ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಹೀನಾಯವಾಗಿ ಸೋತು ಶರಣಾಗಿದೆ. ಈ ಸೋಲಿಗೆ ಈಗಾಗಲೇ ಕ್ರಿಕೆಟ್ ದಿಗ್ಗಜರಿಂದ ಸಾಕಷ್ಟು ವಿಮರ್ಶೆಗಳಗುತ್ತಿದೆ. ಆದರೆ ಈ ಮಧ್ಯೆ ಟೀಮ್ ಇಂಡಿಯಾ ಆಟಗಾರರು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬಿಜಿಯಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇದೀಗ ಟೀಮ್ ಇಂಡಿಯಾ ಆಟಗಾರರು ತಮ್ಮ ಫೋಟೋವನ್ನು ಅಪ್ಡೇಟ್ ಮಾಡಿ ಅದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ಆದರೆ ಅವರ ಈ ರೀತಿಯನ್ನು ಅಭಿಮಾನಿಗಳು ಇಷ್ಟ ಪಡುವ ಬದಲು ಅವರಿಗೆ ಛೀಮಾರಿ ಹಾಕುತಿದ್ದಾರೆ.
ಪೋಸ್ ಕೊಡುವುದನ್ನು ಬಿಟ್ಟು ಸರಿಯಾಗಿ ಆಟವಾಡಿ ಎಂದು ಬುದ್ಧಿವಾದ ಹೇಳುತ್ತಿದ್ದಾರೆ
ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಮತ್ತು ಮಾಯಕ್ಕ ಅಗರ್ವಾಲ್ ಅವರಿಬ್ಬರೂ ತಮ್ಮ ತಮ್ಮ ಟ್ವಿಟರ್ನಲ್ಲಿ ತಮ್ಮ ಫೋಟೋವನ್ನು ಹಾಕಿದ್ದರು. ಅವರು ಹಾಕಿದ ಕೋಟೆಯಲ್ಲಿ ಅವರು ಹಾಕಿದ ಫೋಟೋದಲ್ಲಿ ಅವರ ಜೊತೆಗೆ ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಕೂಡ ಇದ್ದರು. ಇದನ್ನು ನೋಡಿ ಗರಂ ಆದ ಅಭಿಮಾನಿಗಳು ಅವರಿಗೆ ಬುದ್ಧಿವಾದ ಹೇಳಿದ್ದಾರೆ.
ಅವರು ಹಾಕಿದ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಅವರನ್ನು ಚೆನ್ನಾಗಿಯೇ ಬೆಂಡೆತ್ತಿದ್ದಾರೆ.
ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದೀರಿ ಈಗಲಾದರೂ ಎರಡನೇ ಪಂದ್ಯದಲ್ಲಿ ಸ್ವಲ್ಪ ಮ್ಯಾಚುರಿಟಿಯನ್ನು ತೋರಿಸಿ ಪಂದ್ಯವನ್ನು ಗೆಲ್ಲಿ ಎಂದು ಬುದ್ಧಿವಾದ ಹೇಳಿದ್ದಾರೆ. "ಮೊದಲು ಕ್ರಿಕೆಟ ಆಡಿ ಆಮೇಲೆ ಪೋಸ್ ಕೊಡಿ" ಎಂದು ಹೇಳುವ ಮೂಲಕ ನೆಟ್ಟಿಗರು ತಮ್ಮ ಕೋಪವನ್ನು ತೋರಿಸಿದ್ದಾರೆ.
ಇನ್ನೊಂದಿಷ್ಟು ಕ್ರಿಕೆಟ್ ಅಭಿಮಾನಿಗಳು ಮೊದಲೆಲ್ಲ 90ರ ದಶಕದಲ್ಲಿ ಆಟಗಾರರು ಕ್ರಿಕೆಟ್ ಪಿಚ್ ನಲ್ಲಿ ಪೋಸ್ ಕೊಡುತ್ತಿದ್ದರು.ಆದರೆ ಈಗಿನ ಆಟಗಾರರು ನೆಟ್ಟಿನಲ್ಲಿ ತಮ್ಮ ಪೋಸ್ ಕೊಡುತ್ತಿದ್ದಾರೆ ಎಂದು ಆಟಗಾರರನ್ನು ಕಿಚಾಯಿಸಿದರು.
ಇದನ್ನು ನೋಡಿಯಾದರೂ ಟೀಂ ಇಂಡಿಯಾ ಸುಧಾರಿಸುತ್ತಾ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುತ್ತಾ ಕಾದು ನೋಡೋಣ.
Tags:
ಕ್ರೀಡಾ ಸುದ್ದಿಗಳು