ಇಂದಿನ ಭವಿಷ್ಯ ಮಾರ್ಚ್ 24, 2020

Todays horoscope in kannada Todays astrology in kannada





Today astrology in kannada today horoscope in kannada


ಶುಭ ಕಾರ್ಯಗಳನ್ನು ಮುಂದೂಡಬೇಕು ಎಂಬ ಅನಿವಾರ್ಯದಿಂದಾಗಿ ನಷ್ಟ ಅನುಭವಿಸುತ್ತೀರಿ. ಆರ್ಥಿಕ ಸ್ಥಿತಿ ಹದಗೆಡುತ್ತದೆ. ಕಾಲು- ಭುಜದ ನೋವು ಹೆಚ್ಚಾಗುತ್ತದೆ. ಔಷಧ ಅಥವಾ ವೈದ್ಯರನ್ನು ಬದಲಿಸುವ ಮುನ್ನ ಎಚ್ಚರಿಕೆಯಿಂದ ತೀರ್ಮಾನವನ್ನು ತೆಗೆದುಕೊಳ್ಳಿ. ಹೊಸಬರ ಜತೆಗೆ ರಹಸ್ಯ ವಿಚಾರವನ್ನು ಹಂಚಿಕೊಳ್ಳಬೇಡಿ.



Today astrology in kannada today horoscope in kannada

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎಂಬ ಮಾತು ಈ ದಿನ ಚೆನ್ನಾಗಿ ಅನ್ವಯ ಆಗುತ್ತದೆ. ಆಪ್ತರ ಜತೆಗಿನ ಮಾತುಕತೆ ವೇಳೆ ಅಳೆದು ತೂಗಿ ಮಾತನಾಡಿ. ದೀರ್ಘಾವಧಿ ಯೋಜನೆಗಳನ್ನು ಸ್ವಲ್ಪ ಕಾಲ ಮುಂದೂಡುವುದು ಉತ್ತಮ. ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣಿರಿ.




Today astrology in kannada today horoscope in kannada

ಸ್ವತಂತ್ರ ಚಿಂತನೆ ಮಾಡುವುದಕ್ಕೆ ಈಗಿನ ವ್ಯವಸ್ಥೆ ಅಡ್ಡಿ ಆಗುತ್ತಿದೆ ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತದೆ. ಈ ಮಧ್ಯೆ ಅಂದುಕೊಳ್ಳದ ರೀತಿಯಲ್ಲಿ ಧನಾಗಮ ಇದೆ. ನಿಮ್ಮ ದೂರದೃಷ್ಟಿ ಆಲೋಚನೆಯು ಕೈ ಹಿಡಿಯಲಿದೆ. ಮುಖ್ಯ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ಬುದ್ಧಿವಂತಿಕೆಯನ್ನು ಬಳಸುವ ಪರಿ ಇತರರ ಮೆಚ್ಚುಗೆಗೆ ಕಾರಣವಾಗುತ್ತದೆ.




Today astrology in kannada today horoscope in kannada

ವೃತ್ತಿ ನಿರತರಿಗೆ, ವ್ಯಾಪಾರಿಗಳು- ಉದ್ಯಮಿಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಲಾಭ ದೊರೆಯುವುದಿಲ್ಲ. ಪರ್ಯಾಯ ಆದಾಯ ಮಾರ್ಗಗಳನ್ನು ಹುಡುಕಿಕೊಳ್ಳುವ ಮೂಲಕ ಹಣದ ಕೊರತೆಯನ್ನು ಸರಿ ಪಡಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಹಿರಿಯರಿಗೆ ವಯೋ ಸಹಜ ಆರೋಗ್ಯ ಸಮಸ್ಯೆಗಳು ಕಾಡಬಹುದು. ಕಡ್ಡಾಯವಾಗಿ ವೈದ್ಯರನ್ನು ಭೇಟಿಯಾಗಿ.






Today astrology in kannada today horoscope in kannada

ನಿಮ್ಮಲ್ಲಿ ಅಹಂಕಾರವೊಂದು ಮೂಡುತ್ತದೆ. ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ನೀವು ಇರುವುದಿಲ್ಲ. ಈ ಮಧ್ಯೆ ನೀವು ಅಂದುಕೊಂಡಂತೆ ಹಲವು ಬೆಳವಣಿಗೆ ನಡೆಯುವುದರಿಂದ ಆತ್ಮವಿಶ್ವಾಸ ವಿಪರೀತ ಹೆಚ್ಚಾಗುತ್ತದೆ. ಆಪತ್ಕಾಲಕ್ಕಾಗಿ ಕೂಡಿಟ್ಟಿದ್ದ ಹಣವನ್ನು ಖರ್ಚು ಮಾಡಬೇಕಾದ ಸನ್ನಿವೇಶ ಎದುರಾಗುತ್ತದೆ.





Today astrology in kannada today horoscope in kannada

ಹೊಸ ಜನರ ಸಂಪರ್ಕ ದೊರೆತು, ಅವರಿಂದ ನಿಮ್ಮ ವೃತ್ತಿ- ವ್ಯಾಪಾರ, ವ್ಯವಹಾರಕ್ಕೆ ಅನುಕೂಲ ಆಗಲಿದೆ ಎಂಬ ನಂಬಿಕೆ ಮೂಡುತ್ತದೆ. ಹಳೆ ವಾಹನವನ್ನು ಮಾರಾಟಕ್ಕೆ ಇಟ್ಟವರಿಗೆ ಸೂಕ್ತ ಖರೀದಿದಾರರು ಬರುವ ಸಾಧ್ಯತೆ ಇದೆ. ನಿಮ್ಮ ಸಂದೇಹ ಪ್ರವೃತ್ತಿಯಿಂದ ಸಂಗಾತಿ, ಮಕ್ಕಳ ಜತೆಗೆ ಭಿನ್ನಾಭಿಪ್ರಾಯ ಉದ್ಭವಿಸುತ್ತದೆ.






Today astrology in kannada today horoscope in kannada

ಪ್ರಾಣಿ- ಪಕ್ಷಿಗಳ ಮೇಲೆ ದಯೆ ತೋರಿಸಿ, ಅವುಗಳ ಚಿಕಿತ್ಸೆಗಾಗಿ ಖರ್ಚು ಮಾಡುವ ಸಾಧ್ಯತೆ ಇದೆ. ದಾನ- ಧರ್ಮಾದಿ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಮೂಡಲಿದೆ. ರುಚಿಕಟ್ಟಾದ ಅಡುಗೆ ಸವಿಯುವ ಯೋಗ ಇದೆ. ಇತರರಿಗೆ ನೆರವು ನೀಡುವುದಾಗಿ ಮಾತು ಕೊಡುವ ಮುಂಚೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಅವಲೋಕಿಸಿ.




Today astrology in kannada today horoscope in kannada

ಕೆಲಸದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಕಣ್ತಪ್ಪಿನಿಂದ ದೊಡ್ಡ ಅನಾಹುತ ಆಗಬಹುದು. ಇದರಿಂದ ನಿಮ್ಮ ವರ್ಚಸ್ಸು, ಸಾಮರ್ಥ್ಯದ ಬಗ್ಗೆಯೇ ಅನುಮಾನ ಮೂಡುವಂಥ ಸನ್ನಿವೇಶ ಸೃಷ್ಟಿಯಾಗಬಹುದು. ಇಲ್ಲ ಅಥವಾ ಹೌದು ಏನನ್ನೇ ಹೇಳುವ ಮುನ್ನ ದಾಖಲೆ- ಪತ್ರ ಮತ್ತು ಸಾಧ್ಯತೆಯನ್ನು ಪರಿಶೀಲಿಸಿಯೇ ತಿಳಿಸಿ.






Today astrology in kannada today horoscope in kannada

ಇತರರು ನೀಡುವ ವಸ್ತುಗಳು, ಹೇಳುವ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ದ್ರವಾಹಾರ ಸೇವನೆ ಮಾಡುವಾಗ ಶುದ್ಧತೆ ಮತ್ತು ಅದನ್ನು ಸಿದ್ಧಪಡಿಸಿರುವ ಬಗೆಯನ್ನು ಅರಿಯಿರಿ. ಕೆಮ್ಮು, ಕಫ, ಶೀತದಂಥ ಆರೋಗ್ಯ ಸಮಸ್ಯೆಗೆ ತುತ್ತಾಗಬಹುದು. ಅಪರಿಚಿತರ ಜತೆಗೆ ಸಲುಗೆ ಬೇಡ.







Today astrology in kannada today horoscope in kannada

ಸಾಲ ಮಾಡಿಯಾದರೂ ಹೂಡಿಕೆ ಮಾಡಬೇಕು ಎಂಬ ಧೋರಣೆ ಒಳ್ಳೆಯದಲ್ಲ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಿ. ಆಸ್ತಿ- ಭೂಮಿ ವ್ಯವಹಾರದಲ್ಲಿ ಈ ಹಿಂದೆ ನಿಮಗೆ ಬರಬೇಕಿದ್ದ ಬಾಕಿ ಇದ್ದಲ್ಲಿ ಈ ದಿನ ಪ್ರಯತ್ನಿಸಿ. ಕನಿಷ್ಠ ಪಕ್ಷ ಯಾವಾಗ ವಾಪಸ್ ಬರುತ್ತದೆ ಎಂದು ತಿಳಿಯುತ್ತದೆ.



Today astrology in kannada today horoscope in kannada

ಕಡಿಮೆ ಖರ್ಚಿನಲ್ಲಿ ಹಲವು ಕೆಲಸಗಳನ್ನು ಮುಗಿಸಲು ನಿಮ್ಮಿಂದ ಸಾಧ್ಯವಾಗುತ್ತದೆ. ನಿಮ್ಮ ಉಳಿತಾಯ ಮನೋಭಾವಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತವೆ. ಮಕ್ಕಳ ಪ್ರಗತಿಯಿಂದಾಗಿ ಹೆಮ್ಮೆ ಮೂಡುತ್ತದೆ. ಸಂಗಾತಿ ಜತೆಗೆ ಸುಮಧುರವಾದ ಕ್ಷಣಗಳನ್ನು ಕಳೆಯುವ ಯೋಗ ಇದೆ.






Today astrology in kannada today horoscope in kannada

ಕಲಾವಿದರು, ರಾಜಕಾರಣಿಗಳು ತೆಗೆದುಕೊಳ್ಳುವ ನಿರ್ಧಾರದಿಂದ ವರ್ಚದ್ದು ಹೆಚ್ಚಾಗುತ್ತದೆ. ರಾಜೀ- ಸಂಧಾನದ ನೇತೃತ್ವ ವಹಿಸಿಕೊಂಡು ದೊಡ್ಡ ಸಮಸ್ಯೆಗಳನ್ನು ಬಗೆಹರಿಸುತ್ತೀರಿ. ಬಹಳ ಸಮಯದಿಂದ ನಿರೀಕ್ಷೆ ಮಾಡುತ್ತಿದ್ದ ಹುದ್ದೆ ಅಥವಾ ಜವಾಬ್ದಾರಿಗೆ ನಿಮ್ಮ ಹೆಸರನ್ನು ಸೂಚಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement