ತಂಡ್ರಕುಳಿ ದುರಂತದಲ್ಲಿ ನೊಂದವರಿಗೆ ಶಾಶ್ವತ ಪರಿಹಾರದ ಭರವಸೆ: ಶಾಸಕ ದಿನಕರ ಶೆಟ್ಟಿ

ತಂಡ್ರಕುಳಿ ದುರಂತದಲ್ಲಿ ನೊಂದವರಿಗೆ ಶಾಶ್ವತ ಪರಿಹಾರದ ಭರವಸೆ


ಕುಮಟಾ: ತಾಲೂಕಿನ ತಂಡ್ರಕುಳಿಯಲ್ಲಿ 2017 ರಲ್ಲಿ ಸಂಭವಿಸಿದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಹಾಗೂ ಬದಲಿ ಸ್ಥಳಾವಕಾಶ ನೀಡುವ ಕುರಿತು ಚರ್ಚಿಸಲು ಶಾಸಕ ದಿನಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸೋಮವಾರ ತಾ.ಪಂ ಸಭಾಭವನದಲ್ಲಿ ಸಭೆ ನಡೆಯಿತು.



ಸ್ಥಳೀಯರಾದ ಆರ್.ಕೆ.ಅಂಬಿಗ ಮಾತನಾಡಿ,” 2017 ರಲ್ಲಿ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಸ್ಥಳದಲ್ಲಿಯೇ ಅಸುನಿಗಿದ್ದರು. ಅವರ ಕುಟುಂಬಸ್ಥರಿಗೆ ಪರಿಹಾರ ವಿತರಣೆಯಾಗಿದೆ. ಆದರೆ ಆ ಸಂದರ್ಭದಲ್ಲಿ ಹಾನಿಗೊಳಗಾದ ಹಾಗೂ ನೊಂದ ಕುಟುಂಬದವರಿಗೆ ಇದುವರೆಗೂ ಸೂಕ್ತ ಪರಿಹಾರ ನೀಡಿಲ್ಲ. ಅಲ್ಲದೆ ತಾತ್ಪೂರ್ತಿಕವಾಗಿ ಬದಲಿ ಮನೆಗಳಲ್ಲಿ ವಾಶಿಸುವವರಿಗೆ 10 ಸಾವಿರ ಮಾಸಿಕ ಬಾಡಿಗೆ ನೀಡುವುದಾಗಿ ತಾಲೂಕಾಡಳಿತ ಘೋಷಿಸಿತ್ತು. ಅಲ್ಲದೇ ಅಲ್ಲಿನ ಸ್ಥಳೀಯರನ್ನು ಶೀಘ್ರ ಸ್ಥಳಾಂತರಿಸಿ ಅವರಿಗೆ ನಿವೇಶನ ಒದಗಿಸಲಾಗುವುದು ಎನ್ನವು ಭರವಸೆ ನೀಡಲಾಗಿತ್ತು. ಆದರೆ ತಾಲೂಕಾಡಳಿತ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದೆ. ಕಾರಣ ತಾವು ನಮಗೆ ನ್ಯಾಯ ಒದಗಿಸಿಕೊಡಬೇಕು “ಎಂದು ಶಾಸಕರಲ್ಲಿ ವಿನಂತಿಸಿದರು.



ಉಪವಿಭಾಗಾಧಿಕಾರಿ ಎಮ್.ಅಜಿತ್ ಮಾತನಾಡಿ,” ಈಗಾಗಲೇ ತಾಲೂಕಾಡಳಿತ ಘಟನೆಯಲ್ಲಿ ಮೃತರಾದವರಿಗೆ ಸಂಪೂರ್ಣ ಪರಿಹಾರ ವಿತರಿಸಿದೆ.ಇದುವೆರೆಗೆ ಸಮಿಕ್ಷೆ ಮಾಡಿ ಒಟ್ಟೂ 43 ಕುಟುಂಬಗಳ 240 ಜನರಿಗೆ ತಲಾ 10 ಸಾವಿರ ದಂತೆ ಪರಿಹಾರ ನೀಡಲಾಗಿದೆ. ಇನ್ನೂಳಿದಂತೆ ನೊಂದವರಿಗೆ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದ್ದು ಸೂಕ್ತ ಜಾಗಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಶೀಘ್ರ ಭೂಮಿ ಹುಡುಕಿ ಶಾಸ್ವತ ಪರಿಹಾರ ಕಲ್ಪಿಸಲಾಗುವುದು “ಎಂದರು.



ಶಾಸಕ ದಿನಕರ ಶೆಟ್ಟಿ ಮಾತನಾಡಿ,” ತಾಲೂಕು ಆಡಳಿತ ಸಂತ್ರಸ್ಥರಿಗೆ ಜಾಗ ಕೊಡಲು ಸಿದ್ದವಿದೆ. ಆದರೆ ಪ್ರಸ್ತುತ ನೀವುಗಳು ವಾಸವಿರುವ ಜಾಗವನ್ನು ಸಂಪೂರ್ಣವಾಗಿ ಖುಲ್ಲಾಪಡಿಸಬೇಕು. ಈ ಕುರಿತು ನೀವು ಲಿಖತವಾಗಿ ಬರೆದುಕೊಡಬೇಕು. ಈಗಾಗಲೇ ಕೆಲವರಿಗೆ ಪರಿಹಾರ ನೀಡಲಾಗಿದೆ.ಇನ್ನೂಳಿದವರಿಗೆ ಆದಷ್ಟು ಬೇಗ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನೂ ಕೆಲ ನೊಂದ ಕುಟುಂಬಗಳ ಮೇಲ್ಚಾವಣಿ ಇನ್ನಿತರ ದುರಸ್ಥಿಗಾಗಿ 10 ಸಾವಿರ ನೀಡಲಾಗುವುದು.ಅಂಗಡಿ ಕಳೆದುಕೊಂಡವನಿಗೆ 50 ಸಾವಿರ ಹಾಗೂ ಮೃತಪಟ್ಟವರ ಕುಟುಂಬದವರ ಸಂಬಂಧಿಗೆ ಮನೆ ದುರಸ್ಥಿಗಾಗಿ 50 ಸಾವಿರ ಹಾಗೂ ಮತ್ಸಾಶ್ರಯ ಯೋನೆಯಡಿ ಮನೆ ನೀಡಲಾಗುವುದು. ಇನ್ನುಳಿದಂತೆ ಘಟನೆಯಲ್ಲಿ ಬಾವಿ ಹಾಗೂ ಪಂಪ್ ಸೇಟ್ ಕಳೆದುಕೊಂಡವರಿಗೂ ಸೂಕ್ತ ಪರಿಹಾರ ನೀಡಲಾಗುವುದು.ಅಲ್ಲದೇ ಶೀಘ್ರದಲ್ಲಿ ಬದಲಿ ಜಾಗವನ್ನು ಹುಡುಕಿ ಎಲ್ಲರನ್ನೂ ಸ್ಥಳಾಂತರಿಸಲಾಗುವುದು ಗ್ರಾಮಸ್ಥರು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ. ತಾಲೂಕು ಆಡಳಿತ ಎಲ್ಲಾ ರೀತಿಯಿಂದ ಸ್ಪಂದಿಸಲಿದೆ. ಅಲ್ಲದೇ ಹೆದ್ದಾರಿ ಪಕ್ಕದಲ್ಲಿರುವ ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ಐಆರ್ ಬಿ ಕಂಪನಿ ಡಾಂಬರಿಕರಣ ಮಾಡಿಕೊಡಲಿದೆ “ಎಂದು ಭರವಸೆ ನೀಡಿದರು.



ತಹಸೀಲ್ದಾರ ಮೇಘರಾಜ ನಾಯ್ಕ,ತಾ.ಪಂ ಇ.ಓ ಸಿ.ಟಿ.ನಾಯ್ಕ, ಐ ಆರ್ ಬಿ ಇಂಜಿನೀಯರ್ ವೆಂಕಟ್ರಮಣ ಹೆಗಡೆ, ಗ್ರಾಮಸ್ಥರಾದ ಎಲ್.ಎಸ್.ಅಂಬಿಗ,ರಾಮು ಅಂಬಿಗ,ರಾಘವೇಂದ್ರ ಅಂಬಿಗ ಇನ್ನಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement