ಪದೇ ಪದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ಇತರರು ನಿಮ್ಮ ಮೇಲೆ ಇಟ್ಟ ಭರವಸೆಗೆ ಧಕ್ಕೆ ಉಂಟಾಗುವುದು. ಹಾಗಾಗಿ ಆದಷ್ಟು ಸರಿಯಾದ ಮತ್ತು ದೃಢ ನಿರ್ಧಾರ ತಳೆಯುವತ್ತ ಚಿಂತಿಸುವುದು ಒಳ್ಳೆಯದು.
ಪ್ರತಿದಿನದ ನಿರೀಕ್ಷೆಗಳು ಸೋಲುತ್ತವೆ ಎಂದು ನೊಂದುಕೊಳ್ಳದಿರಿ. ನೀವು ನಿಮ್ಮ ಆತ್ಮ ಸಂತೋಷದಿಂದ ಮಾಡಿದ ಕಾಯಕಗಳು ಶುಭಫಲವನ್ನುಂಟು ಮಾಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ನಿಮ್ಮ ಜವಾಬ್ದಾರಿಯ ಪಾಲು ದೊಡ್ಡದೇ ಇದೆ. ಬಳಲಿಕೆ ತೋರಿಬರುವುದು. ನಿಮ್ಮ ಮನಸ್ಸಿಗೆ ಒಪ್ಪದ ಕೆಲಸಗಳ ಬಗ್ಗೆ ಚಿಂತಿಸುವುದು ತರವಲ್ಲ ಮತ್ತು ನಿಮಗೆ ಸಂಬಂಧಪಡದ ವಿಷಯಗಳಲ್ಲಿ ಮೂಗು ತೂರಿಸದಿರಿ.
ಹಿತಶತ್ರುಗಳು ನಿಮ್ಮನ್ನು ಪೀಡಿಸುವಂತಹ ಸಾಧ್ಯತೆಗಳು ಹೇರಳವಾಗಿದೆ ಆದರೆ ಅವರು ಪೀಡಿಸುತ್ತಾರೆ ಎಂಬ ಕಾರಣದಿಂದ ಇದ್ದ ಜವಾಬ್ದಾರಿ ಸ್ಥಾನದಿಂದ ಕೆಳಗಿಳಿಯುವುದು ತರವಲ್ಲ. ಆದಷ್ಟು ಕುಲದೇವರ ಪ್ರಾರ್ಥನೆ ಮಾಡಿ.
ಕೆಲಸ ಕಾರ್ಯಗಳ ವಿಚಾರದಲ್ಲಿ ಟೀಕೆ ಟಿಪ್ಪಣಿಗಳು ಬರುವುದು. ನೀವು ಈ ಹಿಂದೆ ತಾಳಿದ ತಪ್ಪು ನಿರ್ಧಾರಗಳು ನಿಮ್ಮನ್ನು ಭಾದಿಸುತ್ತವೆ. ಹಿರಿಯರ ಮಧ್ಯಸ್ಥಿಕೆಯಲ್ಲಿ ಕೆಲವು ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳುವುದು ಒಳ್ಳೆಯದು.
ಮಾಡುವ ಕೆಲಸವು ಮಂದಗತಿಯಲ್ಲಿ ಸಾಗುವುದು. ನೀವು ಅಸಭ್ಯವನ್ನು ತೊರೆದು ಕಾರ್ಯಪ್ರವೃತ್ತರಾದಲ್ಲಿ ಒಳಿತಾಗುವುದು. ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಆಂಜನೇಯ ಸ್ತೋತ್ರ ಪಠಿಸಿ.
ಹೊಸ ಕೆಲಸಗಳನ್ನು ಹುಡುಕುವವರಿಗೆ ಹೇರಳ ಅವಕಾಶಗಳು ದೊರೆಯಲಿವೆ. ದೈವಕೃಪೆಯಿಂದ ಶುಭಫಲ ಉಂಟಾಗುವುದು. ಸ್ನೇಹಿತರು ಸಹಾಯಕೋರಿ ಬರಲಿದ್ದು, ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುವುದು.
ವಿವಾಹ ಅಪೇಕ್ಷೆಯುಳ್ಳವರಿಗೆ ಖಂಡಿತವಾಗಿಯೂ ಆತುರ ಸಲ್ಲದು. ಕಾದಷ್ಟು ಕಣಕರುಚಿ ಎನ್ನುವಂತೆ ಇನ್ನು ಸ್ವಲ್ಪದಿನ ಕಾಯುವುದರಿಂದ ಉತ್ತಮ ಜೀವನ ಸಂಗಾತಿಯು ದೊರೆಯುವರು..
ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ.
ಸಾಂಸಾರಿಕ ಗೊಂದಲಗಳು ಕಡಿಮೆಯಾಗಲಿದ್ದು, ಮನೆಯಲ್ಲಿ ಸಂಭ್ರಮದ ವಾತಾವರಣ ಮೂಡಲಿದೆ. ಆರೋಗ್ಯದಲ್ಲಿ ತುಸು ಏರು-ಪೇರಾಗುವುದು. ಈ ಬಗ್ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮನೆಯ ಮಕ್ಕಳ ವಿಚಾರದಲ್ಲಿ ಉದಾಸೀನ ಮಾಡುವುದರಿಂದ ಕುಲಕ್ಕೆ ಕಳಂಕ ಬರುವ ಸಾಧ್ಯತೆ ಇದ್ದು, ಮಕ್ಕಳನ್ನು ಕರೆದು ಈ ಬಗ್ಗೆ ಬುದ್ಧಿವಾದವನ್ನು ಹೇಳುವುದು ಒಳ್ಳೆಯದು. ಮನಸ್ಸಿಗೆ ಒಗ್ಗದ ಜವಾಬ್ದಾರಿಗಳನ್ನು ಹೊರಬೇಡಿ.
ಸ್ನೇಹಿತರು ಸಹಾಯಕೋರಿ ಬರಲಿದ್ದು, ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ನೆರವು ನೀಡಿ. ನಿರುದ್ಯೋಗಿ ಮಗನಿಗೆ ಸಾಧಾರಣ ವೇತನದ ನೌಕರಿಯು ದೊರೆಯುವ ಸಾಧ್ಯತೆ ಇರುತ್ತದೆ. ಮಿತಿಮೀರುತ್ತಿರುವ ಖರ್ಚುಗಳಿಗೆ ಕಡಿವಾಣ ಹಾಕಿ.
Tags:
ದಿನ ಭವಿಷ್ಯ











