ಬೆಂಗಳೂರು: ನನಗೆ ಚಿಕನ್ ಪಾಪ್ ಕಾರ್ನ್ ಬೇಕು ಚಿತ್ರಾನ್ನ ಮತ್ತು ಉಪ್ಪಿಟ್ಟು ಬೇಡ ಎಂದು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿ ಪೊಲೀಸರ ಅತಿಥಿಯಾದ ಪಾಕ್ ಪ್ರೇಮಿ ಅಮೂಲ್ಯ ಪೊಲೀಸರ ಮುಂದೆ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ. ಈ ತರಹದ ಚಿತ್ರ ವಿಚಿತ್ರವಾದ ಬೇಡಿಕೆ ಕೇಳಿ ಪೊಲೀಸರು ಒಂದು ಕ್ಷಣ ನಿಬ್ಬೆರಗಾಗಿದ್ದಾರೆ.
ದೇಶದ್ರೋಹದ ಹೇಳಿಕೆಯನ್ನು ನೀಡಿ ಒಳಗಡೆ ಅಂದರ್ ಆಗಿರುವ ಪೊಲೀಸರು ಬಸವೇಶ್ವರ ನಗರ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಮಧ್ಯಾಹ್ನ ಅಮೂಲ್ಯಳಿಗೆ ಊಟಕ್ಕೆ ಚಪಾತಿ, ಅನ್ನ ಸಾಂಬಾರ್ ತಂದು ಕೊಡಲಾಗಿತ್ತು. ಅದನ್ನು ನೋಡಿದ ಅಮೂಲ್ಯ ನನಗೆ ಇದೆಲ್ಲ ಬೇಡ ನನಗೆ ಚಿಕನ್ ಪಾಪ್ಕಾರ್ನ್ ಅದೇ ಆಗಬೇಕು ಅಂತ ಹಠ ಹಿಡಿದಿದ್ದಾಳೆ. ನೀವು ತಂದು ಕೊಡುತ್ತಿರುವ ಇಲ್ಲವೋ ಇಲ್ಲ ಮಮ್ಮಿಗೆ ಹೇಳಿ ನಾನೇ ತರಿಸಿಕೊಳ್ಳೋಲೊ ಅಂತ ಹೇಳಿದ್ದಾಳೆ. ಕೊನೆಗೆ ಪೊಲೀಸರು ವಿಚಾರಣೆಯ ಅನಿವಾರ್ಯತೆಗಾಗಿ ಚಿಕನ್ ಪಾಪ್ ಕಾರ್ನ್ ತಂದು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಚಿಕನ್ ಪಾಪ್ ಕಾರ್ನ್ ತಂದುಕೊಟ್ಟ ಮೇಲೆಯೇ ಅಮೂಲ್ಯ ವಿಚಾರಣೆಗೆ ಸಹಕರಿಸಿದ್ದಾಳೆ ಎಂದು ಹೇಳಲಾಗಿದೆ. ವಿಚಾರಣೆ ನಡೆಸುವ ವೇಳೆ ಕೂಡ ಅಪ್ರಬ್ದುಳಂತೆ ವರ್ತಿಸುತ್ತಿದ್ದಾಳೆ ಎನ್ನಲಾಗಿದೆ.