ಇಂದಿನ ಭವಿಷ್ಯ ಮಾರ್ಚ್ 18th 2020

Todays horoscope in kannada Todays astrology in kannada

Today astrology in kannada today horoscope in kannada

ನಿಗದಿತ ವೇಳಾಪಟ್ಟಿಯಂತೆಯೇ ಎಲ್ಲ ಕೆಲಸಗಳನ್ನು ಮಾಡಲು ಪ್ರಯತ್ನಿಸುತ್ತೀರಿ. ನಿಮ್ಮ ಮುಂದಾಳತ್ವದಲ್ಲಿ ಮಹತ್ತರ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ನಿಮ್ಮ ಮಾತಿಗೆ, ಆದೇಶಕ್ಕೆ ಇತರರು ಗೌರವ ನೀಡುತ್ತಾರೆ. ಸಮಾಜದಲ್ಲಿ ಗೌರವ- ಮನ್ನಣೆಗೆ ಪಾತ್ರರಾಗಲಿದ್ದೀರಿ.

Today astrology in kannada today horoscope in kannada

ಈ ವರೆಗೆ ಉಳಿಸಿಕೊಂಡಿದ್ದ ಹಣವನ್ನು ಸರಿಯಾದ ಬಗೆಯಲ್ಲಿ ವಿನಿಯೋಗ ಮಾಡಲು ಯೋಜನೆ ರೂಪಿಸುತ್ತೀರಿ. ಸಂಗಾತಿಯ ಸಲುವಾಗಿ ಕೆಲವು ಅಗತ್ಯ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ತಂದೆ ಅಥವಾ ತಂದೆ ಸಮಾನರು ನಿಮಗೆ ಹಣಕಾಸಿನ ನೆರವು ನೀಡುವ ಸಾಧ್ಯತೆ ಇದೆ.

Today astrology in kannada today horoscope in kannada

ಆಪ್ತರೊಂದಿಗೆ ಉದ್ಯೋಗ ವಿಚಾರವಾಗಿ ಮಾತುಕತೆ ನಡೆಸಲಿದ್ದೀರಿ. ಒತ್ತಡದ ಸನ್ನಿವೇಶದಲ್ಲಿ ನಿಮ್ಮ ಮನೋಸ್ಥೈರ್ಯದ ಕಾರಣಕ್ಕೆ ವಿಪರೀತದ ಕ್ರಮಗಳನ್ನು ತೆಗೆದುಕೊಳ್ಳುವುದು ತಪ್ಪುತ್ತದೆ. ಬಂಧುಗಳು ಅಥವಾ ಸ್ನೇಹಿತರು ನಿಮ್ಮಿಂದ ಹಣಕಾಸಿನ ನೆರವು ನಿರೀಕ್ಷಿಸಿ ಬರಹುದು.

Today astrology in kannada today horoscope in kannada

ಜಮೀನು- ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶ ದೊರೆಯುತ್ತದೆ. ಇಷ್ಟು ಸಮಯ ನೀವು ಹಾಕಿದ್ದ ಶ್ರಮಕ್ಕೆ ಪ್ರತಿಫಲ ದೊರೆಯುವ ಮುನ್ಸೂಚನೆ ಸಿಗುತ್ತದೆ. ಯಾವುದೇ ಪ್ರಮುಖ ನಿರ್ಧಾರ ಮಾಡುವಾಗ ಭಾವನಾತ್ಮಕವಾಗಿ ಆಲೋಚನೆ ಮಾಡಬೇಡಿ, ವಾಸ್ತವ ನೆಲೆಗಟ್ಟಿನಲ್ಲಿ ಚಿಂತಿಸಿ.

Today astrology in kannada today horoscope in kannada

ಆಲಸ್ಯ ನಿಮ್ಮನ್ನು ಅತಿಯಾಗಿ ಕಾಡುತ್ತದೆ. ಕೊಟ್ಟ ಮಾತನ್ನು ಪೂರೈಸುವುದಕ್ಕೆ ಬಹಳ ಕಷ್ಟ ಪಡಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಿರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಮಾಡಿ. ಬೇರೆಯವರ ಸಲುವಾಗಿ ಸಾಲ ಮಾಡಬೇಡಿ. ಇದನ್ನು ತೀರಿಸುವುದು ಸಮಸ್ಯೆಯಾಗಲಿದೆ.

Today astrology in kannada today horoscope in kannada

ಬೆಳ್ಳಿ- ಚಿನ್ನದ ಖರೀದಿ ಮಾಡುವ ಯೋಗ ನಿಮ್ಮ ಪಾಲಿಗಿದೆ. ಪ್ರಮಾಣ ಅಷ್ಟು- ಇಷ್ಟು ಎಂದಾಗಬೇಕಿಲ್ಲ. ಆದರೆ ಸಾಲ ಮಾಡುವುದಕ್ಕೆ ಹೋಗಬೇಡಿ. ಏಕೆಂದರೆ ಈ ಸಂದರ್ಭದಲ್ಲಿ ನೀವು ಮಾಡಿದ್ದ ಸಾಲ ಪೂರ್ಣ ಪ್ರಮಾಣದಲ್ಲಿ ಉದ್ದೇಶಿತ ಕೆಲಸಕ್ಕೇ ಬಳಕೆಯಾಗುವ ಖಾತ್ರಿ ಇಲ್ಲ.

Today astrology in kannada today horoscope in kannada

ಹೊಂದಾಣಿಕೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಈ ಹಿಂದೆ ಯಾರ ಜತೆಗೆ ಭಿನ್ನಾಭಿಪ್ರಾಯ ಬಂದಿತ್ತೋ ಅವರ ಜತೆಗೆ ಹೊಂದಿಕೊಂಡು ಹೋಗುವ ಸಂದರ್ಭ ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಬಡ್ತಿ- ವರ್ಗಾವಣೆ ವಿಚಾರಗಳಲ್ಲಿ ಗೊಂದಲ ಏರ್ಪಡುತ್ತದೆ. ಹೂಡಿಕೆಯಲ್ಲಿ ನಿರೀಕ್ಷಿತ ಲಾಭ ದೊರೆಯುವುದಿಲ್ಲ.

Today astrology in kannada today horoscope in kannada

ನಿಮ್ಮ ಅನುಭವ, ತಾಳ್ಮೆಯ ಸ್ವಭಾವಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತದೆ. ಗೃಹಾಲಂಕಾರ ವಸ್ತುಗಳ ಖರೀದಿಗಾಗಿ ಖರ್ಚು ಮಾಡಬೇಕಾಗುತ್ತದೆ. ಸಹೋದ್ಯೋಗಿಗಳ ಜತೆಗಿನ ನಿಮ್ಮ ಸಂವಹನ ಕೌಶಲವನ್ನು ಮೇಲಧಿಕಾರಿಗಳು ಮೆಚ್ಚಿಕೊಳ್ಳುತ್ತಾರೆ. ಆದರೆ ಹೊಸ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು

Today astrology in kannada today horoscope in kannada

ಸೈಟು- ಆಸ್ತಿ ಖರೀದಿ ಮಾಡುವುದಕ್ಕಾಗಿ ಸಾಲಕ್ಕೆ ಪ್ರಯತ್ನಿಸುತ್ತಿರುವವರಿಗೆ ಹಿನ್ನಡೆ ಆಗಲಿದೆ. ಕೃಷಿ ಭೂಮಿ ಅಭಿವೃದ್ಧಿಗಾಗಿ ಹಣ ಹೊಂದಿಸುವುದಕ್ಕೆ ನಾನಾ ಬಗೆಯ ವಿಘ್ನಗಳು ಎದುರಾಗಲಿವೆ. ಶಿಕ್ಷಕರು, ಉಪನ್ಯಾಸಕರಿಗೆ ಒತ್ತಡದ ದಿನವಾಗಿರುತ್ತದೆ. ನಿರೀಕ್ಷಿತ ಮೂಲದಿಂದ ಹಣಕಾಸಿನ ಹರಿವು ಬರುವುದಿಲ್ಲ.

Today astrology in kannada today horoscope in kannada

ನಿಮ್ಮ ನಡವಳಿಕೆ, ಮಾತು, ಮೌನ ಎಲ್ಲದರ ಬಗ್ಗೆಯೂ ಇತರರು ಅನುಮಾನ ಪಡುವಂತೆ ಆಗುತ್ತದೆ. ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ. ಆದರೂ ಸೋದರ- ಸೋದರಿಯರಿಗಾಗಿ ಹಣಕಾಸಿನ ನೆರವು ನೀಡಲಿದ್ದೀರಿ. ಕನಿಷ್ಠ ಅವರ ಜತೆಗೆ ಮಾನಸಿಕ ಬೆಂಬಲವಾಗಿ ನಿಂತು, ಕೆಲಸ- ಕಾರ್ಯ ಮಾಡಿಕೊಡಲಿದ್ದೀರಿ.

Today astrology in kannada today horoscope in kannada

ಯಾರದೋ ಮೇಲಿನ ಸಿಟ್ಟನ್ನು ಮತ್ಯಾರದೋ ಮೇಲೆ ತೀರಿಸಿಕೊಳ್ಳಲಿದ್ದೀರಿ. ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗಲಿದೆ. ಆಪ್ತರ ಜತೆ ಮಾತುಕತೆ ಆಡುವಾಗ ಪರಿಣಾಮದ ಬಗ್ಗೆಯೂ ಆಲೋಚನೆ ಮಾಡಿ. ನೀವು ಮಾಡಿದ್ದೇ ಸರಿ ಎಂಬಂತೆ ಮಾತನಾಡುವವರಿಂದ ಅಂತರ ಕಾಯ್ದುಕೊಳ್ಳಿ.

Today astrology in kannada today horoscope in kannada

ಅನಿರೀಕ್ಷಿತವಾಗಿ ಧನಾಗಮದ ಯೋಗ ಇದೆ. ಕ್ರೀಡಾಪಟುಗಳು, ರಾಜಕಾರಣಿಗಳಿಗೆ ವೃತ್ತಿ ಜೀವನದಲ್ಲಿ ಏಳ್ಗೆ ಇದೆ. ದೇವತಾರಾಧನೆಗಾಗಿ ಬಂಧುಗಳಿಂದ ಆಹ್ವಾನ ಬರಬಹುದು. ರುಚಿಕಟ್ಟಾದ ಊಟ ಸವಿಯುವ ಯೋಗ ಇದೆ. ಹೊಸಬರ ಜತೆಗೆ ವ್ಯವಹರಿಸುವಾಗ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬೇಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement