒಬ್ಬರೇ ಮಾಡಲು ಆಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.

Today astrology in kannada today horoscope in kannada

ಮಾನಸಿಕವಾಗಿ ನೆಮ್ಮದಿಯಿಂದ ಕಳೆಯುವ ದಿನ ಇದು. ಭವಿಷ್ಯದ ಬಗ್ಗೆ ಇರುವ ಆತಂಕಗಳು ದೂರವಾಗಲಿವೆ. ಮನೆಗೆ ಅಗತ್ಯ ಇರುವ ವಸ್ತುಗಳಿಗಾಗಿ ಹೆಚ್ಚಿನ ಖರ್ಚಾಗಲಿದೆ. ನಿರೀಕ್ಷಿತ ಆದಾಯದಲ್ಲಿ ಏನೂ ಸಮಸ್ಯೆ ಆಗುವುದಿಲ್ಲ. ಆದರೆ ಹೊಸ ಆದಾಯ ಬರುವುದು ಕಷ್ಟವಾಗುತ್ತದೆ.

Today astrology in kannada today horoscope in kannada

ಉದ್ಯೋಗ ವಿಚಾರವಾಗಿ ಆತಂಕದ ಕ್ಷಣಗಳನ್ನು ಎದುರಿಸುತ್ತೀರಿ. ಅಂದುಕೊಂಡಂತೆ ಏನೂ ಆಗುವುದಿಲ್ಲ. ಭವಿಷ್ಯದ ಕುರಿತಾದ ಆತಂಕಗಳಿದ್ದಲ್ಲಿ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಯೋಜನೆ ರೂಪಿಸುತ್ತೀರಿ. ಮೇಲಧಿಕಾರಿಗಳ ಜತೆ ವಾಗ್ವಾದ ನಡೆಸದಿರಿ. ಆರ್ಥಿಕ ವಿಚಾರಗಳಲ್ಲಿ ಅನಿಶ್ಚಿತತೆ ಇರುತ್ತದೆ.

Today astrology in kannada today horoscope in kannada

ನಿಮ್ಮ ಪ್ರಭಾವ ಬಳಸಿ ಇತರರಿಗೆ ನೆರವಾಗುತ್ತೀರಿ. ಹಣಕಾಸಿನ ನೆರವು ಸಹ ನೀಡುವ ಸಾಧ್ಯತೆ ಇದೆ. ದೈವಾನುಗ್ರಹ ನಿಮ್ಮ ಮೇಲೆ ಇರುತ್ತದೆ. ಆಹಾರ ಪಥ್ಯದ ಕಡೆ ಹೆಚ್ಚಿನ ಗಮನ ಇರಲಿ. ಹೊಸಬರ ಜತೆಗೆ ವ್ಯವಹಾರ ನಡೆಸುವಾಗ ಹೆಚ್ಚಿನ ಮೊತ್ತದ ಹೂಡಿಕೆ ಬೇಡ. ರುಚಿಕಟ್ಟಾದ ಊಟ ಸವಿಯುವ ಯೋಗ ಇದೆ.

ಕೃಪೆ: kannada.oneindia.com

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement