ಮುಂಗೋಪದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಪ್ರಯಾಣ ಕಾಲದಲ್ಲಿ ಆದಷ್ಟು ಜಾಗ್ರತೆ ವಹಿಸಿ. ಹಣಕಾಸಿನ ವಿಷಯದಲ್ಲಿ ತುಸು ನೆಮ್ಮದಿ ಕಾಣುವಿರಿ. ಮಕ್ಕಳು ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವರು.
ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳಬೇಡಿ. ಒರಟುತನದಿಂದ ಪ್ರಶ್ನಿಸುವುದು ಕೆಲವೊಮ್ಮೆ ಅನಿವಾರ್ಯವಾಗುವುದು. ಮಾಡುವ ಕೆಲಸವನ್ನು ನಿಷ್ಟೆಯಿಂದ ಮಾಡಿ. ಭಗವಂತ ನಿಮ್ಮ ಕಾರ್ಯದಲ್ಲಿ ಯಶಸ್ಸನ್ನು ನೀಡುವನು.
ವೈರ ಸಾಧಿಸುವ ಮನಸ್ಸು ನಿಮ್ಮ ವಿರೋಧಿಗೂ ಇರಲಾರದು. ಆದರೆ ಸದ್ಯದ ಗ್ರಹಸ್ಥಿತಿಯು ನಿಮ್ಮಲ್ಲಿ ಕೆಲವು ಅನುಮಾನ ವಿಷಯಗಳನ್ನು ಬಿತ್ತುವವು. ಹಾಗಾಗಿ ಹೆಚ್ಚಿಗೆ ತಲೆಕೆಡಿಸಿಕೊಳ್ಳದೆ ಭಗವಂತನ ಆರಾಧನೆ ಮಾಡಿ.
ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಆಗುವುದು. ಇದರಿಂದ ಮಾನಸಿಕ ಕಿರಿಕಿರಿ ಆದರೂ ಮುಂದೆ ಉದ್ಯೋಗದಲ್ಲಿ ನೆಮ್ಮದಿ ದೊರೆಯವುದು. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುವರು.
ಯಾವುದೇ ವಸ್ತುವಾಗಲಿ ಅಥವಾ ವ್ಯಕ್ತಿಯಾಗಲಿ ಎದುರಿಗಿದ್ದಾಗ ಬೆಲೆ ಗೊತ್ತಾಗುವುದಿಲ್ಲ. ಕಣ್ಮರೆಯಾದಾಗಲೆ ಅವರ ಮಹತ್ವ ಗೊತ್ತಾಗುವುದು. ಹಾಗಾಗಿ ಇದ್ದ ಸಮಯದಲ್ಲಿಯೇ ಅವರ ಗುಣಗಾನ ಮಾಡುವುದು ಕ್ಷೇಮ.
ಕಾರ್ಯ ಕಾರಣಗಳು ಒಂದಕ್ಕೊಂದು ಬೆಸೆದು ಕೊಂಡಿರುತ್ತವೆ. ಹಾಗಾಗಿ ನಿಮ್ಮ ಈ ಪ್ರಗತಿಗೆ ಗುರು ಹಿರಿಯರ ಆಶೀರ್ವಾದವೇ ಕಾರಣ. ಅದನ್ನು ನೀವು ಮರೆಯದೆ ಗುರು-ಹಿರಿಯರನ್ನು ನೆನೆಪಿಸಿಕೊಳ್ಳಿ.
ನಿಮ್ಮ ಕೆಲಸಗಳನ್ನು ಸುಲಭವಾಗಿ ಮಾಡಿ ಮುಗಿಸಲು ಹಿರಿಯರೊಬ್ಬರ ಸಹಾಯ ಮತ್ತು ಸಹಕಾರ ದೊರೆಯುವುದು. ಪ್ರಯಾಣದಲ್ಲಿ ಎಚ್ಚರಿಕ ಅಗತ್ಯ. ಹಣಕಾಸಿನ ವಿಷಯದಲ್ಲಿ ತೊಂದರೆಯನ್ನು ಎದುರಿಸುವಿರಿ.
ಬಂಧು-ಬಾಂಧವರ ಹಾಗೂ ಸ್ನೇಹಿತರ ಸಹಾಯ ಮತ್ತು ಸಹಕಾರವು ನಿಮಗೆ ದೊರೆಯುವುದು. ಮನೋಕಾಮನೆಗಳು ಪೂರ್ಣಗೊಳ್ಳುವುದು. ವಿವಿಧ ಮೂಲಗಳಿಂದ ಹಣ ಬರುವುದು.
ನಿಮ್ಮ ಪ್ರತಿಯೊಂದು ಚಲನ-ವಲನವನ್ನು ಕುತೂಹಲದಿಂದ ವೀಕ್ಷಿಸುವ ಜನರಿರುತ್ತಾರೆ. ಹಾಗಾಗಿ ಮಹತ್ತರ ಕೆಲಸಗಳ ಸಾಧ್ಯಸಾಧ್ಯತೆಯ ಬಗ್ಗೆ ಇತರರೊಡನೆ ಚರ್ಚಿಸದಿರಿ.
ದೂರದ ಪ್ರವಾಸ ಕುರಿತು ಆಶಾದಾಯಕ ಪತ್ರ ತಲುಪುವ ಸಾಧ್ಯತೆ ಇದೆ. ವಿದೇಶ ಪ್ರವಾಸ ಕನಸನ್ನು ಕಾಣುವಿರಿ ಮತ್ತು ಆ ಕನಸ್ಸನ್ನು ನನಸಾಗಿಯೂ ಕಾಣುವಿರಿ. ಆರೋಗ್ಯ ಸದೃಢವಾಗಿರುತ್ತದೆ.
ಬಹುಮುಖ್ಯವಾದ ನಿರ್ಧಾರಕ್ಕೆ ಬರಲು ಅವಕಾಶವೊಂದು ಒದಗಿ ಬರಲಿದೆ. ಜೊತೆಯಲ್ಲಿ ಮುಂದೆ ಬರಬಹುದಾದ ಸಮಸ್ಯೆಗಳ ಬಗ್ಗೆಯೂ ಅಮೂಲಾಗ್ರವಾಗಿ ಚಿಂತನೆಯನ್ನು ಮಾಡುವುದು ಒಳ್ಳೆಯದು. ಹಣಕಾಸಿನ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ.
ಕುಟುಂಬದಲ್ಲಿನ ಸೌಹಾರ್ದತೆಯನ್ನು ಉಳಿಸಿಕೊಳ್ಳಿ. ಸಿಟ್ಟಿನಿಂದ ನಿಮ್ಮ ಸುತ್ತಮುತ್ತಲಿನ ಪರಿಸರ ಹಾನಿಯಾಗುವುದು ಮತ್ತು ಇದರಿಂದ ಪತಿ-ಪತ್ನಿಯರಲ್ಲಿ ಕೆಲ ಸಮಯ ವಿರಸ ಉಂಟಾಗುವುದು.
Tags:
ದಿನ ಭವಿಷ್ಯ