ಕುಮಟಾ: ತಾಲೂಕಿನ ದಿವಗಿ ಕ್ರಾಸ್ ಸಮೀಪ ರಸ್ತೆ ದಾಟುತ್ತಿದ್ದಾಗ ಪಾದಚಾರಿ ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಗಂಬೀರ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66 ರ ದಿವಗಿ ಸಮೀಪ ನವಗ್ರಾಮ ಕಡೆಯಿಂದ ದಿವಗಿ ಕೆಳಗಿನಕೇರಿ ಗೆ ಹೋಗಲು ರಸ್ತೆ ದಾಟುತ್ತಿದ್ದಾಗ ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಕಾರ್ ದಿವಗಿಯ ಕೆಳಗಿನಕೇರಿ ನಿವಾಸಿ ಗಣೇಶ ಅಂಬಿಗ ಎನ್ನುವವರಿಗೆ ಎದುರಿನಿಂದ ಗುದ್ದಿದ ಪರಿಣಾಮ ತಲೆ,ಕಾಲಿಗೆ ಗಂಬೀರ ಗಾಯವಾಗಿದ್ದು,ಅವರನ್ನು ಹೊನ್ನಾವರದ ಸೆಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.ಕಾರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ಭಾಗದಲ್ಲಿ ಸಾರ್ವಜನಿಕರು,ವಿಧ್ಯಾರ್ಥಿಗಳು ಹೆಚ್ಚಾಗಿ ಓಡಾಡುವುದರಿಂದ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.ಈಗಾಗಲೇ ಹಲವು ಬಾರಿ ಮೇಲ್ಸೇತುವೆ, ಹಾಗೂ ಯೂಟರ್ನ್ ನಿರ್ಮಿಸಿಕೊಡುವಂತೆ ಆಯ್ ಆರ್ ಬಿ ಕಂಪನಿ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದರು.ಆದರೆ ಸರ್ವಿಸ್ ರಸ್ತೆಯೊಂದನ್ನ ಮಾತ್ರ ಮಾಡಲು ಕಾರ್ಯರಂಬಿಸಿದ ಆಯ್.ಆರ್.ಬಿ ಕಂಪನಿ ಅದನ್ನೂ ಪೂರ್ಣಗೊಳಿಸದೆ ಅರ್ದಕ್ಕೆ ನಿಲ್ಲಿಸಿದೆ.ಇನ್ನೂ ಮೇಲ್ಸೇತುವೆ ಕೇವಲ ಭರವಸೆಯಾಗಿಯೇ ಉಳಿಯುವುದೇ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.ಇನ್ನೂ ಇದೇ ರೀತಿಯಾದರೆ ಅದೆಷ್ಟೋ ಜನ ಅಪಘಾತಕ್ಕೆ ಬಲಿಯಾಗಬೇಕು ಎನ್ನುವ ಗ್ರಾಮಸ್ಥರು ಆಯ್.ಆರ್.ಬಿ ಕಂಪನಿ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.