ಸ್ವತಂತ್ರವಾಗಿ ಬಂಡವಾಳ ಹೂಡಿ ವ್ಯವಹಾರ ಆರಂಭಿಸಲು ಸಕಾಲವಲ್ಲ. ಮತ್ತೊಬ್ಬರ ಪಾಲುದಾರಿಕೆಯೊಂದಿಗೆ ಆರಂಭಿಸುವುದು ಉತ್ತಮ. ಎಲ್ಲರ ಸಲಹೆಗಳನ್ನು ಸ್ವೀಕರಿಸಿ ಆದರೆ ನಿಮ್ಮ ಯೋಜನೆಯಂತೆ ಕಾರ್ಯರೂಪಕ್ಕೆ ತನ್ನಿ.
ಸಮಯ ಪ್ರಜ್ಞೆಯಿಂದ ವ್ಯವಹರಿಸಿ. ಸ್ನೇಹಿತರೊಂದಿಗೆ ಮೋಜನ್ನು ಅನುಭವಿಸುವಿರಿ. ನಿಮ್ಮ ಕೆಲಸಕಾರ್ಯಗಳಲ್ಲಿ ಮಕ್ಕಳ ಸಹಾಯ ಸಹಕಾರ ಇರುವುದರಿಂದ ಅಧಿಕ ಒತ್ತಡದಿಂದ ಪಾರಾಗುವಿರಿ.
ಅನುಭವಿಗಳ ಸಲಹೆಪಡೆದು ಷೇರು ಬಜಾರಿನಲ್ಲಿ ಹಣ ಹೂಡುವುದು ಒಳಿತು. ಸಮಾಜವು ನಿಮ್ಮ ಸೇವೆಯನ್ನು ಗುರುತಿಸಿ ಗೌರವಿಸಲಿದೆ. ಸರ್ಕಾರಿ ನೌಕರರು ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವರು.
ಆದಾಯಕ್ಕೆ ಹೊಸ ಹೊಸ ದಾರಿ ಕಂಡಂತೆ ಖರ್ಚಿಗೂ ಕೂಡಾ ಹೊಸ ದಾರಿ ಕಾಣಲಿವೆ. ಖರ್ಚಿನ ಬಾಬ್ತಿಗೆ ಕಡಿವಾಣ ಹಾಕಲು ಪ್ರಯತ್ನಿಸದಿದ್ದಲ್ಲಿ ಕೂಡಿಟ್ಟ ಗಂಟು ಕೂಡಾ ಕರಗುವ ಸಾಧ್ಯತೆ ಇದೆ. ಸೋಮಾರಿತನ ಹಾನಿ ಮಾಡುವುದು.
ಅನೇಕ ಸಮಸ್ಯೆಗಳಿಂದ ಗೊಂದಲದ ಗೂಡಾಗಿದ್ದ ಕುಟುಂಬದಲ್ಲಿ ನೆಮ್ಮದಿ ಕಾಣಲು ಆರಂಭವಾಗಿದೆ. ಆರ್ಥಿಕ ಸಮಸ್ಯೆಗಳು ಆದಾಯದಿಂದ ಸುಧಾರಿಸಲಿವೆ. ಮಾವನ ಮನೆಯಿಂದ ಬರಲಿರುವ ಎಲ್ಲಾ ರೀತಿಯ ಸಹಾಯಗಳನ್ನು ಸ್ವೀಕರಿಸಿ.
ಸತತ ಪರಿಶ್ರಮವೇ ಯಶಸ್ಸಿನ ಗುಟ್ಟೆಂದು ಚೆನ್ನಾಗಿ ಅರಿತಿರುವ ನಿಮಗೆ ಯೋಗ್ಯ ಪ್ರತಿಫಲ ದೊರೆಯುವುದು. ಕಾರ್ಯ ಒತ್ತಡ ಎಷ್ಟೇ ಇದ್ದರೂ ಕೂಡಾ ಮನಸ್ಥಿತಿಯನ್ನು ಕಳೆದುಕೊಳ್ಳದೆ ಇರುವ ನಿಮ್ಮ ಮನೋಧೈರ್ಯವನ್ನು ಇತರರು ಮೆಚ್ಚುವರು.
ನೀವು ಸರ್ಕಾರಿ ಕೆಲಸಕಾರ್ಯದಲ್ಲಿ ಉನ್ನತ ಹುದ್ದೆಯಲ್ಲಿದ್ದರೆ ಮುಂಬಡ್ತಿ ಇಷ್ಟರಲ್ಲೆ ದೊರೆಯುವ ಸಾಧ್ಯತೆ ಇರುತ್ತವೆ. ಇದಕ್ಕೆಲ್ಲಾ ನಿಮ್ಮ ಪ್ರಾಮಾಣಿಕತೆ, ಶ್ರಮ ಹಾಗೂ ಶ್ರದ್ದೆಯೇ ಕಾರಣವಾಗುವುದು. ಅವರಿವರ ಮಾತುಗಳಿಗೆ ಕಿವಿಗೊಡದಿರಿ.
ಕಳೆದು ಹೋಗಿದ್ದ ಅಥವಾ ನಿಮಗೆ ಬರಬೇಕಾದ ಹಣವು ಬರುವ ಸೂಚನೆ ನಿಮಗೆ ತಲುಪುವುದು. ಇದರಿಂದ ನಿಮ್ಮ ಆರ್ಥಿಕ ಸಂಕಷ್ಟಕ್ಕೆ ತೆರೆಬೀಳಲಿದೆ. ಪ್ರತಿಭಾವಂತರಿಗೆ ಉತ್ತಮ ಅವಕಾಶಗಳು ಬರುವುದು.
ನಿಮ್ಮ ಕಾರ್ಯಾನುಭವ ಹಾಗೂ ಜಾಣತನ ಎಲ್ಲರ ಪ್ರಶಂಸೆಗೆ ಪಾತ್ರವಾಗಲಿದೆ. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವಿರಲಿ. ಏಕಾಂತದಿಂದ ಹೊರ ಬರಲು ಉತ್ತಮ ಗ್ರಂಥಗಳ ಓದುವಿಕೆಯು ಸಹಕಾರಿಯಾಗುವುದು.
ನಿಮ್ಮ ಮಾತಿಗೂ ಕೃತಿಗೂ ಅಂತರವಿರದಿರಲಿ. ಕೆಲ ಗ್ರಹಗಳ ಸಂಚಾರದಿಂದ ನಿಮಗೆ ಅಧಿಕ ಒತ್ತಡ ಉಂಟಾಗುವುದು. ಹಾಗಾಗಿ ಆದಷ್ಟು ತಾಳ್ಮೆಯಿಂದ ಇರಿ. ಕುಲದೇವತಾ ಪ್ರಾರ್ಥನೆ ಮಾಡಿ.
ಬೆನ್ನು ನೋವು ಅಥವಾ ಮಂಡಿನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಕಾಲು ಕೆಜಿಯಷ್ಟು ತೊಗರಿಬೇಳೆಯನ್ನು ದಾನ ಮಾಡಿ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ. ಸಂಗಾತಿಯ ಮಾತುಗಳಿಗೆ ಬೆಲೆ ಕೊಡುವುದು ಒಳ್ಳೆಯದು.
ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಆ ಧೈರ್ಯವೇ ನಿಮ್ಮ ಬಹುದೊಡ್ಡ ಆಸ್ತಿ. ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಗಸು ಎನ್ನುವಂತೆ ಹಳೆಯ ವಿಚಾರಗಳು ನಿಮಗೆ ಮುದವನ್ನುಂಟು ಮಾಡುವುದು.
Tags:
ದಿನ ಭವಿಷ್ಯ











