ಮಂಗಳವಾರ ನಡೆದ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಐದು ವಿಕೆಟ್‌ಗಳ ಜಯದೊಂದಿಗೆ 3-0 ಸರಣಿಯನ್ನು ವಶಪಡಿಸಿಕೊಂಡಿದೆ.
ಮೂರು ದಶಕಗಳಿಗಿಂತಲೂ ಹೆಚ್ಚು ಅವಧಿಯಲ್ಲಿ ಭಾರತ ಇದೇ ಮೊದಲ ಬಾರಿಗೆ ಮೊದಲ ಏಕದಿನ ವೈಟ್‌ವಾಶ್ ಅನುಭವಿಸಿತು. ಸರಣಿಯಲ್ಲಿ 31 ವರ್ಷಗಳಲ್ಲಿ ಭಾರತಕ್ಕೆ ಇದು ಮೊದಲ ವೈಟ್‌ವಾಶ್ ಆಗಿದೆ. 1989 ರಲ್ಲಿ ವೆಸ್ಟ್ ಇಂಡೀಸ್ ತಂಡವು 5-0 ಗಳಿಂದ ಭಾರತವನ್ನು ಸೋಲಿಸಿತ್ತು.
ನ್ಯೂಜಿಲ್ಯಾಂಡ್ 47.1 ಓವರ್‌ಗಳಲ್ಲಿ ಐದು ವಿಕೆಟ್‌ಗೆ 300 ರನ್ ಗಳಿಸಿ ಗೆಲುವಿನ ನಗೆ ಬೀರಿತು.ಹೆನ್ರಿ ನಿಕೋಲ್ಸ್ 80 (103 ಎಸೆತಗಳು) ಮತ್ತು ಮಾರ್ಟಿನ್ ಗುಪ್ಟಿಲ್ 46 ಎಸೆತಗಳಲ್ಲಿ 66 ರನ್ ಗಳಿಸಿದರು. ಕೊಲಿನ್ ಡಿ ಗ್ರ್ಯಾಂಡ್‌ಹೋಮ್ 28 ಎಸೆತಗಳಲ್ಲಿ 58 ರನ್ ಗಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಏಳು ವಿಕೆಟ್‌ಗೆ 296 ರನ್ ಗಳಿಸಿತ್ತು, ಕೆ ಎಲ್ ರಾಹುಲ್ ಅವರ (112) ನಾಲ್ಕನೇ ಏಕದಿನ ಶತಕವನ್ನು ಪೂರೈಸಿದರು.
ಗುಪ್ಟಿಲ್ ಮತ್ತು ನಿಕೋಲ್ಸ್ ಮೊದಲ ವಿಕೆಟ್‌ಗೆ 106 ಸೇರಿಸಿದರು. ಶಾರ್ದುಲ್ ಠಾಕೂರ್ (1-87) ಮತ್ತು ನವದೀಪ್ ಸೈನಿ (0-68) ತಮ್ಮ ಲಯವನ್ನು ಕಂಡುಕೊಳ್ಳಲು ಹೆಣಗಾಡಿದರು ಅಧಿಕ
ರನ್ ಬಿಟ್ಟುಕೊಟ್ಟರು, ಜಸ್ಪ್ರೀತ್ ಬುಮ್ರಾ ಇಡೀ ಸರಣಿಯಲ್ಲಿ ಒಂದು ವಿಕೆಟ್ ಕಬಳಿಸದೆ ಹೋದರು.
Tags:
ಕ್ರೀಡಾ ಸುದ್ದಿಗಳು
