ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವವರಿಗೆ ಒತ್ತಡದ ಸನ್ನಿವೇಶ ಇರುತ್ತದೆ. ವ್ಯಾಪಾರ- ವ್ಯವಹಾರ ಮಾಡುವವರಿಗೆ ಆಸ್ತಿ ಮಾರುವಂಥ ಆಲೋಚನೆ ಬರುತ್ತದೆ. ಅಥವಾ ಆ ರೀತಿಯ ಅನಿವಾರ್ಯ ಸೃಷ್ಟಿ ಆಗುತ್ತದೆ. ಆಪ್ತರ ಜತೆಗಿನ ಮಾತುಕತೆ ಮೂಲಕ ಅಂತಿಮವಾದ ನಿರ್ಧಾರ ಕೈಗೊಳ್ಳಲಿದ್ದೀರಿ.
ನಿರೀಕ್ಷಿಸಿದಷ್ಟು ಆದಾಯ ಬಾರದೆ ಚಿಂತೆಗೆ ಒಳಗಾಗುತ್ತೀರಿ. ಈ ಹಿಂದೆ ಯಾರ ಬಗ್ಗೆ ಲಘುವಾಗಿ ಮಾತನಾಡಿದ್ದರೋ ಅಂಥವರಿಂದಲೇ ಸಹಾಯ ಪಡೆಯುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಿಪರೀತ ದೇಹಾಯಾಸ ಕಾಡಲಿದೆ. ಇನ್ನು ಸರ್ಕಾರಕ್ಕೆ ಸಂಬಂಧಿಸಿದ ಕೆಲಸ- ಕಾರ್ಯಗಳಲ್ಲಿ ಪ್ರಗತಿ ಕಾಣಲಿದ್ದೀರಿ.
ಈ ದಿನ ಸಮಯಪ್ರಜ್ಞೆ ಬಹಳ ಮುಖ್ಯವಾಗುತ್ತದೆ. ಎದುರಿನವರು ಆಡುವ ವ್ಯಂಗ್ಯದ ಮಾತುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಿ. ನಿಮ್ಮನ್ನು ಮುಂದೆ ಬಿಟ್ಟು, ಆ ನಂತರ ಅವಮಾನದ ಪಾಲು ಮಾಡುತ್ತಾರೆ, ಎಚ್ಚರ. ದೀರ್ಘಕಾಲದ ಯೋಜನೆಗಳಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದೀರಿ.
ಮಾತಿನ ಮೂಲಕ ಆಕರ್ಷಣೆಯ ಕೇಂದ್ರಬಿಂದುವಾಗಿ ಇರುತ್ತೀರಿ. ನೀಡಿದ ಮಾತನ್ನು ಪೂರೈಸುವುದು ಕಷ್ಟವಾಗುತ್ತದೆ. ದೇವತಾರಾಧನೆ, ಧಾರ್ಮಿಕ ಚಿಂತನೆಯಿಂದ ಮನಸ್ಸಿಗೆ ನೆಮ್ಮದಿ ಇದೆ. ಭಾರೀ ವಾಹನಗಳ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಬೆಲೆಬಾಳುವ ವಸ್ತುಗಳನ್ನು ನಿರ್ಲಕ್ಷ್ಯ ಮಾಡಬೇಡಿ.
ಏನೋ ಒಂದು ಬಗೆಯ ಗೊಂದಲ ಕಾಡುತ್ತದೆ. ಧರ್ಮ- ಅಧರ್ಮ, ಪಾಪ- ಪುಣ್ಯಗಳ ಆಲೋಚನೆ ಬರುತ್ತದೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಅಜೀರ್ಣದಂಥ ಆರೋಗ್ಯ ಸಮಸ್ಯೆಗಳು ಕಾಡಬಹುದು. ಮುಖ್ಯವಾದ ಆರ್ಥಿಕ ವಿಷಯದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ.
ಸಾಲಗಾರರ ಒತ್ತಡ ಹೆಚ್ಚಾಗಬಹುದು. ಮಕ್ಕಳ ಸಲುವಾಗಿ ಬಹಳ ಖರ್ಚಾಗಲಿದೆ. ದೂರ ಪ್ರದೇಶಗಳಲ್ಲಿ ವಾಸ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಪಾರ್ಟನರ್ ಷಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಕೆಲಸ- ಕಾರ್ಯಗಳ ವಿಳಂಬ ತಪ್ಪಿಸಲು ಈಶ್ವರನ ಧ್ಯಾನ ಮಾಡಿ.
ಈ ದಿನವಿಡೀ ಸಕಾರಾತ್ಮಕವಾದ ಆಲೋಚನೆ ಇರುತ್ತದೆ. ಉತ್ಸಾಹ, ಧೈರ್ಯದಿಂದ ಎಲ್ಲ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಸ್ನೇಹಿತರು ಸಹಾಯ ಕೇಳಿಕೊಂಡು ಬರಬಹುದು. ಸಾಲ ತೀರಿಸಲು ಹೊಸ ದಾರಿ ಗೋಚರಿಸಲಿದೆ. ವಿನಾಕಾರಣ ಯಾರ ಮೇಲೂ ಅನುಮಾನ ಪಡಬೇಡಿ. ಆ ನಂತರ ಪಶ್ಚಾತ್ತಾಪ ಪಡುವಂತೆ ಆಗುತ್ತದೆ.
ನಿಮ್ಮ ಅನುಭವದ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಲು ಯಶಸ್ವಿ ಆಗುತ್ತೀರಿ. ಸಂಗಾತಿ ಜತೆಗೆ ಮಾತಿಗೆ ಮಾತು ಬೆಳೆದು, ಜಗಳವಾಗುವ ಸಾಧ್ಯತೆ ಇದೆ. ಲೇವಾದೇವಿ ವ್ಯವಹಾರ ಮಾಡುತ್ತಿರುವವರಿಗೆ ಬಾಕಿ ಹಣ ಬರುವುದು ತಡವಾಗಿ, ಒತ್ತಡದ ಸನ್ನಿವೇಶ ಸೃಷ್ಟಿಯಾಗುತ್ತದೆ.
ಹಣಕಾಸಿನ ವಿಚಾರದಲ್ಲಿ ಆಪ್ತರ ಮೇಲೆ ಅನುಮಾನ ಪಡುವಂತಾಗುತ್ತದೆ. ದಯಾ- ದಾಕ್ಷಿಣ್ಯ ತೋರದೆ ಅಂಥವರಿಂದ ದೂರವಾಗುವ ಸಾಧ್ಯತೆ ಇರುತ್ತದೆ. ಖರ್ಚು ಉಳಿಸಲು ಹಾಕಿಕೊಂಡ ಯೋಜನೆಗಳು ಫಲ ನೀಡಲು ಶುರುವಾಗುತ್ತವೆ. ಈ ಸಂದರ್ಭದಲ್ಲಿ ಕುಟುಂಬಕ್ಕಾಗಿ ಹೆಚ್ಚಿನ ಸಮಯ ಮೀಸಲಿಡಲು ಆಗುವುದಿಲ್ಲ.
ವಾಹನ ಚಾಲನೆ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಉದ್ಯೋಗದಲ್ಲಿನ ಬೇಜವಾಬ್ದಾರಿ ವರ್ತನೆ ಎಂಬ ಕಾರಣಕ್ಕೆ ಶಿಕ್ಷೆ ಆಗಬಹುದು. ಆದ್ದರಿಂದ ಕೆಲಸದಲ್ಲಿ ಶ್ರದ್ಧೆ ವಹಿಸುವುದು ಉತ್ತಮ. ಆಲಸ್ಯವನ್ನು ಬಿಟ್ಟು, ಆಗಬೇಕಾದ ಕೆಲಸಗಳ ಕಡೆಗೆ ಹೆಚ್ಚಿನ ಗಮನ ನೀಡಿ.
ಯಾರನ್ನೂ ನಿರಾಸೆ ಮಾಡಬಾರದು ಎಂಬ ನಿಮ್ಮ ಧೋರಣೆಯಿಂದ ಎಲ್ಲರ ಮೆಚ್ಚುಗೆ ಪಡೆಯುವಿರಿ. ಸಹೋದ್ಯೋಗಿಗಳು, ಮೇಲಧಿಕಾರಿಗಳು ನಿಮ್ಮ ಬಗ್ಗೆ ಗೌರವದಿಂದ ನೋಡುವಂತಾಗುತ್ತದೆ. ಯೋಗ- ಧ್ಯಾನ ಕಲಿಸುವಂಥವರಿಗೆ ಆದಾಯದಲ್ಲಿ ಹೆಚ್ಚಳ ಅಥವಾ ಗೌರವ, ಮನ್ನಣೆ ಸಿಗಲಿದೆ.
ಸ್ವತಂತ್ರ ಆಲೋಚನೆ ಮೂಲಕ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿದುಕೊಳ್ಳುತ್ತೀರಿ. ಸಾಧನೆಯ ಕಡೆಗೆ ಹೆಜ್ಜೆಗಳನ್ನು ಇಡುತ್ತೀರಿ. ಶಿಕ್ಷಕರಿಗೆ, ಕಲಾವಿದರಿಗೆ, ರಾಜಕಾರಣಿಗಳಿಗೆ ದೊಡ್ಡ ಜವಾಬ್ದಾರಿ, ಹುದ್ದೆಗಳನ್ನು ವಹಿಸುವ ಸಾಧ್ಯತೆ ಇದ್ದು, ಅಥವಾ ಭವಿಷ್ಯದಲ್ಲಿ ದೊರೆಯುವ ಮುನ್ಸೂಚನೆಯಾದರೂ ಸಿಗುತ್ತದೆ.
Tags:
ದಿನ ಭವಿಷ್ಯ