ಬೆಂಗಳೂರು, ಮಾರ್ಚ್ 24: ಮಾರಣಾಂತಿಕ ಕೊರೊನಾ ವೈರಸ್ ನ ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹಬ್ಬುತ್ತದೆ ಎಂದು ಗೊತ್ತಿದ್ದರೂ ಕೂಡ ಜನರ ಗುಂಪು ಸೇರುವುದನ್ನು ಮಾತ್ರ ಬಿಟ್ಟಿಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ನಿಮ್ಮ ನಿಮ್ಮ ಮನೆಯಲ್ಲಿಯೇ ಇರಿ ಎಂದು ಹೇಳಿದರೂ ಕೂಡ ಜನರು ಕೇಳುತ್ತಿಲ್ಲ.
ಕೊರೊನಾ ವೈರಸ್ ನ ಹರಡುವಿಕೆಯನ್ನು ತಡೆಗಟ್ಟಲು ಕರ್ನಾಟಕ ರಾಜ್ಯವನ್ನು ಲಾಕ್ ಡೌನ್ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಆದೇಶಿಸಿದ್ದಾರೆ. ಲಾಕ್ ಡೌನ್ ಆದೇಶದ ನಂತರವೂ ಕೊರೊನಾ ವೈರಸ್ ಭೀತಿಯನ್ನು ಪಕ್ಕಕ್ಕಿಟ್ಟು.ಅದನ್ನು ಕಡೆಗಣಿಸಿ ಯುಗಾದಿ ಹಬ್ಬಕ್ಕಾಗಿ ಖರೀದಿ ಮಾಡಲು ಮಾರುಕಟ್ಟೆಗೆ ಜನ ಮುಗಿಬೀಳುತ್ತಿದ್ದಾರೆ.
ಇದರಿಂದ ಬೇಸರಗೊಂಡ ಕನ್ನಡ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ''ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದೇ ಇರೀ. ದಯವಿಟ್ಟು ಮನೆಯ ಒಳಗಡೆ ಇರೀ'' ಎಂದು ಸಾರ್ವಜನಿಕರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ದೇಶವೇ ಮಾರಣಹೋಮಕ್ಕೆ ತುತ್ತಾದೀತು!
''ಈ ಕೊರೊನಾ ವೈರಸ್ ರೋಗ ಬಹಳ ಅಪಾಯಕಾರಿ ಎಂಬುದು ನಿಮಗೆ ತಿಳಿದಿದ್ದರು ಸಹ ತಮ್ಮ ಊರುಗಳಿಗೆ ಹೋಗುವುದು, ಹಬ್ಬಕ್ಕಾಗಿ ಸಂಚರಿಸುವುದನ್ನು ಮಾಡದಿರಿ. ನಿಮ್ಮ ಈ ಕೃತ್ಯದಿಂದ ಇಡೀ ದೇಶವೇ ಮಾರಣಹೋಮಕ್ಕೆ ತುತ್ತಾಗುವಂತೆ ಮಾಡದಿರಿ'' ಎಂದು ನಟ ದರ್ಶನ್ ಅವರು ಹೇಳಿದರು.
Tags:
ಸಿನಿಮಾ ಸುದ್ದಿಗಳು